ದಯವಿಟ್ಟು ಶೇರ್ ಮಾಡಿ ಗೆಳೆಯರೇ

ಸಾಮಾನ್ಯವಾಗಿ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಚಿತ್ರರಂಗದ ಕಲಾವಿದರ ನಡುವೆ ಎಲ್ಲವೂ ಸರಿ ಇಲ್ಲ ಎಂಬಂತೆ ಕೆಲವೊಂದು ಸುದ್ದಿಗಳು ಹರಿದಾಡುವುದು ಸರ್ವೇಸಾಮಾನ್ಯವಾಗಿದೆ. ಅದೇ ರೀತಿ ಒಂದು ಕಾಲದಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರ ನಡುವೆ ಎಲ್ಲವೂ ಸರಿ ಇಲ್ಲ ಎಂಬುದಾಗಿ ಸುದ್ದಿ ಆಗಿತ್ತು. ನಂತರ ಆ ವಿಚಾರ ನಿಜಕ್ಕೂ ಕೂಡ ನಿಜವಾದ ಸುದ್ದಿ ಆಗಿತ್ತು.

ಇನ್ನು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಹಾಗೂ ದರ್ಶನ್ ಅವರ ನಡುವೆ ಎಲ್ಲವೂ ಸರಿ ಇಲ್ಲ ಕೇವಲ ಕ್ಯಾಮರಾ ಮುಂದೆ ಮಾತ್ರ ಚೆನ್ನಾಗಿ ಇದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು. ಚಿತ್ರರಂಗದ ಜೋಡಿ ಎತ್ತು ಎಂಬುದಾಗಿ ಕರೆಸಿಕೊಳ್ಳುವ ಇವರಿಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಎಂಬುದಾಗಿ ಸೋಶಿಯಲ್ ಮೀಡಿಯಾ ಗಳಲ್ಲಿ ಕೂಡ ಸುದ್ದಿ ವೈರಲ್ ಆಗಿತ್ತು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇಬ್ಬರು ಕೂಡ ಈ ವಿಚಾರವನ್ನು ಸುಳ್ಳು ಎಂದು ದೃಢಪಡಿಸುವ ಹಾಗೆ ಹಲವಾರು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಯಶ್ ಅವರು ದರ್ಶನ್ ಅವರನ್ನು ದರ್ಶನ್ ಸರ್ ಎಂಬುದಾಗಿ ಕರೆದರೆ ದರ್ಶನ್ ಅವರು ಯಶ್ ಅವರನ್ನು ನಮ್ಮ ಹೀರೋ ಎಂಬುದಾಗಿ ಕರೆಯುತ್ತಿದ್ದರು. ಇವರಿಬ್ಬರ ಸ್ನೇಹಕ್ಕೆ ಈಗ ಮತ್ತೊಂದು ಉದಾಹರಣೆ ನೀಡಬಹುದಾಗಿದೆ.

ಇತ್ತೀಚಿಗಷ್ಟೇ ಒಂದೇ ಸಮಾರಂಭಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರು ಹಾಗೂ ಡಿ ಬಾಸ್ ಕೂಡ ಬೇರೆ ಬೇರೆಯಾಗಿ ಹೋಗಿದ್ದರು. ಈ ಸಮಯದಲ್ಲಿ ದರ್ಶನ್ ಅವರನ್ನು ಕಂಡ ಕೂಡಲೇ ಯಶ್ ಅವರು ಹೋಗಿ ದರ್ಶನ ಅವರನ್ನು ತಬ್ಬಿಕೊಂಡರು. ಇಬ್ಬರೂ ಕೂಡ ಸ್ನೇಹ ಭಾವದಿಂದ ತಬ್ಬಿ ಕೊಂಡಿರುವ ಸಮಾರಂಭದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಇವರಿಬ್ಬರ ನಡುವಿನ ಸ್ನೇಹ ಭಾವ ಎಷ್ಟರ ಮಟ್ಟಿಗೆ ಇದೆ ಎಂಬುದು ಈ ವಿಡಿಯೋ ತಿಳಿಸಿಕೊಡುತ್ತದೆ.

By admin

Leave a Reply

Your email address will not be published.