Kabzaa Trailer: ಕಬ್ಜಾ ಟ್ರೈಲರ್ ನೋಡಿ ಐಶ್ವರ್ಯ ರೈ ಗಂಡ ಅಭಿಷೇಕ್ ಬಚ್ಚನ್ ಹೇಳಿದ್ದೇನು ಗೊತ್ತಾ?

Abhishek Bachchan ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್(Kiccha Sudeep) ಮತ್ತು ಶಿವಣ್ಣ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವಂತಹ ಕಬ್ಜಾ(Kabzaa) ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿ ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಮಿಲಿಯನ್ಗಟ್ಟಲೆ ವೀಕ್ಷಣೆಗಳನ್ನು ಪಡೆದು ಸೆಲೆಬ್ರಿಟಿ ಗಳಿಂದ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ. ನಿಜಕ್ಕೂ ಕೂಡ ಇದು ಭಾರತೀಯ ಚಿತ್ರರಂಗದ ನೆಕ್ಸ್ಟ್ ಲೆವೆಲ್ ಸಿನಿಮಾ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

ಆರ್ ಚಂದ್ರು(R chandru) ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಈ ಸಿನಿಮಾ ಇದಾಗಲೇ ಹಲವಾರು ಸಿನಿಮಾ ಪಂಡಿತರ ಮನಸ್ಸನ್ನು ಕೂಡ ಗೆದ್ದಿದ್ದು ವಿಮರ್ಶಕರು ಕೂಡ ಕಬ್ಜಾ ಸಿನಿಮಾ ಭಾರತೀಯ ಚಿತ್ರರಂಗದ ಮಾರುಕಟ್ಟೆಯನ್ನು ಕಬ್ಜಾ(Kabzaa) ಮಾಡಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ತೀರ್ಪನ್ನು ನೀಡಿದ್ದಾರೆ. ಅಷ್ಟರಮಟ್ಟಿಗೆ ರಿಚ್ ಹಾಗೂ ಒಳ್ಳೆಯ ಕಂಟೆಂಟ್ ಹೊಂದಿರುವಂತಹ ಸಿನಿಮಾ ಇದಾಗಿರಬಹುದು ಎನ್ನುವುದಾಗಿ ಭವಿಷ್ಯವನ್ನು ನುಡಿದಿದ್ದಾರೆ ಸಿನಿಮಾ ಪ್ರೇಮಿಗಳು.

ಇನ್ನು ಸೆಲೆಬ್ರಿಟಿಗಳ ವಿಚಾರಕ್ಕೆ ಬಂದರೆ ಅಮಿತಾಬ್ ಬಚ್ಚನ್(Amitabh Bachchan) ಅವರಿಂದ ಈ ಹಿಂದಿ ವರ್ಷನ್ ಟ್ರೈಲರ್ ಬಿಡುಗಡೆಯಾಗಿದ್ದು, ಹಿಂದಿಯಲ್ಲಿ ಕೂಡ ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಇನ್ನು ಕಬ್ಜಾ ಸಿನಿಮಾದ ಟ್ರೈಲರ್ ಬಗ್ಗೆ ಅಮಿತಾಬ್ ಬಚ್ಚನ್ ಅವರ ಮಗ ಹಾಗೂ ಐಶ್ವರ್ಯ ರೈ(Aishwarya Rai) ಅವರ ಪತಿಯಾಗಿರುವ ಬಾಲಿವುಡ್ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದ ಅಭಿಷೇಕ್ ಬಚ್ಚನ್ ಕೂಡ ಮೆಚ್ಚುಗೆಯ ಮಾತುಗಳಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಕಬ್ಜಾ ಸಿನಿಮಾದ ನಿರ್ಮಾಪಕದಲ್ಲಿ ಒಬ್ಬರಾಗಿರುವ ಅನಿರುದ್ಧ ಪಂಡಿತ್ ರವರು ಕಬ್ಜಾ ಸಿನಿಮಾದ ಟ್ರೈಲರ್ ಅನ್ನು ಅಭಿಷೇಕ್ ಬಚ್ಚನ್(Abhishek Bachchan) ರವರಿಗೆ ವಾಟ್ಸಪ್ ನಲ್ಲಿ ಕಳುಹಿಸಿದ್ದು ಇದಕ್ಕೆ ಅವರು, ತುಂಬಾ ಅಮೋಘವಾಗಿ ಕಾಣುತ್ತಿದೆ ಅಭಿನಂದನೆಗಳು ಎಂಬುದಾಗಿ ಮೆಸೇಜ್ ಕಳುಹಿಸಿರುವುದನ್ನು ನಿರ್ದೇಶಕ ಆರ್ ಚಂದ್ರು ರವರು ಹಂಚಿಕೊಂಡು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಕಬ್ಜಾ ಸಿನಿಮಾ(Kabzaa Film) ಭಾಷೆಗಳ ಗಡಿಯನ್ನು ಮೀರಿ ಎಲ್ಲರನ್ನೂ ಕೂಡ ಮೆಚ್ಚಿಸಿದೆ ಎಂದು ಹೇಳಬಹುದು.

Leave a Comment

error: Content is protected !!