ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿರುವ ನರೇಶ್ ಬಾಬು ಹಾಗೂ ಕನ್ನಡತಿ ಪವಿತ್ರ ಲೋಕೇಶ್ ಅವರ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿದೆ. ಸದ್ಯ ನರೇಶ ಅವರ ಸಂಸಾರದ ಗುಟ್ಟು ರಟ್ಟಾಗಿದ್ದು ಮಾತ್ರವಲ್ಲದೆ ಮಾಧ್ಯಮದ ಮುಂದೆ ಅವರ ಪತ್ನಿ ಸಾಕಷ್ಟು ಹೇಳಿಕೆಗಳನ್ನು ನೀಡಿದ್ದಾರೆ. ಇದೀಗ ತೆರೆಯ ಮೇಲೆ ಪವಿತ್ರ ಲೋಕೇಶ್ ಹಾಗೂ ನರೇಶ್ ಅವರನ್ನು ನೋಡಿ ಜನ ನಕ್ಕಿದ್ದು ನಕ್ಕಿದ್ದೆ! ಯಾಕೆ ಅಂತೀರಾ ಬನ್ನಿ ಕಾರಣ ಹೇಳ್ತೀವಿ.

ನರೇಶ್ ಬಾಬು ಅವರು ಆಗರ್ಭ ಶ್ರೀಮಂತರು ಅನ್ನೋದು ಎಲ್ಲರಿಗೂ ಗೊತ್ತು ಜೊತೆಗೆ ಅವರು ಟಾಲಿವುಡ್ ಫೇಮಸ್ ನಟ ಕೂಡ. ಒಂದು ಕಾಲದಲ್ಲಿ ಟಾಲಿವುಡ್ ನ ಆಳಿದ ಕೃಷ್ಣ ಅವರ ಮಲ ಮಗ ನರೇಶ್ ಬಾಬು. ನರೇಶ್ ಬಾಬು ಈಗಾಗಲೇ ಮೂರು ಮದುವೆಯಾಗಿದ್ದಾರೆ ಇದೀಗ ಮತ್ತೊಂದು ಮದುವೆಯಾಗಲು ಹೊರಟಿದ್ದಾರೆ ಅವರೇ ನಟಿ ಪವಿತ್ರ ಲೋಕೇಶ್.

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿ ಪವಿತ್ರ ಲೋಕೇಶ್ ತೆಲುಗು ಚಿತ್ರರಂಗದಲ್ಲಿಯೂ ಕೂಡ ಸಕ್ರಿಯವಾಗಿರುವ ನಟಿ ಅಲ್ಲದೆ ಈಗಲೂ ಬಹು ಬೇಡಿಕೆಯ ಪೋಷಕ ನಟಿಯು ಕೂಡ ಹೌದು. ಕನ್ನಡದಲ್ಲಿಯೂ ಸದ್ಯ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಪವಿತ್ರ ಲೋಕೇಶ್ ಅವರ ನಟನೆಯ ತೆಲುಗು ಸಿನಿಮಾ ಒಂದು ಇತ್ತೀಚಿಗೆ ಬಿಡುಗಡೆ ಕಂಡಿದೆ. ಈ ಸಿನಿಮಾದಲ್ಲಿ ನರೇಶ್ ಹಾಗೂ ಪವಿತ್ರ ಲೋಕೇಶ್ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ನೀವು ಅಂದುಕೊಂಡ ಹಾಗೆ ಪ್ರೇಮಿಗಳಾಗಿಯೂ ಗಂಡ ಹೆಂಡತಿಯಾಗಿಯೋ ಅಲ್ಲ!

ಹೌದು, ತೆಲುಗು ಸೂಪರ್ ಸ್ಟಾರ್ ನಟ ರವಿತೇಜ ಅಭಿನಯದ ‘ರಾಮ್ ರಾವ್ ಆನ್ ಡ್ಯೂಟಿ’ ಚಿತ್ರ ಈಗಾಗಲೇ ತೆರೆ ಕಂಡಿದೆ ಈ ಚಿತ್ರದಲ್ಲಿ ಪವಿತ್ರ ಲೋಕೇಶ್ ಅವರು ನಟಿಸಿದ್ದಾರೆ. ಇದನ್ನು ನೋಡಿ ಜನ ಬಿದ್ದು ಬಿದ್ದು ನಕ್ಕಿದ್ದಾರೆ ಇದಕ್ಕೆ ಕಾರಣ ಏನು ಗೊತ್ತಾ? ನಿಜ ಜೀವನದಲ್ಲಿ ಮೊದಲು ಸ್ನೇಹಿತರು ಎಂದು ಹೇಳಿಕೊಂಡಿದ್ದ ನರೇಶ್ ಹಾಗೂ ಪವಿತ್ರ ಲೋಕೇಶ್ ಈಗ ಜೊತೆಯಾಗಿಯೇ ಜೀವನ ನಡೆಸುತ್ತಿದ್ದಾರೆ. ಇನ್ನೇನು ಮದುವೆಯನ್ನು ಆಗಬಹುದು ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಆದರೆ ಈ ಸಿನಿಮಾದಲ್ಲಿ ಮಾತ್ರ ನರೇಶ್ ಹಾಗೂ ಪವಿತ್ರ ಲೋಕೇಶ್ ಅವರು ಅಣ್ಣ ತಂಗಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹೌದು ಹೀರೋ ತಾಯಿಯಾಗಿ ಪವಿತ್ರ ಲೋಕೇಶ್ ಹಾಗೂ ನಾಯಕಿಯ ತಂದೆಯಾಗಿ ನರೇಶ್ ನಟಿಸಿದ್ದಾರೆ. ನರೇಶ್ ಹಾಗೂ ಪವಿತ್ರ ಲೋಕೇಶ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಂತೆ ಜನರ ರಿಯಾಕ್ಷನ್ ಬದಲಾಗಿದೆ. ನಿಜ ಜೀವನದಲ್ಲಿ ಒಂದು ಪಾತ್ರ ತೆರೆಯ ಮೇಲೆ ಇನ್ನೊಂದು ಪಾತ್ರ ಅಂತ ಜನ ಗೇಲಿ ಮಾಡುತ್ತಿದ್ದಾರೆ. ಹಾಗಾಗಿ ರವಿತೇಜ ಅಭಿನಯದ ಈ ಸಿನಿಮಾ ಅಷ್ಟರಮಟ್ಟಿಗೆ ಸಕ್ಸಸ್ ಕಾಣದೆ ಇದ್ರೆ ಅದಕ್ಕೆ ನರೇಶ್ ಹಾಗೂ ಪವಿತ್ರ ಸಂಬಂಧ ಕೂಡ ಒಂದು ಕಾರಣ ಎನ್ನಬಹುದು.

By admin

Leave a Reply

Your email address will not be published.