ಯುಗಾದಿ ಸಮಯದಲ್ಲಿ ಎಣ್ಣೆ ಸ್ನಾನ ಮಾಡುವುದು ಎಷ್ಟು ಒಳ್ಳೆಯದು ಗೊತ್ತಾ? ಇದರ ಮಹತ್ವವೇನುಇಲ್ಲಿದೆ ನೋಡಿ.

Indian Culture ಸಾಕಷ್ಟು ವರ್ಷಗಳಿಂದಲೂ ಕೂಡ ನಮ್ಮ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಯುಗಾದಿ ಹಾಗೂ ದೀಪಾವಳಿಗೆ ಎಣ್ಣೆ ಸ್ನಾನ ಮಾಡುವ ಪದ್ಧತಿ ಇದೆ. ದುಷ್ಟರ ಸಂ’ ಹಾರ ಮಾಡಿದ ನಂತರವೂ ಕೂಡ ಶ್ರೀ ಕೃಷ್ಣ(Sri Krishna) ಪರಮಾತ್ಮ ಕೂಡ ತೈಲ ಸ್ನಾನವನ್ನು ಮಾಡಿದ್ದಾನೆ ಎಂಬುದಾಗಿ ಪ್ರತೀತಿ ಇದೆ. ಇನ್ನು ಎಣ್ಣೆಯಲ್ಲಿ ಶ್ರೀ ಲಕ್ಷ್ಮಿ(Sri Lakshmi) ಹಾಗೂ ನೀರಿನಲ್ಲಿ ಗಂಗಾಮಾತೆ ಇರುವುದರಿಂದ ಇವರ ಸಮ್ಮಿಲನ ವಾಗಿರುವ ಎಣ್ಣೆ ಸ್ನಾನ ಪದ್ಧತಿ ನಿಜಕ್ಕೂ ಕೂಡ ಸಾಕಷ್ಟು ಶುಭಫಲವನ್ನು ನೀಡುತ್ತದೆ ಎನ್ನುವ ಪ್ರತಿತಿಯಿದೆ.

ಇನ್ನು ಈ ಎಣ್ಣೆ ಸ್ನಾನ(Oil Bath) ಮಾಡುವುದರಿಂದಾಗಿ ಚರ್ಮರೋ’ ಗ ಹಾಗೂ ವಾತ ಆರೋಗ್ಯ ಸಮಸ್ಯೆಗಳು ಕೂಡ ಬರುವುದಿಲ್ಲ ಎಂಬುದಾಗಿ ಹಿರಿಕರು ಹೇಳುತ್ತಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಮುಪ್ಪು ಬೇಗ ಬರುವುದು ಹಾಗೂ ಸುಸ್ತಾಗುವ ಸಮಸ್ಯೆಗಳನ್ನು ಕೂಡ ಇದು ತಡೆ ಹಿಡಿಯುತ್ತದೆ ಎಂಬುದಾಗಿ ಈಗಾಗಲೇ ವೈದ್ಯಕೀಯವಾಗಿ ಸಾಬೀತಾಗಿರುವಂತಹ ವಿಚಾರವಾಗಿದೆ.

ನಿದ್ರಾ ಹೀನತೆಯಿಂದ ಬಳಲುತ್ತಿರುವವರಿಗೆ ಶೀಘ್ರವಾಗಿ ಶಮನ ದೊರಕಲಿದೆ ಹಾಗೂ ಕಣ್ಣಿನ ಆರೋಗ್ಯ ಕೂಡ ಹೆಚ್ಚಾಗಲಿದೆ ಎಂಬುದಾಗಿ ತಿಳಿದು ಬಂದಿದೆ. ಪುರುಷರಲ್ಲಿ ಲೈಂ’ ಗಿಕ ಶಕ್ತಿ ಕೂಡ ಹೆಚ್ಚುತ್ತದೆ ಎಂಬುದಾಗಿ ತಿಳಿದು ಬಂದಿದೆ. ಅಂಗಡಿಯಲ್ಲಿ ಸಿಗುವಂತಹ ಕಲಬೆರಕೆ ಎಣ್ಣೆ ಗಳಿಗಿಂತ ಕೊಬ್ಬರಿ ಎಣ್ಣೆ(Coconut Oil) ಅಥವಾ ಎಳ್ಳೆಣ್ಣೆಯನ್ನು ಉಪಯೋಗಿಸಿದರೆ ಆರೋಗ್ಯಕ್ಕೆ ಇನ್ನೂ ಒಳ್ಳೆಯದು ಎಂಬುದಾಗಿ ಹೇಳುತ್ತಾರೆ. ಕಫ ಹಾಗೂ ಸೀತದ ಸಮಸ್ಯೆ ಇರುವವರು ಸಾಸಿವೆ ಎಣ್ಣೆಯಿಂದ ಅಭ್ಯಂಜನ ಮಾಡಿಸಿಕೊಂಡರೆ ಇನ್ನೂ ಒಳ್ಳೆಯದು.

ಕೆಲವು ಕಡೆಗಳಲ್ಲಿ ಜ್ವರ ವಾಂತಿಭೇದಿ ಇರುವಂತಹ ಜನರು ಎಣ್ಣೆ ಸ್ನಾನ ಮಾಡಬಾರದು ಬದಲಾಗಿ ಎಳ್ಳೆಣ್ಣೆಯಿಂದ ಮಸಾಜ್(Massage) ಮಾಡಿಸಿಕೊಳ್ಳಬೇಕು ಎಂಬುದಾಗಿ ಕೂಡ ಹೇಳುತ್ತಾರೆ. ಇನ್ನು ತಲೆಗೆ ಎಣ್ಣೆ ಹಾಕುವಾಗ ನೆತ್ತಿಯ ಮಧ್ಯಕ್ಕೆ ಹಾಕಿದರೆ ಅದರಿಂದ ಮೆದುಳಿನ ಕಾರ್ಯ ಪ್ರಕ್ರಿಯೆ ಕೂಡ ಚುರುಕಾಗುತ್ತದೆ ಎಂಬುದಾಗಿ ಉಲ್ಲೇಖವಾಗಿದ್ದು ಈ ಎಲ್ಲ ವಿಚಾರಗಳನ್ನು ಎಣ್ಣೆ ಸ್ನಾನ ಮಾಡುವಾಗ ನಾವು ಗಮನಿಸಬೇಕು.

Leave a Comment

error: Content is protected !!