ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರು ಸಿನಿಮಾ ರಂಗದಲ್ಲಿ ತಮ್ಮ ಗುರುತನ್ನು ದೊಡ್ಡಮಟ್ಟದಲ್ಲಿ ಸ್ಥಾಪಿಸುತ್ತಿರುವ ಬೆನ್ನಲ್ಲೇ ಈಗ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಕೂಡ ಸಜ್ಜಾಗಿ ನಿಂತಿದ್ದಾರೆ ಎಂಬುದಾಗಿ ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. ಹೌದು ಮಿತ್ರರೇ, ಅಭಿಷೇಕ್ ಅಂಬರೀಶ್ ಅವರು ಎಂಗೇಜ್ಮೆಂಟ್ ಆಗುವುದಕ್ಕೆ ಸಿದ್ಧರಾಗಿ ನಿಂತಿದ್ದಾರೆ ಎಂಬುದು ಕನ್ಫರ್ಮ್ ಆಗಿದೆ.
ಕನ್ನಡ ಚಿತ್ರರಂಗದ ಖ್ಯಾತ ನಟ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ನಟಿ ಸುಮಲತಾ ಅಂಬರೀಶ್ ಅವರ ಸುಪುತ್ರ ಆಗಿರುವ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರು ಫ್ಯಾಷನ್ ಲೋಕದ ಖ್ಯಾತನಾಮ ಹೆಸರಾಗಿರುವ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಆಗಿರುವ ಅವಿವಾ ಬಿದ್ದಪ್ಪ ಅವರನ್ನು ಮದುವೆಯಾಗಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಇಬ್ಬರ ನಿಶ್ಚಿತಾರ್ಥ ಸಮಾರಂಭದ ಕುರಿತಂತೆ ಈಗ ಮಾಹಿತಿಗಳು ಅಧಿಕೃತ ಮೂಲಗಳಿಂದ ಹೊರಬಂದಿದ್ದು ಡಿಸೆಂಬರ್ ನ ಎರಡನೇ ವಾರದಲ್ಲಿ ಪ್ಯಾಲೇಸ್ ಗ್ರೌಂಡ್ ನಲ್ಲಿ ಸಿನಿಮಾ ರಂಗ ರಾಜಕೀಯ ರಂಗ ಸೇರಿದಂತೆ ಹಲವಾರು ಕ್ಷೇತ್ರಗಳ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಈ ಸಂತೋಷದ ಕಾರ್ಯಕ್ರಮ ನಡೆಯಲಿದೆ ಎಂಬುದಾಗಿ ತಿಳಿದುಬಂದಿದೆ. ಇನ್ನು ಅವಿವಾ ಬಿದ್ದಪ್ಪ ಕೂಡ ಮಾಡಲಿಂಗ್ ಕ್ಷೇತ್ರದಲ್ಲಿ ತಮ್ಮದೇ ಆದಂತಹ ಹೆಸರನ್ನು ಸ್ಥಾಪಿಸಿದ್ದಾರೆ ಎಂಬುದಾಗಿ ಕೂಡ ಈಗ ತಿಳಿದು ಬರುತ್ತಿದೆ. ಇದುವರೆಗೂ ಕೂಡ ಅಭಿಷೇಕ್ ಅಂಬರೀಶ್ ಅವರು ಯಾರನ್ನು ಮದುವೆಯಾಗುತ್ತಾರೆ ಎಂಬುದಾಗಿ ಬಿಟ್ಟು ಕೊಟ್ಟಿರಲಿಲ್ಲ ಈಗ ನಿಶ್ಚಿತಾರ್ಥಕ್ಕೆ ಸಮೀಪಿಸುತ್ತಿದ್ದಂತೆ ಒಂದೊಂದೇ ವಿಚಾರಗಳು ಹೊರ ಬರುತ್ತಿವೆ.
ಸದ್ಯಕ್ಕೆ ನಿಶ್ಚಿತಾರ್ಥದ ಮುಹೂರ್ತ ದಿನಾಂಕ ಹಾಗೂ ಸ್ಥಳದ ಡೀಟೇಲ್ಸ್ ಹೊರಗೆ ಬಂದಿದ್ದು ಮದುವೆ ದಿನಾಂಕ ಇನ್ನೂ ಕೂಡ ನಿಗದಿಯಾಗಿಲ್ಲ ಎಂಬುದಾಗಿ ತಿಳಿದು ಬಂದಿದೆ. ಅದೇನೆ ಇರಲಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ಅಭಿಷೇಕ್ ಅಂಬರೀಶ್ ಅವರು ಜೀವನದಲ್ಲಿ ಮದುವೆಯಾಗಿ ಸೆಟಲ್ ಆಗುವ ನಿರ್ಧಾರವನ್ನು ತೆಗೆದುಕೊಂಡಿದ್ದು ಅವರ ಅಭಿಮಾನಿಗಳಿಗೆ ಹಾಗೂ ರೆಬೆಲ್ ಸ್ಟಾರ್ ಅವರ ಅಭಿಮಾನಿಗಳಿಗೆ ಸಂತೋಷವನ್ನು ತರಿಸಿದೆ ಎಂದು ಹೇಳಬಹುದಾಗಿದೆ.