Actress meena: ನಟಿ ಮೀನಾಳಿಗೆ ಮತ್ತೊಂದು ಶಾಕ್.. ಕೋಟ್ಯಾಂತರ ಆಸ್ತಿಯ ಒಂದು ಪಾಲನ್ನು ಸಹ ಪತ್ನಿಯ ಹೆಸರಿಗೆ ಬರೆದಿಲ್ಲ ಪತಿ.! ಇದೀಗ ಆಸ್ತಿಯ ಹಕ್ಕುದಾರರು ಯಾರು?

Actress meena: ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿಯನ್ನು ಹೊಂದಿದ್ದ ಮೀನಾ ಹಲವಾರು ಚಿತ್ರಗಳಲ್ಲಿ ಪುಟ್ಟ ಮುದ್ದು ಹುಡುಗಿಯಾಗಿ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆಯನ್ನು ಪಡೆದರು. ನಂತರ ಕನ್ನಡ ತೆಲುಗು ತಮಿಳು ಮಲಯಾಳಂ ಭಾಷೆಗಳಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶಗಳು ದೊರೆತು, ಟಾಪ್ ನಟಿಯರ ಸಾಲಿಗೆ ಸೇರಿ ಸಾಕಷ್ಟು ಅಭಿಮಾನಿಗಳನ್ನು, ಹೆಸರನ್ನು ಗಳಿಸಿದರು.

2009ರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ವಿದ್ಯಾಸಾಗರ್ ಎಂಬ ಆಗರ್ಭ ಶ್ರೀಮಂತನನ್ನು ವಿವಾಹವಾದರು. ಮೀನಾ ಹಾಗೂ ವಿದ್ಯಾಸಾಗರ್ ಇಬ್ಬರ ಪ್ರೀತಿಯ ಸಂಕೇತವಾಗಿ ಮುದ್ದು ಹೆಣ್ಣು ಮಗಳು ಜನಿಸಿ ಆಕೆಗೆ ನೈನಿಕಾ ಎಂಬ ಹೆಸರನ್ನು ಇಟ್ಟರು. ‘ತೇರಿ’ ಚಿತ್ರದಲ್ಲಿ ಬಾಲ ನಟಿಯಾಗಿ ನೈನಿಕಾ ಕಾಣಿಸಿಕೊಂಡು ತಾಯಿಯಂತೆಯೇ ತನ್ನ ಚಿಕ್ಕ ವಯಸ್ಸಿನಲ್ಲಿಯೇ ನಟನೆಗೆ ಮೆಚ್ಚುಗೆ ಪಡೆದಿದ್ದಾಳೆ.

ಭಯಬೀತ ಕರೋನಾ ಸಂದರ್ಭದಲ್ಲಿ ಈ ಕುಟುಂಬದ ಸದಸ್ಯರೆಲ್ಲರೂ ಕೋರೊನಾಕ್ಕೆ ಒಳಪಡುತ್ತಾರೆ. ಇದೆ ವೇಳೆಯಲ್ಲಿ ಮೀನಾ(Actress meena) ಹೊಸ ವರ್ಷಕ್ಕೆ ಅತಿಥಿಯಾಗಿ ಬಂದದ್ದು ಕರೋನ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ಮೀನಾ ಹಾಗೂ ನೈನಿಕಾ ಬೇಗನೆ ಚೇತರಿಸಿಕೊಳ್ಳುತ್ತಾರೆ ಆದರೆ ವಿದ್ಯಾಸಾಗರ್ ಶ್ವಾಸಕೋಶದ ಅಂಗಾಂಶಗಳು ಹಾನಿಗೊಳಗಾದ ಕಾರಣಕ್ಕಾಗಿ ಎಷ್ಟೇ ಪ್ರಯತ್ನ ಪಟ್ಟರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

Actress meena property details
Actress meena property details

ಪತಿಯ ಸಾವಿನಿಂದ ದುಃಖದಲ್ಲಿ ಮುಳುಗಿದ್ದ ಮೀನಾ(Actress meena) ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವದಂತಿಗಳು ಹಬ್ಬುತ್ತಲೇ ಇತ್ತು. ‘ನಾನು ತುಂಬಾ ದುಃಖದಲ್ಲಿ ಇದ್ದೇನೆ; ನನ್ನ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ’ ಎಂದು ಮೀನಾ ಅವರು ಮನವಿ ಮಾಡಿಕೊಂಡಿದ್ದರು ಕೂಡ ವದಂತಿಗಳು ಹಬ್ಬುತ್ತಲೇ ಇತ್ತು. ಆಸ್ತಿಯ ವಿಚಾರವಾಗಿ ಮೀನಾ ಅವರಿಗೆ ಏನೂ ದೊರಕಿಲ್ಲ ಎಂಬ ವದಂತಿಯು ಕೇಳಿ ಬರುತ್ತಿದೆ.

ಕೋಟ್ಯಂತರ ಆಸ್ತಿಯನ್ನು ಹೊಂದಿದ್ದ ವಿದ್ಯಾಸಾಗರ್ ಅವರು ಪತ್ನಿಯ(Actress meena) ಹೆಸರಿಗೆ ಸ್ವಲ್ಪ ಆಸ್ತಿಯನ್ನು ಕೂಡ ಬರೆದಿಲ್ಲ ಎಂಬುದು ಹರಡಿರುವ ಸುದ್ದಿ. ಅಲ್ಲದೆ ವಿದ್ಯಾಸಾಗರ್ ಅವರು ತಮ್ಮೆಲ್ಲ ಆಸ್ತಿಗಳನ್ನು ಮುದ್ದಿನ ಮಗಳಾದ ನೈನಿಕಾ ಹೆಸರಿಗೆ ಬರೆದಿಟ್ಟಿದ್ದಾರೆ. ಆಸ್ತಿ ಪತ್ರದಲ್ಲಿ ‘ನೈನಿಕಾಳಿಗೆ ವಯಸ್ಸಾದಾಗ ಆಕೆ ಮತ್ತು ಆಕೆಯ ಪತಿ ಸಂಪತ್ತುಗಳನ್ನು ನೋಡಿಕೊಳ್ಳುತ್ತಾರೆ; ಆದರೆ ನೈನಿಕಾ ಬೆಳೆದು ವ್ಯವಹಾರಗಳಲ್ಲಿ ತೊಡಗಿಕೊಳ್ಳುವವರೆಗೂ ಆಕೆಯ ಪೋಷಕರೇ ಆಸ್ತಿಯ ಜವಾಬ್ದಾರಿಯನ್ನು ಹೊತ್ತಿರಬೇಕು’ ಎಂಬ ಸಾಲುಗಳಿವೆಯಂತೆ. ಕೋಟಿಗಟ್ಟಲೆ ಬೆಲೆಬಾಳುವ ಆಸ್ತಿಯಲ್ಲಿ ಒಂದು ರೂಪಾಯಿಯನ್ನು ಮೀನಾ ಅವರಿಗೆ ಕೊಡದೆ ಅವರ ಪತಿ ಶಾಕ್ ನೀಡಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿವೆ. ಆದರೆ ಅಭಿಮಾನಿಗಳು ಇದನ್ನು ತಳ್ಳಿ ಹಾಕುತ್ತಿದ್ದಾರೆ. ಈ ಎಲ್ಲಾ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಿವೆಯೇ ಹೊರತು ಸತ್ಯಾಂಶ ಎಷ್ಟಿದೆ ಎಂಬುದು ತಿಳಿದಿಲ್ಲ.

Prem daughter: ನಿಮ್ಮ ಮಗಳಿಗೆ ಹೀರೋಯಿನ್ ಆಗುವ ಯೋಗ್ಯತೆ ಇದೆಯಾ ಎಂದು ಕೇಳಿದ ಪ್ರಶ್ನೆಗೆ ಪ್ರೇಮ್ ಕೊಟ್ಟ ಉತ್ತರ ಏನು ಗೊತ್ತಾ

Leave a Comment

error: Content is protected !!