ಈ ಮೂರು ಸೂಚನೆಗಳಿಂದ ತಿಳಿಯುತ್ತದೆ ನಿಮ್ಮ ಮರಣ ಸಮೀಪಿಸಿದೆ ಎಂದು. ಯಾವುವು ಗೊತ್ತಾ ಆ ಸೂಚನೆಗಳು?


Astrology ಸ್ನೇಹಿತರೆ ಗರುಡ ಪುರಾಣ ಎನ್ನುವುದು ನಮ್ಮ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಒಂದು ಪ್ರಾಮುಖ್ಯವಾದ ಸ್ಥಾನವನ್ನು ಹೊಂದಿರುವ ಗ್ರಂಥವಾಗಿದೆ. ಇನ್ನು ಮರಣ ಹೊಂದುವ ಮುನ್ನ ಕೆಲವೊಂದು ಸೂಚನೆಗಳು ಆ ಮರಣ ಹೊಂದುವ ವ್ಯಕ್ತಿಗೆ ನಿಚ್ಚಳವಾಗಿ ಕಾಣುತ್ತದೆ. ಹಾಗಿದ್ದರೆ ಗರುಡ ಪುರಾಣದ ಪ್ರಕಾರ ಆ ಸೂಚನೆಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಮರಣ ಹೊಂದುತ್ತಿರುವ ವ್ಯಕ್ತಿಗೆ ತನ್ನ ಕೊನೆಯ ಸಂದರ್ಭದಲ್ಲಿ ತನ್ನ ಮೂಗನ್ನು ನೋಡಲು ಸಾಧ್ಯವಾಗುವುದಿಲ್ಲ. ಇನ್ನು ಮರಣದ ತುದಿಯಲ್ಲಿರುವ ವ್ಯಕ್ತಿ ತನ್ನ ನೆರಳನ್ನು ಎಣ್ಣೆ ಹಾಗೂ ನೀರಿನಲ್ಲಿ ನೋಡಲು ಸಾಧ್ಯವಾಗುವುದಿಲ್ಲ. ಮರಣದ ಕೊನೆಯಲ್ಲಿ ನೆರಳು ಕೂಡ ನಮ್ಮ ಜೊತೆಗೆ ಇರುವುದಿಲ್ಲ ಎಂದು ಹೇಳುವುದು ಇದಕ್ಕೆ.

ಕೊನೆಗಳಿಗೆಯಲ್ಲಿ ಆ ಮರಣ ಹೊಂದುವ ವ್ಯಕ್ತಿಗೆ ನನ್ನ ಕೈಯಿನ ರೇಖೆಗಳು ಕೂಡ ಅಸ್ಪಷ್ಟವಾಗಿ ಕಾಣಲು ಪ್ರಾರಂಭವಾಗುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ ಅವನ ಪೂರ್ವಜರ ಆತ್ಮಗಳ ಅನುಭವ ಕೂಡ ಆತನಿಗೆ ಆಗಲು ಪ್ರಾರಂಭಿಸುತ್ತದೆ ಯಾಕೆಂದರೆ ನಮ್ಮವನೊಬ್ಬ ನಮ್ಮ ಜೊತೆಗೆ ಸೇರಲು ಬರುತ್ತಿದ್ದಾನೆ ಎಂಬುದಾಗಿ ಅವರೆಲ್ಲರೂ ಸಂಭ್ರಮಾಚರಣೆಯನ್ನು(Celebration) ಮಾಡುತ್ತಾರೆ. ಕಾರಣವಿಲ್ಲದೆ ವಾಂತಿ ಮಾಡುತ್ತಾರೆ ಹಾಗೂ ಹಲವಾರು ಬಾರಿ ಯಮದೂತರ ಗೋಚರ ಕೂಡ ಆತನಿಗೆ ಆಗುತ್ತದೆ. ಗರುಡ ಪುರಾಣದ ಪ್ರಕಾರ ಮರಣ ಹೊಂದುತ್ತಿರುವ ವ್ಯಕ್ತಿಗೆ ಕೊನೆ ಗಳಿಗೆಯಲ್ಲಿ ಯಮದೂತರು ಕಾಣಿಸಿಕೊಳ್ಳುತ್ತಾರೆ ಈ ಸಂದರ್ಭದಲ್ಲಿ ಆತ ಕಿರುಚಲು ಹಾಗೂ ಮಾತನಾಡಲು ಪ್ರಯತ್ನಿಸುತ್ತಾನೆ ಆದರೆ ಅದು ಆತನಿಗೆ ಸಾಧ್ಯವಾಗುವುದಿಲ್ಲ.

ಈ ಸಂದರ್ಭದಲ್ಲಿ ಅವರ ಜೀವನದಲ್ಲಿ ನಡೆದಿರುವಂತಹ ಎಲ್ಲಾ ಘಟನೆಗಳು ಅವರ ಕಣ್ಣ ಮುಂದೆ ಬರುತ್ತದೆ. ಯಾರು ತಮ್ಮ ಜೀವನದಲ್ಲಿ ಪುಣ್ಯ ಕೆಲಸಗಳನ್ನು(Good Deeds) ಮಾಡಿರುತ್ತಾರೋ ಅವರು ಶಾಂತಿಯಿಂದ ಪ್ರಾಣವನ್ನು ತ್ಯಜಿಸುತ್ತಾರೆ. ಯಾರು ಪಾಪಕರ್ಮಗಳನ್ನು ಮಾಡಿರುತ್ತಾರೋ ಅವರು ಕಷ್ಟವನ್ನು ಅನುಭವಿಸಿ ಮರಣವನ್ನು ಹೊಂದುತ್ತಾರೆ. ಇನ್ನು ಶಿವ ಪುರಾಣದಲ್ಲಿ ಹೇಳಿರುವಂತೆ ಒಂದು ವೇಳೆ ಆ ವ್ಯಕ್ತಿ ಸ್ವಾಭಾವಿಕ ಮರಣವನ್ನು ಹೊಂದುತ್ತಿದ್ದರೆ ಆತನ ದೇಹ ಬಿಳಿ ಅಥವಾ ಹಳದಿ ಬಣ್ಣಕ್ಕೆ ತಿರುಗಿ ಕಣ್ಣುಗಳು ಕೆಂಪಾಗುತ್ತವೆ. ಮರಣ ಸಂಭವಿಸುತಿದೆ ಎನ್ನುವುದರ ಮುನ್ಸೂಚನೆಯಾಗಿ ನಮಗೆ ಸೂರ್ಯ ಹಾಗೂ ಚಂದ್ರರ ಸುತ್ತಲೂ ಕಪ್ಪು ಬಣ್ಣ ಆವರಿಸಿರುವಂತೆ ಕಂಡುಬರುತ್ತದೆ.

ಈ ಸಂದರ್ಭದಲ್ಲಿ ಆ ವ್ಯಕ್ತಿ ತನ್ನ ಮರಣ ಸಂಭವಿಸಲು ಇನ್ನೇನು ಕ್ಷಣಗಣನೆ ಆರಂಭವಾಗಿದೆ ಎಂಬುದಾಗಿ ಅರಿತು ಅದನ್ನು ಒಪ್ಪಿಕೊಂಡು ದೇವರಲ್ಲಿ ತನ್ನ ಆತ್ಮವನ್ನು(Soul) ಲೀನವಾಗಿಸುವ ನಿಟ್ಟಿನಲ್ಲಿ ಪ್ರಾರ್ಥಿಸಬೇಕು. ಈ ಸಂದರ್ಭದಲ್ಲಿ ದೇಹ ಆತನಿಗೆ ಭಾರವಾಗಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ ಎಷ್ಟೇ ನೀರನ್ನು ಕುಡಿದರೂ ಕೂಡ ನಿಮ್ಮ ದೇಹ ಒಣಗಿದಂತೆ ಭಾಸವಾಗುತ್ತದೆ. ಇವುಗಳೇ ನಮ್ಮ ಹಿಂದೂ ಸಂಸ್ಕೃತಿಯ ಪುರಾಣ ಗ್ರಂಥಗಳಲ್ಲಿ ಉಲ್ಲೇಖವಾಗಿರುವಂತಹ ಸೂಚನೆಗಳ ವಿವರವಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ ಹಾಗೂ ಓಂ ನಮಃ ಶಿವಾಯ ಎಂಬುದಾಗಿ ಕಾಮೆಂಟ್ ಮಾಡಿ.


Leave A Reply

Your email address will not be published.