Dboss: ಡಿಬಾಸ್ ಬಗ್ಗೆ ಹೇಳಿ ಎಂದಾಗ ಡಾಲಿ ಹೇಳಿದ್ದೇನು ಗೊತ್ತಾ? ಏನ್ ಗುರು ಡಾಲಿ ಹೀಗೆ?

Daali Dhananjay ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ವೇಗವಾಗಿ ಬೆಳೆಯುತ್ತಿರುವ ಉದಯೋನ್ಮುಖ ನಟ ಎಂದರೆ ಅದು ಡಾಲಿ ಧನಂಜಯ್. ಪ್ರತಿಯೊಬ್ಬ ಕನ್ನಡ ಚಿತ್ರರಂಗದ ಪ್ರೇಕ್ಷಕರು ಕೂಡ ಇಷ್ಟಪಡುವಂತಹ ಪ್ರತಿಭೆ ಎಲ್ಲಕ್ಕಿಂತ ಹೆಚ್ಚಾಗಿ ಅವರ ಬಡವರ ಮನೆಮಕ್ಕಳು ಬೆಳಿಬೇಕು ಕಂಡ್ರಯ್ಯ ಎನ್ನುವ ಸ್ಲೋಗನ್ ಎಲ್ಲರೂ ಕೂಡ ಇಷ್ಟಪಡುವಂತಿದೆ. ಇನ್ನು ಸದ್ಯಕ್ಕೆ ಡಾಲಿ ಧನಂಜಯ್ ನಟನೆಯ ಗುರುದೇವ್ ಹೊಯ್ಸಳ(Gurudev Hoysala) ಸಿನಿಮಾ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಡಾಲಿ ಧನಂಜಯ್(Daali Dhananjay) ಕೇವಲ ನಟನಾಗಿ ಮಾತ್ರವಲ್ಲದೆ ಹೆಡ್ ಬುಷ್(Head Bush) ಸಿನಿಮಾದ ಮೂಲಕ ನಿರ್ಮಾಪಕನಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಒಂದೊಳ್ಳೆ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ನನ್ನಿಂದಾಗಿ ಮೂಡಿ ಬರಬೇಕು ಎನ್ನುವ ಬಯಕೆಯಲ್ಲಿಯೇ ಪ್ರತಿಯೊಂದು ಸಿನಿಮಾಗಳನ್ನು ಕೂಡ ಅವರು ನಿರ್ಮಾಣ ಹಾಗೂ ನಟನಾಗಿ ಕಾಣಿಸಿಕೊಳ್ಳುತ್ತಾರೆ.

ಇನ್ನು ಇತ್ತೀಚಿಗಷ್ಟೇ ಟ್ವಿಟರ್ ನಲ್ಲಿ ಪ್ರಶ್ನೋತ್ತರ ಸೆಶನ್ ಅನು ಪ್ರಾರಂಭಿಸಿದ್ದ ಡಾಲಿ ಧನಂಜಯ್ ಅಭಿಮಾನಿಗಳ ಪ್ರಶ್ನೆಗೆ ಸಖತ್ ಆಗಿಯೇ ಉತ್ತರವನ್ನು ನೀಡಿದ್ದಾರೆ. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರ ಅಭಿಮಾನಿ ಪ್ರಶ್ನೆ ಕೇಳುತ್ತಾ ಡಿ ಬಾಸ್ ಅವರ ಬಗ್ಗೆ ಒಂದು ವಾಕ್ಯದಲ್ಲಿ ಉತ್ತರ ನೀಡಿ ಎಂಬುದಾಗಿ ಕೇಳಿದಾಗ ಡಾಲಿ ನೀಡಿದ ಉತ್ತರ ಏನು ಗೊತ್ತಾ ಬನ್ನಿ ತಿಳಿಯೋಣ.

ಅವರು ಬಾಸ್ ಹಾಗೂ ಮತ್ತೊಬ್ಬ ತಾಯಿಯ ಹೊಟ್ಟೆಯಲ್ಲಿ ಜನಿಸಿರುವ ನನ್ನ ಸಹೋದರ ಬುಧಾಗಿ ಡಾಲಿ ಧನಂಜಯ್ ರವರು ಡಿ ಬಾಸ್(Dboss) ಅವರ ಕುರಿತಂತೆ ತಮ್ಮ ಅಭಿಪ್ರಾಯವನ್ನು ಪ್ರೀತಿಯಿಂದ ವ್ಯಕ್ತಪಡಿಸಿದ್ದಾರೆ. ಯಜಮಾನ ಸಿನಿಮಾದಲ್ಲಿ ಡಿ ಬಾಸ್ ಅವರ ಜೊತೆಗೆ ಧನಂಜಯ್(Dhananjay) ಕೂಡ ನಟಿಸಿದ್ದರು ಎನ್ನುವುದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹುದಾಗಿದೆ. ಇವರಿಬ್ಬರ ಕಾಂಬಿನೇಷನ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!