Health Tips: ಡಾರ್ಕ್ ಸರ್ಕಲ್ ನಿಂದ ಪಾರಾಗಲು ಯಾವ ವಸ್ತುಗಳನ್ನು ಬಳಸಬೇಕು ಗೊತ್ತಾ?

Health Tips ಇತ್ತೀಚಿನ ದಿನಗಳಲ್ಲಿ ಯುವಜನತೆಯ ಮುಖದ ಸೌಂದರ್ಯದ ಕುರಿತಂತೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ವಿಶೇಷವಾಗಿ ನಿದ್ರೆಯ ಕೊರತೆ ಹಾಗೂ ವಿಟಮಿನ್(Vitamin) ಕೊರತೆಯಿಂದಾಗಿ ಡಾರ್ಕ್ ಸರ್ಕಲ್(Dark Circle) ಗಳು ಕಣ್ಣಿನ ಸುತ್ತ ಹೆಚ್ಚಾಗಿ ಕಪ್ಪಾಗುವುದು ಪ್ರತಿಯೊಬ್ಬರ ತಲೆಯನ್ನು ಕೆಡಿಸಿದೆ ಎಂದು ಹೇಳಬಹುದು. ಹಾಗಿದ್ದರೆ ಈ ಸಮಸ್ಯೆಯಿಂದ ಮುಕ್ತಿಯನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಸೌತೆಕಾಯಿ(Cucumber): ನೈಸರ್ಗಿಕವಾಗಿ ಚರ್ಮದ ಹೊಳಪನ್ನು ಹೆಚ್ಚಿಸುವ ಶಕ್ತಿ ಸೌತೆಕಾಯಿ ಇರುವ ಕಾರಣದಿಂದಾಗಿ ಅವುಗಳ ಹೋಳುಗಳನ್ನು ಅರ್ಧ ಗಂಟೆಯ ಕಾಲ ಕಣ್ಣಿನ ಮೇಲೆ ಇರಿಸಿಕೊಳ್ಳಿ ಹಾಗೂ ಅದಾದ ನಂತರ ಉಗುರು ಬೆಚ್ಚಗಿನ ಬಿಸಿ ನೀರಿನಿಂದ ತೊಳೆದುಕೊಳ್ಳಿ. ಹಾಲು(Milk) ಹತ್ತಿಯ ಉಂಡೆಗಳನ್ನು ಸ್ವಲ್ಪ ಕಾಲ ಹಾಲಿನಿಂದ ನೆನೆಸಿ ನಂತರ ಅವುಗಳನ್ನು ಕಣ್ಣಿಗೆ ಇಟ್ಟುಕೊಳ್ಳಿ ಅದಾದ ಸ್ವಲ್ಪ ಸಮಯದ ನಂತರ ಕಣ್ಣನ್ನು ತೊಳೆಯಿರಿ.

ರೋಜ್ ವಾಟರ್(Rose Water) ರೋಜ್ ವಾಟರ್ ನಲ್ಲಿ ಕೂಡ ಹಾಗೆ 20 ನಿಮಿಷಗಳ ಕಾಲ ನೆನೆಸಿದ ಹತ್ತಿಯನ್ನು ಕಣ್ಣಿನಲ್ಲಿ ಇಟ್ಟುಕೊಂಡು ನಂತರ ಖಂಡಿತವಾಗಿ ನಿಮಗೆ ಪ್ರತಿದಿನ ಇದೇ ರೀತಿ ಮಾಡುವುದರಿಂದ ಬದಲಾವಣೆಗಳು ಕಂಡುಬರುತ್ತದೆ. ಇದೇ ರೀತಿ ಬಾದಾಮಿ ಎಣ್ಣೆಯನ್ನು ಕೂಡ ಕಣ್ಣಿನ ಸುತ್ತ ಹಚ್ಚಿಕೊಳ್ಳುವುದರಿಂದ ಮಾರನೇ ದಿನ ತೊಳೆದುಕೊಳ್ಳುವುದರಿಂದಲೂ ಉಪಯುಕ್ತ ಬದಲಾವಣೆಗಳನ್ನು ಕಾಣಬಹುದಾಗಿದೆ.

ನಿಮ್ಮ ಡಾರ್ಕ್ ಸರ್ಕಲ್ ಇರುವಂತಹ ಜಾಗಕ್ಕೆ ಜೇನುತುಪ್ಪವನ್ನು(Honey) ಕೂಡ 20 ನಿಮಿಷಗಳ ಕಾಲ ಹಚ್ಚಿ ಹಾಗೆ ಹೊಣೆಯಲು ಬಿಟ್ಟು ನಂತರ ಮುಖ ತೊಳೆದರೆ ಖಂಡಿತವಾಗಿ ಅಲ್ಲಿ ಕೂಡ ಬದಲಾವಣೆಗಳನ್ನು ಕಾಣುವುದನ್ನು ನೀವು ನೋಡುತ್ತೀರಿ. ಎಲ್ಲಕ್ಕಿಂತ ಪ್ರಮುಖವಾಗಿ ಒಳ್ಳೆಯ ನಿದ್ದೆ ಮತ್ತು ಉತ್ತಮ ಆಹಾರವನ್ನು ಸೇವಿಸುವುದರಿಂದ ನೀವು ಈ ಸಮಸ್ಯೆಯಿಂದ ಹೊರ ಬರಬಹುದು. ಈ ಮೇಲೆ ಹೇಳಿರುವಂತಹ ಕ್ರಮಗಳನ್ನು ಅನುಸರಿಸಿದರೆ ಡಾರ್ಕ್ ಸರ್ಕಲ್ ನಿಂದ ನೀವು ದೂರ ಹೋಗಬಹುದು.

Leave a Comment

error: Content is protected !!