Devotion: ಆಕಾಶದಲ್ಲಿ ತೇಲುವಂತಹ ಜಗತ್ತಿನ ಏಕೈಕ ದೇವಾಲಯ. ಶಿವ ಭಕ್ತರು ನೋಡಲೇಬೇಕಾದ ದೇವಸ್ಥಾನ.

Lepakshi Temple ನಮ್ಮ ಭಾರತ ದೇಶ ಎನ್ನುವುದು ಸಾಕಷ್ಟು ವರ್ಷಗಳ ಹಿಂದಿನ ಸನಾತನ ಧರ್ಮ(Sanathana Hindu Dharma) ಸಂಸ್ಕೃತಿಯನ್ನು ಅನುಸರಿಸಿಕೊಂಡು ಬಂದಿರುವಂತಹ ದೇಶವಾಗಿದ್ದು ನಮ್ಮಲ್ಲಿ ಪ್ರಾಚೀನ ದೇವಾಲಯಗಳು ಅದೆಷ್ಟು ರಹಸ್ಯಗಳನ್ನು ಜಗತ್ತಿಗೆ ಬಿಚ್ಚಿಡುವಂತಹ ಪ್ರಯತ್ನವನ್ನು ಇಂದಿಗೂ ಕೂಡ ಮಾಡುತ್ತಿವೆ. ಅವುಗಳಲ್ಲಿ ಒಂದು ಅನಂತಪುರದ ಲೇಪಾಕ್ಷಿ(Lepakshi Temple Ananthapura) ದೇವಾಲಯದ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ.

16ನೇ ಶತಮಾನದಲ್ಲಿ ಕಟ್ಟಿರುವ ಈ ದೇವಾಲಯದಲ್ಲಿ ವಿಷ್ಣು ಶಿವ(Shiva) ಹಾಗೂ ವೀರಭದ್ರ ದೇವರನ್ನು ಪೂಜಿಸಲಾಗುತ್ತದೆ. ವಿಜಯನಗರ ಸಾಮ್ರಾಜ್ಯದ(Vijayanagara Dynasty) ಶೈಲಿಯಲ್ಲಿ ಕಟ್ಟಲಾಗಿರುವ ಈ ದೇವಸ್ಥಾನದ ಕಂಬಗಳು ಗಾಳಿಯಲ್ಲಿ ನೇತಾಡುತ್ತವೆ ಎನ್ನುವ ಪ್ರತಿತಿಯಿದೆ. ಇವುಗಳ ಕಂಬಗಳು ನೆಲದಿಂದ ಕೆಲವು ಇಂಚುಗಳ ಅಂತರವನ್ನು ಹೊಂದಿದ್ದು ಗಾಳಿಯಲ್ಲಿ ನೇತಾಡುವಂತೆ ಭಾಸವಾಗುತ್ತದೆ.

ಈ ಲೇಪಾಕ್ಷಿ ದೇವಾಲಯ ಎನ್ನುವುದು 70 ಕಂಬಗಳ ಮೇಲೆ ನಿಂತಿರುವ ದೇವಸ್ಥಾನವಾಗಿದ್ದು(Temple) ಇವುಗಳಲ್ಲಿ ಒಂದು ಕಂಬ ನೆಲದಿಂದ ಅಂತರವನ್ನು ಕಾಯ್ದುಕೊಂಡು ಗಾಳಿಯಲ್ಲಿ ತೇಲುತ್ತಿರುವಂತೆ ಕಾಣಿಸುತ್ತಿರುವುದು ನಿಜಕ್ಕೂ ಕೂಡ ಪ್ರಪಂಚದ ಅದ್ಭುತಗಳಲ್ಲಿ ಒಂದು ಎಂದರು ಕೂಡ ತಪ್ಪಾಗಲಾರದು. ಅಂದಿನ ಕಾಲದಲ್ಲಿ ಏನಮ್ಮ ಪೂರ್ವಜರು ಇಂತಹ ವಿಸ್ಮಯ ಎನಿಸುವಂತಹ ವಾಸ್ತುಶಿಲ್ಪವನ್ನು ಜಗತ್ತಿಗೆ ಪರಿಚಯಿಸಿದ್ದಾರೆ ಎನ್ನುವುದನ್ನು ನಾವೆಲ್ಲರೂ ಹೆಮ್ಮೆಯಿಂದ ಮೆಚ್ಚಿಕೊಳ್ಳಬೇಕು.

ಬ್ರಿಟಿಷರು(British) ಕೂಡ ಇದರ ರಹಸ್ಯವನ್ನು ಕಂಡುಹಿಡಿಯಲು ಹೋಗಿ ವಿಫಲರಾಗಿದ್ದು ಈಗಾಗಲೇ ಇತಿಹಾಸದಲ್ಲಿ ದಾಖಲಾಗಿದೆ. ನಿಜಕ್ಕೂ ಕೂಡ ಇಂತಹ ವಾಸ್ತುಶಿಲ್ಪ ವಿಸ್ಮಯಗಳು ನಮ್ಮ ಭಾರತ ದೇಶದಲ್ಲಿ ಹಲವಾರು ಜಾಗಗಳಲ್ಲಿ ಕಂಡುಬರುತ್ತವೆ ಎನ್ನುವುದನ್ನು ಹೇಳಿಕೊಳ್ಳಲು ಭಾರತೀಯರಾದ ನಾವೆಲ್ಲರೂ ಹೆಮ್ಮೆ ಪಡಬೇಕು. ಒಂದು ವೇಳೆ ನೀವು ಕೂಡ ಈ ವಿಚಾರದ ಕುರಿದಂತೆ ಹೆಮ್ಮೆಪಟ್ಟುಕೊಳ್ಳುವುದಾದರೆ ಭಾರತ್ ಮಾತಾ ಕಿ ಜೈ ಎನ್ನುವುದಾಗಿ ಕಾಮೆಂಟ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!