ದ್ರುವ ಸರ್ಜಾ ಆರೋಗ್ಯಕ್ಕೆ ಎಫೆಕ್ಟ್, ಅಭಿಮಾನಿಗಳಿಗಾಗಿ ತಗೊಂಡ್ರ ಈ ರಿಸ್ಕ್?

Action Prince Dhruva Sarja: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇದಾಗಲೇ 12 ವರ್ಷಗಳು ಕಳೆದಿದ್ದು ಮಾಡಿರೋದು ಮಾತ್ರ ಕೇವಲ ನಾಲ್ಕು ಸಿನಿಮಾಗಳಷ್ಟೇ. ಹೀಗಿದ್ರೂ ಕೂಡ ಕನ್ನಡ ಚಿತ್ರರಂಗದ ಮೊದಲ ಶ್ರೇಣಿಯ ನಟರ ಪೈಕಿಯಲ್ಲಿ ಆಕ್ಷನ್ ಪ್ರಿನ್ಸ್(Action Prince) ಧ್ರುವ ಸರ್ಜಾ ಅವರು ಕೂಡ ಕಾಣಿಸಿಕೊಳ್ಳುತ್ತಾರೆ. ಅಷ್ಟೊಂದು ಚಿಕ್ಕ ಸಮಯದಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ ನಟ ಧ್ರುವ ಸರ್ಜಾ ಅವರು.

ಇನ್ನು ಇತ್ತೀಚಿನ ದಿನಗಳಲ್ಲಿ ಧ್ರುವ ಸರ್ಜಾ ಅವರು KD ಹಾಗೂ ಮಾರ್ಟಿನ್(Martin) ಸಿನಿಮಾಗಳಿಗಾಗಿ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಆದರೆ ಈ ಸಿನಿಮಗಳಿಗಾಗಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ತೆಗೆದುಕೊಳ್ಳುತ್ತಿರುವ ರಿಸ್ಕ್ ಬಗ್ಗೆ ಅವರ ಅಭಿಮಾನಿಗಳು ಹಾಗೂ ಆರೋಗ್ಯ ತಜ್ಞರು(Health Experts) ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದು ಇದರ ಹಿಂದಿನ ನಿಜವಾದ ಕಾರಣ ಏನೆಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೇ ಕೆ.ಡಿ. ಸಿನಿಮಾ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿದೆ. ಕೆ ವಿಎನ್ ಪ್ರೊಡಕ್ಷನ್ಸ್(Productions) ಸಂಸ್ಥೆ ಈ ಸಿನಿಮಾಗೆ ಬಂಡವಾಳವನ್ನು ಹೂಡಿದೆ. ಈ ಸಿನಿಮಾಗಾಗಿ ಭರ್ಜರಿ 18 ಕೆಜಿ ಯನ್ನು ಕೇವಲ 23 ದಿನಗಳಲ್ಲಿ ಕಡಿಮೆ ಮಾಡಿಕೊಂಡಿದ್ದಾರೆ ನಟ ಧ್ರುವ ಸರ್ಜಾ ರವರು. ಇಷ್ಟೊಂದು ತೂಕವನ್ನು ಕಡಿಮೆ ಮಾಡಿಕೊಂಡಿರುವುದು ಲಿಕ್ವಿಡ್ ಡಯಟ್(Liquid Diet) ಮೂಲಕ ಎಂಬುದಾಗಿ ತಿಳಿದು ಬಂದಿದೆ. ಪೊಗರು ಸಿನಿಮಾಗಾಗಿ ಕೂಡ 30 ಕೆಜಿ ತೂಕವನ್ನು ಧ್ರುವ ಸರ್ಜಾ ಅವರು ಇಳಿಸಿಕೊಂಡಿದ್ದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಹೌದು ಗೆಳೆಯರೇ, ಆರೋಗ್ಯ ತಜ್ಞರನ್ನು ಕೇಳುವುದಾದರೆ ಇಷ್ಟೊಂದು ಕಡಿಮೆ ಸಮಯದಲ್ಲಿ ಇಷ್ಟೊಂದು ತೂಕವನ್ನು ಇಳಿಸುವುದು ಆರೋಗ್ಯದ ಮೇಲೆ ವಿಪರೀತ ಪರಿಣಾಮವನ್ನು(Negative Effects) ಬೀರುವಂತಹ ಸಾಧ್ಯತೆ ಹೆಚ್ಚಾಗಿದೆ ಹೀಗಾಗಿ ಇದು ಆರೋಗ್ಯಕ್ಕೆ ಹಾನಿಕಾರಕ ಎಂಬುದಾಗಿ ಹೇಳುತ್ತಾರೆ. ಇದನ್ನು ಕೇಳಿದ ನಂತರ ಅವರ ಅಭಿಮಾನಿಗಳು ಕೂಡ ಬಾಸ್ ಹೀಗೆ ಮಾಡುವುದಕ್ಕೆ ಹೋಗಬೇಡಿ ಎಂಬುದಾಗಿ ಕಣ್ಣೀರು ಹಾಕುತ್ತಿದ್ದಾರೆ.

 ಇದನ್ನೂ ಓದಿ..ವಸಿಷ್ಟ ಸಿಂಹ ಹಾಗೂ ಹರಿಪ್ರಿಯ ಮದುವೆ ಕಾರ್ಡ್ ಹೇಗಿದೆ ಗೊತ್ತಾ?

ಈ ರೀತಿ ದೇಹವನ್ನು ದಂಡನೆ ಮಾಡುವುದು ಪ್ರಾಣಕ್ಕೆ ಕೂಡ ಆಪತ್ತನ್ನು ತರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಿನಿಮಾದ ಒತ್ತಡಕ್ಕಾಗಿ ಧ್ರುವ ಸರ್ಜಾ ಅವರು ಈ ರೀತಿ ಮಾಡುವುದು ಸರಿಯಲ್ಲ ಎಂಬುದೇ ಎಲ್ಲರ ಅಭಿಪ್ರಾಯವಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!