ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆರಳುಗಳಿಗೆ ಯಾವ ರತ್ನದ ಉಂಗುರವನ್ನು ಧರಿಸುವುದರಿಂದ ಏನು ಲಾಭವಿದೆ ಗೊತ್ತೇ

ಸಾಮಾನ್ಯವಾಗಿ ಮನುಷ್ಯನು ಕೈಯ್ಯಲ್ಲಿ ಉಂಗುರವನ್ನು ಯಾವಾಗಲೂ ಧರಿಸಲು ಇಷ್ಟಪಡುತ್ತಾನೆ. ಅದರಲ್ಲೂ ಕೆಲವೊಬ್ಬರು ತಮ್ಮ ಜಾತಕದ ಪ್ರಕಾರ ಅವರವರ ರಾಶಿ ನಕ್ಷತಕ್ಕೆ ಅನುಗುಣವಾಗಿ ಬಣ್ಣ, ಆಕಾರ, ಗಾತ್ರ ಎಲ್ಲವನ್ನೂ ಹೊಂದಿದಸಿಕೊಂಡು ಬೆಳ್ಳಿ, ಬಂಗಾರ, ತಾಮ್ರ, ವಜ್ರ, ಪಂಚಲೋಹ, ಮುಂತಾದವುಗಳಿಂದ ಉಂಗುರವನ್ನು ಮಾಡಿಸಿ ಬೆರಳಿಗೆ ಹಾಕಿಕೊಳ್ಳುತ್ತಾರೆ. ಎಲ್ಲರೂ ಸಹ ಹೀಗೇ ಮಾಡುತ್ತಾರೆ ಅಂತ ಹೇಳೋಕಾಗಲ್ಲ ಜ್ಯೋತಿಷ್ಯ ಶಾಸ್ತ್ರ, ಸಂಖ್ಯಾಶಾಸ್ತ್ರಗಳಲ್ಲಿ ನಂಬಿಕೆ ಇರುವ ವ್ಯಕ್ತಿಗಳು ಅವರವರು ನಂಬುವ ವ್ಯಕ್ತಿಯ ಬಳಿ ಕೇಳಿಕೊಂಡು ತಮ್ಮ ಜೀವನದಲ್ಲಿ ಒಳ್ಳೆಯದಾಗಲಿ ಎಂಬ ಭಾವನೆಯಿಂದ ಹಲವಾರು ರೀತಿಯ ಉಂಗುರಗಳನ್ನು ಧರಿಸುತ್ತಾರೆ. ಹಾಗಾದರೆ ರತ್ನದ ಉಂಗುರವನ್ನು ಧರಿಸುವುದರಿಂದ ಏನೆಲ್ಲಾ ಪ್ರಯೋಜನ, ಲಾಭ, ಯಾವ ರತ್ನಕ್ಕೆ ಯಾವ ಶಕ್ತಿಯಿದೆ ಅನ್ನೋದನ್ನ ತಿಳಿಯೋಣ ಬನ್ನಿ.

ಜ್ಯೋತಿಷಿಗಳು ಅಥವಾ ಸಂಖ್ಯಾಶಾಸ್ತ್ರಜ್ಞರು ತಮ್ಮ ಬಳಿ ಸಮಸ್ಯೆಯನ್ನು ಹೇಳಿಕೊಂಡು ಬರುವ ಜನರಿಗೆ ಆ ಜನರ ಹುಟ್ಟಿದ ರಾಶಿ, ದಿನ, ನಕ್ಷತ್ರ, ರಕ್ತದ ಗುಂಪು, ಸಮಸ್ಯೆ ಇವುಗಳ ಆಧಾರದ ಮೇಲೆ ಯಾವ ರತ್ನದ ಉಂಗುರವನ್ನು ಯಾವ ಲೋಹದಲ್ಲಿ ಅಳವಡಿಸಿಕೊಂಡು ಧರಿಸಿದರೆ ಒಳ್ಳೆಯದು ಎಂದು ಹೇಳುತ್ತಾರೆ. ಅದು ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ ಅಂದರೆ ಉದಾಹರಣೆಗೆ ನಮ್ಮ ಹೆಬ್ಬೆರಳು ಅಗ್ನಿತತ್ವವನ್ನು, ತೋರುಬೆರಳು ವಾಯುತತ್ವವನ್ನು, ಮಧ್ಯದ ಬೆರಳು ಆಕಾಶತತ್ವವನ್ನು, ಉಂಗುರ ಬೆರಳು ಭೂಮಿ ತತ್ವವನ್ನು, ಕಿರುಬೆರಳು ಜಲತತ್ವವನ್ನು ಪ್ರತಿನಿಧಿಸುತ್ತದೆ. ಇವುಗಳ ಬಗ್ಗೆ ನಾಡಿಶಾಸ್ತ್ರದಲ್ಲಿ ಉಲ್ಲೇಖಿತವಾಗಿದೆ.

ಚಂಚಲ ಮನಸ್ಸಿನ ವ್ಯಕ್ತಿಗಳಿಗೆ, ಸಂತಾನ ಸಮಸ್ಯೆ, ಆರ್ಥಿಕ ಸಮಸ್ಯೆ ಇರುವವರಿಗೆ ವಾಯುತತ್ವದ ಬೆರಳು ಅಂದರೆ ತೋರುಬೆರಳಿಗೆ ಗುರುವಿನ ಕಲ್ಲಾದಂತಹ ಕನಕಪುಷ್ಪರಾಜ ರತ್ನವನ್ನು ಸೂಚಿಸುತ್ತಾರೆ. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರಿಗೆ ಅವರ ಜೀವನದಲ್ಲಿ ABC ಅಂದರೆ ಅಮಿತಾಬ್ ಬಚ್ಚನ್ ಕಾರ್ಪೊರೇಷನ್ ಸಂಸ್ಥೆ ನಷ್ಟಕ್ಕೆ ಒಳಗಾಗಿಇನ್ನೇನು ದೇಶ ಬಿಡಬೇಕು ಎನ್ನುವಾಗ ಅವರು ನಂಬುವ ಜ್ಯೋತಿಷ್ಯಿ ಒಬ್ಬರು ಅವರಿಗೆ ನೀಲಿ ಬಣ್ಣದ ಕಲ್ಲಿನ ಬೆಳ್ಳಿಯ ಉಂಗುರವನ್ನು ಬಲಗೈಯ್ಯ ಮಧ್ಯದ ಬೆರಳಿಗೆ ಹಾಕಿಕೊಳ್ಳಲು ತಿಳಿಸುತ್ತಾರೆ ಅದನ್ನು ಧರಿಸಿದ ನಂತರ ಅವರು ಈಗ ಯಾವ ಹಂತದಲ್ಲಿ ಇದ್ದಾರೆ ಎನ್ನುವುದು ನಮಗೆಲ್ಲರಿಗೂ ತಿಳಿದೇ ಇದೆ. ಆದರೆ ಅವರಿಗೆ ಬಾರಿ ಈ ಕಲ್ಲಿನ ಉಂಗುರ ಧರಿಸಿದಾಗ ಮಾತ್ರ ಏಳ್ಗೆ ಆಯಿತಾ? ಇಲ್ಲಾ. ಬರೀ ಹರಳಿನಿಂದ ಅಲ್ಲದೆ ಜ್ಯೋತಿಷ್ಯ ಶಾಸ್ತ್ರ ಸಂಖ್ಯಾ ಶಾಸ್ತ್ರ ಇವುಗಳು ಸಹ ಇದಕ್ಕೆ ಪೂರಕವಾಗಿದೆ ಇವು ಸಂಶೋಧನೆ ನಡೆಸಿ ಯಾವುದರಿಂದ ಸಮಸ್ಯೆ ಇದೆ ಅದಕ್ಕೆ ಪರಿಹಾರ ಏನು ಎಂದು ಉಲ್ಲೇಖಿಸುತ್ತಾರೆ.

ನೀಲಿ ಕಲ್ಲನ್ನು ಶನಿಯ ಕಲ್ಲು ಕರ್ಮ ಕಾರಕ ಎನ್ನುತ್ತಾರೆ ಇದು ಹೇಗೆ ಅಮಿತ ಬಚ್ಚನ್ ಅವರಿಗೆ ಸಹಾಯ ಮಾಡಿತೊ ಹಾಗೆ ಕನ್ನಡದಲ್ಲಿ ಕೂಡ ಗೋಲ್ಡನ್ ಸ್ಟಾರ್ ಗಣೇಶ್ ಮುಂತಾದವರಿಗೂ ಕೂಡ ಈ ಕಲ್ಲಿನ ಉಂಗುರ ಧರಿಸುವುದರಿಂದ ಜೇವನದಲ್ಲಿ ಏಳ್ಗೆ ಉಂಟಾಗಿದೆ. ಇದಕ್ಕೆ ವಿಧಿ ವಿಜ್ಞಾನ ಕ್ರಿಯೆಗಳು ಇರತ್ತೆ. ದೇವರ ವಿಗ್ರಹದ ಪ್ರತಿಷ್ಠಾಪಣೆಯ ಹಾಗೆ ಇದಕ್ಕೂ ಕೂಡ ನಾವು ಧರಿಸುವ ಹರಳಿನ ಉಂಗುರಗಳಿಗೆ ಹಲವಾರು ವಿಧಿಗಳು ಇವೆ. ರತ್ನಗಳಿಗೆ ಸಹಾಯಕ ವಾಗಿ ಬೆಳ್ಳಿ ಧಾತುವಿನಲ್ಲಿ ಕಟ್ಟಿಸಿ ಅದಕ್ಕೆ ಪೂಜೆ ಮಾಡಿಸಿ ಶಕ್ತಿಯನ್ನು ತುಂಬಿ ಯಾವ ಉದ್ದೇಶಕೆ ಧರಿಸುತ್ತಾ ಇದ್ದೇವೆ ಆ ಉದ್ದೇಶವನ್ನು ಈಡೇರಿಸು ಅಂತ ಹೇಳಿಕೊಂಡು ಧರಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಇಂತಹ ಉಂಗುರಗಳನ್ನು ಪಾರಂಪರಿಕವಾಗಿ ಧರಿಸುವ ವ್ಯಕ್ತಿಗಳು ಹಾಗೂ ತಯಾರಿಸುವ ವ್ಯಕ್ತಿಗಳು ಸಹ ಕಾಣೆಯಾಗುತ್ತಾ ಇದ್ದರೆ ಕೇವಲ ಆಡಂಭರಕ್ಕೆ ಧರಿಸುವವರೆ ಹೆಚ್ಚಾಗಿದ್ದರೆ ಕೇವಲ ವ್ಯಾಪಾರಾದ ದೃಷ್ಟಿಯಿಂದ ನೋಡುವವರೆ ಹೆಚ್ಚು. ಈಗ ಬರಿ ಯಂತ್ರಗಳಿಂದ ತಯಾರಿಸುವ ಉಂಗುರಗಳು ಸಿಗುತ್ತಿವೆಯೇ ಹೊರತು ಅದನ್ನು ತಯಾರಿಸುವ ಆಭರಣ ತಯಾರಕರು ತಯಾರಿಸಿದ ಉಂಗುರಗಳು ಸಿಗುವುದು ವಿರಳ. ಇದರಿಂದ ನಮಗೆ ಬೇಕಾದ ಉದ್ದೇಶದ ಒಳ್ಳೆಯ ಮನೋಭಾವನೆಯ ಉಂಗುರಗಳು ಭಾವನೆಗಳು ಇಲ್ಲದೆ ಹೇಗೆ ಬೇಕೋ ಹಾಗೆ ಮಾಡಿದ ಯಂತ್ರಗಳಿಂದ ತಯಾರಾದ ಉಂಗುರಗಳೇ ಹೆಚ್ಚು ಸಿಗುತ್ತವೆ ಇವುಗಳಿಂದ ಪ್ರಯೋಜನವೇನು ಇರುವುದಿಲ್ಲ.

ನಮ್ಮ ರಾಶಿಗೆ ಅನುಗುಣವಾಗಿ ರತ್ನದ ಉಂಗುರವನ್ನು ತೆಗೆದುಕೊಳ್ಳುವಾಗ ಯಾವ ಒಂದು ಉದ್ದೇಶಕ್ಕಾಗಿ ತೆಗೆದುಕೊಳ್ಳುತ್ತೇವೆ, ಅದಕ್ಕೆ ಸಂಕಲ್ಪ ಆಗಿದೆಯೋ ಪೂನಾ: ವಿಧಾನಗಳು ಆಗಿದ್ಯೋ ಇಲ್ಲವೋ ಭಾವನೆ ಕೊಟ್ಟಿದ್ದಾರ ಅಂತೆಲ್ಲ ಗಮನಿಸಿ ಉಂಗುರವನ್ನು ತೆಗೆದುಕೊಳ್ಳಬೇಕು. ಇನ್ನು ಈಗಾಗಲೇ ತಯಾರಿಸಿದ ಉಂಗುರ ಇದ್ದರೆ, ನಿಮ್ಮ ಮನೆಯ ಕುಲದೇವರ ಬಳಿ ಇಟ್ಟು ಒಳ್ಳೆಯ ಕಾರ್ಯಕ್ಕೆ ಶುಭವಾಗಲಿ ಎಂದು ಪೂಜೆ ಮಾಡಿಸಿ ಅದಕ್ಕೆ ಭಾವನೆ ತುಂಬಿಸಿ ದೇವರ ತೀರ್ಥ ಕುಂಕುಮ ಹಚ್ಚಿ ಮುಂದೆ ನಡೆಯುವುದೆಲ್ಲ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಧರಿಸಬೇಕು

Leave a Comment

error: Content is protected !!