Garuda Purana: ಈ 5 ಕೆಟ್ಟ ಗುಣಗಳನ್ನು ಬೆಳೆಸಿಕೊಳ್ಳಬೇಡಿ ಇಲ್ಲವಾದಲ್ಲಿ ಅನಾರೋಗ್ಯಕ್ಕೆ ಈಡಾಗಬಹುದು! ಗರುಡ ಪುರಾಣವೇ ಹೇಳಿದ ಸತ್ಯವಿದು!

Garuda Purana ಸನಾತನ ಹಿಂದೂ ಸಂಸ್ಕೃತಿಯಲ್ಲಿ(Sanatana Hindu Sanskrati) ಗರುಡ ಪುರಾಣ ಎನ್ನುವುದು ಸಾಕಷ್ಟು ಜೀವನದ ಮಹತ್ವಗಳನ್ನು ಬಿಡಿಸಿಟ್ಟಿರುವಂತಹ ಪುರಾಣ ಗ್ರಂಥವಾಗಿದೆ. ಇನ್ನು ಭಗವಾನ್ ಶ್ರೀ ವಿಷ್ಣು ಹಾಗೂ ಗರುಡನ ನಡುವೆ ನಡೆದಿರುವಂತಹ ಸಂಭಾಷಣೆಯನ್ನೇ ಗರುಡ ಪುರಾಣವನ್ನಾಗಿ(Garuda Purana) ಬರೆಯಲಾಗಿದೆ. ಇದರಲ್ಲಿ ನಾವು ಮಾಡುವಂತಹ ಐದು ಗುಣಗಳಿಂದಾಗಿ ನಮಗೆ ಅನಾರೋಗ್ಯ ಬರುತ್ತದೆ ಎಂಬುದನ್ನು ಉಲ್ಲೇಖಿಸಲಾಗಿದ್ದು ಆ 5 ಕೆಟ್ಟ ಗುಣಗಳು ಯಾವುವು ಎಂಬುದನ್ನು ತಿಳಿಯೋಣ.

ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ಲೇಟಾಗಿ ಎದ್ದೇಳುವವರು ಜೀವನದಲ್ಲಿ ಸಾಕಷ್ಟು ಜಡತ್ವವನ್ನು ಹೊಂದಿರುತ್ತಾರೆ ಹಾಗೂ ಮುಂದೆ ಬರುವಂತಹ ಸಾಧ್ಯತೆಯನ್ನು ಕಮ್ಮಿಯಾಗಿ ಹೊಂದಿರುತ್ತಾರೆ ಎಂಬುದಾಗಿ ಉಲ್ಲೇಖವಾಗಿದೆ. ಎರಡನೇದಾಗಿ ರಾತ್ರಿ ಊಟ ಮಾಡಿ ಮಲಗುವ ಮುನ್ನ ಅಡುಗೆಮನೆ ಶುಚಿಯಾಗಿಲ್ಲದೆ ಹೋದರೆ ಲಕ್ಷ್ಮೀದೇವಿ(Lakshmidevi) ಮುನಿಸಿಕೊಳ್ಳುತ್ತಾಳೆ ಹಾಗೂ ಶನಿ ತನ್ನ ಕೆಟ್ಟ ಪ್ರಭಾವವನ್ನು ಬೀರುತ್ತಾನೆ.

ಮೂರನೆದಾಗಿ ನೀವು ನಿಮ್ಮ ದೈಹಿಕ ಶುಚಿತ್ವ ಹಾಗೂ ನಿಮ್ಮ ಮನೆಯ ಶುಚಿತ್ವವನ್ನು ಎಷ್ಟರ ಮಟ್ಟಿಗೆ ಚೆನ್ನಾಗಿ ಇಟ್ಟುಕೊಳ್ಳುತ್ತೀರೋ ಅಷ್ಟು ಸಮೃದ್ಧಿ ಅನ್ನುವುದು ಬೆಳಗುತ್ತದೆ. ನಾಲ್ಕನೇದಾಗಿ ಅಗತ್ಯಕ್ಕಿಂತ ಅತಿಯಾದ ಆಸೆಯನ್ನು ಹೊಂದುವುದು ದುರಾಸೆಗೆ ಸಮವಾಗಿದ್ದು ಇದರಿಂದಾಗಿ ಲಕ್ಷ್ಮೀದೇವಿ ನಿಮ್ಮ ಕುರಿತಂತೆ ಮುನಿಸಿಕೊಳ್ಳುತ್ತಾಳೆ. ಹೀಗಾಗಿ ದುರಾಸೆಯನ್ನು ಯಾವತ್ತೂ ಕೂಡ ನಿಮ್ಮ ಮನಸ್ಸಿಗೆ ಬರಲು ಬಿಡಬೇಡಿ.

ಕೊನೆದಾಗಿ ನಿಮ್ಮ ಮನಸ್ಸನ್ನು ಶುಚಿಯಾಗಿ ಇಟ್ಟುಕೊಳ್ಳಿ. ದೈಹಿಕ ಕೊಳೆಯನ್ನು ಸ್ನಾನ ಮಾಡುವ ಮೂಲಕ ತೊಳೆದುಕೊಳ್ಳಬಹುದು ಆದರೆ ಮನಸ್ಸಿನಲ್ಲಿರುವಂತಹ ಕೊಳೆಯನ್ನು ನೀವು ಒಳ್ಳೆಯವರಾಗಿದ್ದರೆ ಮಾತ್ರ ತೊಳೆಯಲು ಸಾಧ್ಯ. ಹೀಗಾಗಿ ಈ ವಿಚಾರದಲ್ಲಿ ಮಾತ್ರ ನಿಮ್ಮ ಮನಸ್ಸು ಕೊಳೆ ಆಗುವುದಕ್ಕೆ ಬಿಡಬೇಡಿ ಇಲ್ಲದಿದ್ದಲ್ಲಿ ಅದೃಷ್ಟದೇವತೆಗಳು(Adrushta Devathe) ನಿಮ್ಮ ವಿರುದ್ಧವಾಗಿ ಮುನಿಸಿಕೊಂಡು ನಿಮ್ಮ ಜೀವನ ಅನಾರೋಗ್ಯದಲ್ಲಿ ಕೂಡಿರುವಂತೆ ಮಾಡುತ್ತಾರೆ.

Leave a Comment

error: Content is protected !!