Sandalwood: 2022 ರಲ್ಲಿ ಮದುವೆಯಾದ ಸೆಲೆಬ್ರಿಟಿಗಳು ಇವರೇ ನೋಡಿ.

Kannada Film Industry ಕಳೆದ ವರ್ಷ ಎಂದರೆ 2022 ರಲ್ಲಿ ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಕನ್ನಡ ಮೂಲದ ಕಲಾವಿದರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ. ನಟಿ ಅದಿತಿ ಪ್ರಭುದೇವ ಅವರು ತಮ್ಮ ಬಹುಕಾಲದ ಗೆಳೆಯ ಯಶಸ್ ನವರನ್ನು ಕುಟುಂಬಸ್ಥರ(Family) ಸಮ್ಮುಖದಲ್ಲಿ ಕಳೆದ ವರ್ಷದ ಡಿಸೆಂಬರ್ 28 ರಂದು ಮದುವೆಯಾಗುತ್ತಾರೆ. ಬಿಗ್ ಬಾಸ್ ಖ್ಯಾತಿಯ ಶುಭಪುಂಜ ಅವರು ತಮ್ಮ ಬಹುಕಾಲದ ಗೆಳೆಯ ಸುಮಂತ ಮಹಾಬಲ ಅವರ ಜೊತೆಗೆ ಸರಳವಾಗಿ ತಮ್ಮ ಊರಿನಲ್ಲಿಯೇ ಕಳೆದ ವರ್ಷದ ಜನವರಿ 5ರಂದು ಮದುವೆಯಾಗುತ್ತಾರೆ.

ಕ್ರೇಜಿಸ್ಟಾರ್(Crazy Star) ರವಿಚಂದ್ರನ್ ಅವರ ಮಗ ಮನೋರಂಜನ್ ರವಿಚಂದ್ರನ್ ಅವರು ಕಳೆದ ವರ್ಷದ ಆಗಸ್ಟ್ ನಲ್ಲಿ ಸಂಗೀತ ಎನ್ನುವವರನ್ನು ಮದುವೆಯಾಗುತ್ತಾರೆ. ಕಿರುತೆರೆ ಹಾಗೂ ಸಿನಿಮಾರಂಗಗಳಲ್ಲಿ ನಟಿಸಿರುವಂತಹ ತೇಜಸ್ವಿನಿ ಪ್ರಕಾಶ್ ಅವರು ಫಲಿ ವರ್ಮಾ ನದೀಮ್ ಪಳ್ಳಿ ಎನ್ನುವವರನ್ನು ಕಳೆದ ವರ್ಷದ ಮಾರ್ಚ್ 20ರಂದು ಮದುವೆಯಾಗುತ್ತಾರೆ. ಲಕ್ಷ್ಮೀ ಬಾರಮ್ಮ ಖ್ಯಾತಿಯ ರಶ್ಮಿ ಪ್ರಭಾಕರ್ ರವರು ಏಪ್ರಿಲ್ 25ರಂದು ನಿಖಿಲ್ ಎನ್ನುವವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.

ಲವ್ ಮಾಕ್ಟೇಲ್ ಸಿನಿಮಾದಲ್ಲಿ ನಟಿಸಿದ ಸುಶ್ಮಿತಾ ಗೌಡ ಅವರು ಅರ್ಜುನ್ ಗೌಡ ಎನ್ನುವವರನ್ನು ಕಳೆದ ವರ್ಷ ಮದುವೆಯಾಗಿದ್ದಾರೆ. ಸಂಜನ ಗಲ್ರಾಣಿ ಅವರ ಸಹೋದರಿಯಾಗಿರುವ ನಿಖಿಗಳ್ರಾಣಿ ಅವರು ತೆಲುಗಿನ ಖ್ಯಾತ ನಟ ಆದಿ ಪಿನಿ ಶೆಟ್ಟಿಯವರನ್ನು ಮದುವೆಯಾಗಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಶಶಿಕುಮಾರ್ ಕಳೆದ ವರ್ಷ ಸ್ವಾತಿ ಎನ್ನುವರನ್ನು ಅರೆಂಜ್ ಮ್ಯಾರೇಜ್(Arrange Marriage) ಆಗಿರುತ್ತಾರೆ. ನಟ ಸುನಿಲ್ ಪುರಾಣಿ ಅವರ ಮಗ ಸಾಗರ್ ಪುರಾಣಿಕ ಅವರು ನಟಿ ದೀಪ ಅವರನ್ನು ಪ್ರೀತಿಸಿ ಕಳೆದ ವರ್ಷದ ಮೇ 18ರಂದು ಮದುವೆಯಾಗಿರುತ್ತಾರೆ.

ಐಶ್ವರ್ಯ ಸಾಲಿಮಠ ಅವರು ನಟ ವಿನಯ್ ಅವರನ್ನು ಪ್ರೀತಿಸಿ ಕುಟುಂಬಸ್ಥರ ಸಮ್ಮುಖದಲ್ಲಿ ಕಳೆದ ವರ್ಷದ ಮೇ ತಿಂಗಳಿನಲ್ಲಿ ಮದುವೆಯಾಗಿದ್ದಾರೆ. ಇವರೇ ಗೆಳೆಯರೇ ಕಳೆದ ವರ್ಷ ಅಂದರೆ 2022 ರಲ್ಲಿ ಮದುವೆಯಾಗಿರುವ ಕನ್ನಡದ ಸೆಲೆಬ್ರಿಟಿಗಳು(Celebrities). ಇವರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!