ಕೊನೆಗೂ ಗೊತ್ತಾಯ್ತು ಪ್ರಭಾಸ್ ಪ್ರಿಯತಮೆ ಯಾರೆಂದು, ಅನುಷ್ಕಾ ಶೆಟ್ಟಿ ಅಲ್ಲ ಮತ್ತಿನ್ಯಾರು ಗೊತ್ತಾ?


ಬಾಹುಬಲಿ ಸರಣಿ ಚಿತ್ರಗಳ ಬಿಡುಗಡೆಗು ಮುನ್ನವೇ ತೆಲುಗು ಚಿತ್ರರಂಗದ ರೆಬೆಲ್ ಸ್ಟಾರ್ ಆಗಿರುವ ಪ್ರಭಾಸ್ ಹಾಗೂ ನಮ್ಮ ಕರ್ನಾಟಕ ಮೂಲದ ಹಾಗೂ ದಕ್ಷಿಣ ಭಾರತ ಚಿತ್ರರಂಗದ ಸ್ವೀಟಿ ಆಗಿರುವ ಅನುಷ್ಕಾ ಶೆಟ್ಟಿ ಅವರ ನಡುವೆ ಸ್ನೇಹಕ್ಕಿಂತಲೂ ಮಿಗಿಲಾದ ಸಂಬಂಧವಿದೆ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳಲು ಆರಂಭಿಸಿದ್ದರು. ಸಾಮಾನ್ಯವಾಗಿ ಸಿನಿಮಾರಂಗದ ಸೆಲೆಬ್ರಿಟಿಗಳ ನಡುವೆ ಇಂತಹ ಪ್ರೀತಿಯ ಸಂಬಂಧ ಇದ್ದರೂ ಕೂಡ ಅವರು ಎಲ್ಲಿಯೂ ಕೂಡ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಹೀಗಾಗಿ ಇಂತಹ ಸುದ್ದಿಗಳು ಕೇಳಿ ಬಂದಾಗಲೆಲ್ಲ ಇಬ್ಬರೂ ಕೂಡ ಈ ಸುದ್ದಿಯನ್ನು ತಿರಸ್ಕರಿಸುತ್ತಲೇ ಬಂದಿದ್ದರು.

ಇಬ್ಬರೂ ಕೂಡ ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂಬುದಾಗಿ ಮಾತನಾಡಿಕೊಳ್ಳುತ್ತಿದ್ದರು. ಆದರೆ ಇವರು ಒಬ್ಬರ ಜೊತೆಗೆ ಒಬ್ಬರು ನಡೆದುಕೊಳ್ಳುತ್ತಿದ್ದ ರೀತಿಯನ್ನು ನೋಡಿ ಇವರಿಬ್ಬರು ಪ್ರೇಮಿಗಳು ಅಲ್ಲ ಎಂದು ಯಾರಿಂದಲೂ ಕೂಡ ಹೇಳಿಕೊಳ್ಳಲು ಸಾಧ್ಯವಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿರುವ ಬೆಳವಣಿಗೆಗಳ ಮೂಲಕ ರೆಬೆಲ್ ಸ್ಟಾರ್ ಪ್ರಭಾಸ್ ರವರು ಪ್ರೀತಿಸುತ್ತಿರುವುದು ಅನುಷ್ಕಾ ಶೆಟ್ಟಿ ಅವರನ್ನಲ್ಲ ಬೇರೆ ಬಾಲಿವುಡ್ ನಟಿಯನ್ನು ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ.

ಹೌದು ಸದ್ಯಕ್ಕೆ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಚಿತ್ರೀಕರಣವನ್ನು ಮುಗಿಸಿಕೊಂಡು ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಈ ಹಿನ್ನೆಲೆಯಲ್ಲಿ ಈ ಚಿತ್ರದ ನಾಯಕಿಯಾಗಿರುವ ಕೃತಿ ಸನೋನ್ ಅವರ ಜೊತೆಗೆ ಪ್ರಭಾಸ್ ಅವರ ಲವ್ವಿ ಡಬ್ಬಿ ನಡೆಯುತ್ತಿದೆ ಎಂಬುದಾಗಿ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ ಇದಕ್ಕೆ ಒಂದು ನಿಜವಾದ ಕಾರಣ ಕೂಡ ಇದೆ.

ಹೌದು ಇತ್ತೀಚಿಗಷ್ಟೇ ಕೃತಿ ಸನೋನ್ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿಥ್ ಕರಣ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದರು. ಇದರಲ್ಲಿ ಸೆಲೆಬ್ರೆಟಿ ಸ್ನೇಹಿತರಿಗೆ ಕರೆಮಾಡುವ ಒಂದು ಟಾಸ್ಕ್ ಇದೆ. ಆ ಸಂದರ್ಭದಲ್ಲಿ ಕೃತಿ ಸನೊನ್ ಮೊದಲಿಗೆ ರೆಬೆಲ್ ಸ್ಟಾರ್ ಪ್ರಭಾಸ್ ಅವರಿಗೆ ಕರೆ ಮಾಡುತ್ತಾರೆ. ಈ ದೃಶ್ಯ ಪ್ರಸಾರ ಅದಾಗಿನಿಂದಲೂ ಕೂಡ ಪ್ರತಿಯೊಬ್ಬರೂ ಕೂಡ ಇವರಿಬ್ಬರ ನಡುವೆ ಪ್ರೀತಿ ಇದೆ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ.


Leave A Reply

Your email address will not be published.