ಸದ್ದಿಲ್ಲದೇ ದೇವಸ್ಥಾನಕ್ಕೆ ಹೋಗಿ ಮುಹೂರ್ತ ಮಾಡಿಕೊಂಡ ಅಭಿಷೇಕ್ ಅಂಬರೀಶ್ ಮತ್ತು ಸಪ್ತಮಿ ಗೌಡ

ಯಾರಿಗೂ ತಿಳಿಯದ ಹಾಗೆ ದೇವಸ್ಥಾನದಲ್ಲಿ ಎಲ್ಲಾ ಮುಗಿಸಿಕೊಂಡ ಅಭಿಷೇಕ್ ಅಂಬರೀಶ್ ಹಾಗೂ ಕಾಂತಾರ ಖ್ಯಾತಿಯ ಸಪ್ತಮಿ ಗೌಡ!..ಕಾಂತರಾ ಸಿನಿಮಾ ಯಾವ ರೀತಿಯಲ್ಲಿ ದೇಶ ವಿದೇಶಗಳಲ್ಲಿ ದೊಡ್ಡಮಟ್ಟದ ಸದ್ದು ಮಾಡಿದೆ ಎಂಬುದನ್ನು ನಿಮಗೆ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ಇನ್ನು ಈ ಚಿತ್ರದಲ್ಲಿ ನಾಯಕನಟಿ ಲೀಲಾ ಪಾತ್ರದಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಖ್ಯಾತ ಪೊಲೀಸ್ ಅಧಿಕಾರಿ ಉಮೇಶ್ ಅವರ ಮಗಳಾಗಿರುವ ಸಪ್ತಮಿ ಗೌಡ ಅವರು ಕಾಣಿಸಿಕೊಂಡಿದ್ದರು.

Abhishek ambareesh and sapthami gowda are getting married?

ಕಾಂತಾರ ಸಿನಿಮಾ ಎನ್ನುವುದು ಸಪ್ತಮಿ ಗೌಡ ಅವರಿಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಹಾಗೂ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯನ್ನು ತಂದು ಕೊಟ್ಟಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಕಾಂತಾರ ಸಿನಿಮಾ ಗಿಂತಲೂ ಮೊದಲೇ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು ಕೂಡ ಸಪ್ತಮಿ ಗೌಡ ಅವರಿಗೆ ಯಾವುದೇ ಸಿನಿಮಾಗಳು ಅಷ್ಟೊಂದು ಜನಪ್ರಿಯತೆಯನ್ನು ತಂದು ಕೊಡಲಿಲ್ಲ. ಆದರೆ ಕಾಂತಾರ ಮಾತ್ರ ಆ ಕನಸು ಮನಸ್ಸಿನಲ್ಲಿಯೂ ಕೂಡ ಎಣಿಸಿಕೊಳ್ಳದ ಹಾಗೆ ದೊಡ್ಡ ಗೆಲುವನ್ನು ಅವರಿಗೆ ತಂದುಕೊಟ್ಟಿದೆ.

Abhishek aambareesh and sapthami gowda
Abhishek aambareesh and sapthami gowda

ಹೌದು ಮಿತ್ರರೇ, ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಾಯಕ ನಟನಾಗಿ ಹಾಗೂ ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಂಡಿರುವ ಹೊಸ ಸಿನಿಮಾ ಕಾಳಿ ಸಿನಿಮಾದ ಮುಹೂರ್ತ ಪೂಜೆ ಬೆಂಗಳೂರಿನ ದೇವಸ್ಥಾನ ಒಂದರಲ್ಲಿ ಸೈಲೆಂಟ್ ಆಗಿಯೇ ಯಾರಿಗೂ ತಿಳಿಯದಂತೆ ನಡೆದಿದೆ. ಅಭಿಷೇಕ್ ಅಂಬರೀಶ್ ಮತ್ತು ಸಪ್ತಮಿ ಗೌಡ ಅವರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಎಲ್ಲರೂ ಕೂಡ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಹಲವಾರು ಜನ ಅಭಿಷೇಕ್ ಅಂಬರೀಶ್ ಮತ್ತು ಸಪ್ತಮಿ ಗೌಡ ಅವರ ಮದುವೆಯಾಗಿದ್ದಾರೆ ಎಂದು ನಂಬಿಕೊಂಡಿದ್ದಾರೆ ಈ ಫೋಟೋವನ್ನು ಒಮ್ಮೆಲೇ ನೋಡಿದಾಗ ನಮಗೆಲ್ಲಾ ಹಾಗೆ ಅನಿಸುತ್ತೆ ಆದರೆ ಅಭಿಷೇಕ ಅಂಬರೀಶ್ ಮತ್ತು ಸಪ್ತಮಿ ಗೌಡ ಅವರು ಮದುವೆಯಾಗುತ್ತಿಲ್ಲ ಇದು ಕೇವಲ ದೇವಸ್ಥಾನದಲ್ಲಿ ಸಿನಿಮಾ ಮುಹೂರ್ತಕ್ಕೆಂದು ತೆಗೆದ ಫೋಟೋ ಆಗಿದೆ..

ಹಾಗೆ ಇತ್ತೀಚಿಗೆ ಅಭಿಷೇಕ ಅಂಬರೀಶ್ ಅವರು ತಾನ್ಯ ಜೊತೆ ಮದುವೆಯಾಗುತ್ತಾರೆ ಎಂಬ ಸುದ್ದಿ ಕೂಡ ಹರಿದಾಡುತ್ತು. ಅಭಿಷೇಕ್ ಅಂಬರೀಶ್ ಅವರ ತಮ್ಮ ಮೊದಲನೆಯ ಚಿತ್ರದ ನಟಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಮತ್ತು ಇವರು ತಮ್ಮ ಸೊಸೆಯಾಗಲಿದ್ದಾರೆ ಎಂದು ಸುಮಲತಾ ಅವರು ಹೇಳಿದ್ದಾರೆ ಎಂದು ಕೂಡ ಸುದ್ದಿಯಾಗಿತ್ತು ಆದರೆ ಇವೆಲ್ಲ ಬರಿ ಸುಳ್ಳು ಸುದ್ದಿಗಳು ಅಭಿಷೇಕ ಅಂಬರೀಶ್ ಅವರು ಮದುವೆಯ ಬಗ್ಗೆ ಇಲ್ಲಿಯವರೆಗೂ ಅಧಿಕೃತವಾಗಿ ಮಾಹಿತಿ ಹೊರಬಂದಿಲ್ಲ ಇನ್ನೇನು ಮುಂದಿನ ವರ್ಷದಲ್ಲಿ ಅಭಿಷೇಕ ಅಂಬರೀಶ್ ಅವರ ಎಂಗೇಜ್ಮೆಂಟ್ ಮಾಡುವ ಯೋಜನೆ ಸುಮಲತಾ ಅವರಿಗೆ ಇದೆ ಎಂಬ ಸುದ್ದಿ ಕೇಳಿ ಬರುತ್ತಿದ್ದು ಅಧಿಕೃತ ಮಾಹಿತಿ ಎಲ್ಲಿಯೂ ತಿಳಿದುಬಂದಿಲ್ಲ..

Leave a Comment

error: Content is protected !!