Shani Temple: ವಿ ವಿ ಪುರಂ ನಲ್ಲಿರುವ ಈ ಶನಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿದರೆ ಸಕಲ ಕಷ್ಟಗಳು ಪರಿಹಾರವಾಗುತ್ತವೆ!

VV Puram Shani Temple ಪುರಾಣ ಶಾಸ್ತ್ರಗಳ(Ancient Mythology) ಪ್ರಕಾರ ಶನಿಮಹಾತ್ಮನನ್ನು ನಾವು ಕರ್ಮದಾತ ಎನ್ನುವುದಾಗಿ ಕರೆಯಲಾಗುತ್ತದೆ. ಪ್ರತಿಯೊಬ್ಬರ ಕರ್ಮಕ್ಕೆ ಅನುಸಾರವಾಗಿ ಶುಭ ಹಾಗು ಅಶುಭ ಫಲಗಳನ್ನು ಶನಿ ಪರಮಾತ್ಮ(Shani Paramathma) ಕರುಣಿಸುತ್ತಾನೆ ಎಂಬುದಾಗಿ ಅರ್ಥೈಸಿಕೊಳ್ಳಬಹುದಾಗಿದೆ. ಇನ್ನು ಕೆಲವರು ಶನಿ ಪರಮಾತ್ಮ ಕೇವಲ ನಮಗೆ ಗ್ರಹಚಾರ ನೀಡಲು ಇದ್ದಾನೆ ಎಂಬುದಾಗಿ ತಪ್ಪಾಗಿ ಭಾವಿಸಿರುತ್ತಾರೆ ಆದರೆ ಶನಿಪರಮಾತ್ಮ ತನ್ನ ಭಕ್ತರಿಗೆ ಆಶೀರ್ವಾದವನ್ನು ಕೂಡ ಮಾಡುತ್ತಾನೆ ಎಂಬುದು ಎಲ್ಲರೂ ತಿಳಿದುಕೊಳ್ಳಬೇಕಾಗಿರುವ ವಿಚಾರ.

ಆದರೆ ಶನಿ(Shani) ಪರಮಾತ್ಮನ ಆಶೀರ್ವಾದವನ್ನು ಪಡೆಯುವುದು ಅಷ್ಟೊಂದು ಸುಲಭವಲ್ಲ ಯಾಕೆಂದರೆ ಅದು ಭಕ್ತರ ಭಕ್ತಿಯ ಮೇಲೆ ಹಾಗೂ ಕೆಲಸದ ಮೇಲೆ ಆಧಾರಿತವಾಗಿರುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯ ಫಲವನ್ನು ಶನಿಪರಮಾತ್ಮ ಯಾವುದೇ ಅನುಮಾನವಿಲ್ಲದೆ ಕರುಣಿಸುತ್ತಾನೆ ಎಂಬುದು ಈಗಾಗಲೇ ಹಲವಾರು ಬಾರಿ ಸಾಬೀತಾಗಿದೆ.

ಇನ್ನು ಬೆಂಗಳೂರು ಎಂದಾಕ್ಷಣ ಅದರಲ್ಲಿಯೂ ವಿವಿ ಪುರಂ(VV Puram ) ಎಂದಾಕ್ಷಣ ಮೊದಲಿಗೆ ನಿಮಗೆ ನೆನಪಿಗೆ ಬರುವುದು ಅಲ್ಲಿನ ಫುಡ್ ಸ್ಟ್ರೀಟ್. ಆದರೆ ಅಲ್ಲಿ ಎಲ್ಲರೂ ನಂಬುವಂತಹ ಶನಿಮಹಾತ್ಮನ ದೇವಸ್ಥಾನ ಕೂಡ ಇದೆ ಎಂಬುದನ್ನು ಪ್ರತಿಯೊಬ್ಬರು ನೆನಪು ಮಾಡಿಕೊಳ್ಳಬೇಕಾಗುತ್ತದೆ. ಪ್ರತಿಯೊಬ್ಬ ಭಕ್ತನು ಕೂಡ ತನ್ನ ನೆಚ್ಚಿನ ದೈವವನ್ನು ಕಣ್ತುಂಬ ದರ್ಶನ ಮಾಡಿಕೊಂಡು ಪೂಜೆ ಸಲ್ಲಿಸಲು ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ.

ಕೇವಲ ಶನಿಪರಮಾತ್ಮನ ದೇವಸ್ಥಾನ(CV Puram Shani Temple) ಮಾತ್ರವಲ್ಲದೆ ನೀವು ಈ ದೇವಸ್ಥಾನವನ್ನು ಹೊಕ್ಕರೆ ಬಹುತೇಕ ನೀವು ಪೂಜೆ ಮಾಡುವಂತಹ ಎಲ್ಲಾ ದೇವರ ಮೂರ್ತಿಗಳನ್ನು ಕೂಡ ಇಲ್ಲಿ ನೀವು ಸಾಕ್ಷಿಕರಿಸಬಹುದಾಗಿದೆ. ಹೀಗಾಗಿ ಖಂಡಿತವಾಗಿ ಇಲ್ಲಿಗೆ ಬಂದರೆ ನಿಮಗೆ ದೈವಿಕ ಅನುಭವ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಒಮ್ಮೆಯಾದರೂ ಇಲ್ಲಿಗೆ ಹೋಗಿ ಶನಿ ಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗಿ.

Leave a Comment

error: Content is protected !!