Pisces June Horoscope: ಮೀನ ರಾಶಿಯವರ ಜೂನ್ ತಿಂಗಳ ಮಾಸ ಭವಿಷ್ಯ, ಈ 4 ವಿಚಾರದಲ್ಲಿ ಎಚ್ಚರವಹಿಸಿ

Pisces June Horoscope 2023: ದ್ವಾದಶ ರಾಶಿಗಳಲ್ಲಿ ಪ್ರಮುಖವಾದ ರಾಶಿ ಮೀನ ರಾಶಿ ಈ ರಾಶಿಯ ಜೂನ್ ತಿಂಗಳ ಮಾಸ ಭವಿಷ್ಯ ಹಾಗೂ ಈ ತಿಂಗಳಲ್ಲಿ ಮೀನ ರಾಶಿಯವರಿಗೆ ಪ್ರಮುಖವಾಗಿ ನಾಲ್ಕು ಎಚ್ಚರಿಕೆಗಳನ್ನ ನೋಡಬಹುದು. ಮೇಷ ರಾಶಿಯಲ್ಲಿ ಗುರು ರಾಹು ಕುಂಭ ರಾಶಿಯಲ್ಲಿ ಕೇತು ಶನಿ ಸ್ಥಿರವಾಗಿರುವಂಥದ್ದು ಇನ್ನು ಜೂನ್ 14ರ ತನಕ ವೃಷಭ ರಾಶಿಯಲ್ಲಿ ರವಿ ನಂತರ ಮಿಥುನದಲ್ಲಿ ರವಿ ಜೂನ್ ಒಂದರಿಂದ ಆರರ ತನಕ ಮೇಷ ರಾಶಿಯಲ್ಲಿ ಏಳರಿಂದ 23ರ ತನಕ ವೃಷಭ ರಾಶಿಯಲ್ಲಿ 24 ರಿಂದ 30ನೇ ತಾರೀಖಿನ ತನಕ ಮಿಥುನ ರಾಶಿಯಲ್ಲಿ ಬುಧ ಗ್ರಹ ಇರಲಿದ್ದಾನೆ ಇದೇ ರೀತಿ ಕರ್ಕಾಟಕ ರಾಶಿಯಲ್ಲಿ ಶುಕ್ರ ಮತ್ತು ಕುಜ ಇರಲಿದ್ದಾರೆ ಇವಿಷ್ಟು ಬಹಳ ಮುಖ್ಯವಾದ ಗೃಹಸ್ಥಿತಿಯಾಗಿದೆ.

Pisces June Horoscope 2023

ಮೀನ ರಾಶಿಯವರಿಗೆ ಜೂನ್ ತಿಂಗಳು ಇರುವ ಮೊದಲನೇ ಎಚ್ಚರಿಕೆ ಏನೆಂದರೆ ರವಿಯ ಪ್ರಭಾವದಿಂದ ಮೀನ ರಾಶಿಯವರಲ್ಲಿ ಜೂನ್ ತಿಂಗಳಲ್ಲಿ ಹಠದ ಸ್ವಭಾವ ಹೆಚ್ಚಾಗುತ್ತದೆ ಇದರಿಂದಾಗಿ ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಹಲವು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಜೊತೆಗೆ ಅಸಮಾಧಾನವನ್ನು ಕಂಡುಕೊಳ್ಳುತ್ತೀರಿ ಇದರ ಜೊತೆಗೆ ನಿಮಗೆ ಮಾತುಕೊಟ್ಟ ವ್ಯಕ್ತಿಗಳು ಅದರಂತೆ ನಡೆದುಕೊಳ್ಳುವುದಿಲ್ಲ ಇದರಿಂದ ನಿಮಗೆ ಬೇಸರ ಉಂಟಾಗಬಹುದು ಆದ್ದರಿಂದ ಎಲ್ಲವನ್ನು ಸಮಾಧಾನದಿಂದ ತೆಗೆದುಕೊಂಡು ನಿರ್ಧಾರವನ್ನ ತೆಗೆದುಕೊಳ್ಳುವುದು ಉತ್ತಮ.

ಇನ್ನೂ ಎರಡನೆಯ ಎಚ್ಚರಿಕೆ ನೋಡುವುದಾದರೆ ವಿಶೇಷವಾಗಿ ಮೀನ ರಾಶಿಯ ಸ್ತ್ರೀಯರಿಗೆ ಬ್ಲಾಕ್ ಮೇಲ್ ಮಾಡುವ ಸಾಧ್ಯತೆ ಜಾಸ್ತಿ ನಿಮ್ಮ ಬಗ್ಗೆ ಬೇರೆಯವರ ಬಳಿ ದೂರು ನೀಡುವುದು ಇದರಿಂದ ನಿಮ್ಮ ಅವರ ಸಂಬಂಧ ಹಾಳಾಗುವುದೇ ಮಾಡುವುದು ಅವರ ಉದ್ದೇಶವಾಗಿರುತ್ತದೆ ಆದ್ದರಿಂದ ಸ್ವಲ್ಪಮಟ್ಟಿಗೆ ಈ ವಿಷಯವಾಗಿ ಎಚ್ಚರಿಕೆ ವಹಿಸುವುದು ಉತ್ತಮ.ಇದಕ್ಕೆ ಪರಿಹಾರವಾಗಿ ಪ್ರತಿನಿತ್ಯ ಕಾಲಭೈರವಾಷ್ಟಕ ಪಠಣ ಮಾಡುವುದು ಬಹಳ ಒಳ್ಳೆಯದು.

ಮೀನ ರಾಶಿಯವರಿಗೆ ಧನಾದಿಪತಿ ಹಾಗೂ ಭಾಗ್ಯ ಅಧಿಪತಿ ಆಗಿರುವಂತಹ ಕುಜ ಗ್ರಹವು ಸಂಪೂರ್ಣ ಜೂನ್ ತಿಂಗಳಲ್ಲಿ ಪಂಚಮದಲ್ಲಿ ನೀಚ ಸ್ಥಿತಿಯಲ್ಲಿರುತ್ತಾನೆ ಇದರ ಪರಿಣಾಮವಾಗಿ ಮೀನ ರಾಶಿಯವರಿಗೆ ಕೌಟುಂಬಿಕ ಸುಖ ಸಿಗುವುದಿಲ್ಲ ಧನಾಗಮನದಲ್ಲಿ ತೊಂದರೆ ಉಂಟಾಗಬಹುದು ಅಷ್ಟೇ ಅಲ್ಲದೆ ನಿಮ್ಮ ಲಕ್ ನಿಮಗೆ ಕೈ ಕೊಡಬಹುದು ಇದರಿಂದ ಆರೋಗ್ಯದಲ್ಲೂ ಏರುಪೇರು ಆಗಬಹುದು ಶರೀರದಲ್ಲಿ ಉಷ್ಣತೆ ಹೆಚ್ಚಾಗಬಹುದು ಆದ್ದರಿಂದ ಶರೀರವನ್ನು ತಂಪಾಗಿಟ್ಟುಕೊಳ್ಳಲು ಪ್ರಯತ್ನಿಸಿ ಇದಕ್ಕೆ ಪರಿಹಾರವಾಗಿ ಕುಜನ ಆರಾಧನೆಯನ್ನು ಮಾಡುವುದು ಒಳ್ಳೆಯದು ಕುಜನ ಅಷ್ಟೋತ್ತರಗಳನ್ನ ಪಡಿಸುವುದು ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಭೇಟಿ ನೀಡುವುದು ಇತ್ಯಾದಿಗಳಿಂದ ಈ ದೋಷವನ್ನು ಪರಿಹರಿಸಿಕೊಳ್ಳಬಹುದು.

ಇನ್ನು ಜೂನ್ ತಿಂಗಳ ನಾಲ್ಕನೇ ಎಚ್ಚರಿಕೆ ಮೀನ ರಾಶಿಯವರಿಗೆ ಏನು ಎಂಬುದನ್ನು ನೋಡುವುದಾದರೆ ಷಷ್ಯಾಧಿಪತಿ ಚತುರ್ಥದಲ್ಲಿ ಇರುವುದರಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬರಬಹುದು ಇದರಿಂದ ಆಹಾರವನ್ನ ಸರಿಯಾಗಿ ಸೇವಿಸಬೇಕು ಅಂದರೆ ನಾಲಿಗೆಯ ರುಚಿಗೆ ಬೆಲೆ ಕೊಡದೆ ದೇಹಕ್ಕೆ ಯಾವುದು ಉತ್ತಮವೂ ಅಂತಹ ಆಹಾರಗಳನ್ನು ಸರಿಯಾದ ಸಮಯಕ್ಕೆ ಸೇವಿಸಿ ದೇಹದ ಆರೋಗ್ಯವನ್ನು ನಿಯಂತ್ರಿಸಿಕೊಳ್ಳಬೇಕು

ಅತಿಯಾದ ಹುಳಿ ಪದಾರ್ಥ ಅಂದರೆ ಪಿತ್ತ ಜಾಸ್ತಿ ಮಾಡುವಂತಹ ಆಹಾರ ಪದಾರ್ಥಗಳನ್ನು ತ್ಯಜಿಸಬೇಕು ಹಾಗೆಯೇ ನಿಮ್ಮ ನಿದ್ರೆಯನ್ನು ಸಹ ಸರಿಯಾಗಿ ಮಾಡಬೇಕು ಅಂದರೆ ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಹೇಳುವುದು ಧ್ಯಾನ ಯೋಗ ಮುಂತಾದ ಕಾರ್ಯಗಳಲ್ಲಿ ತೊಡಗಿ ಕೊಳ್ಳುವುದು ಇತ್ಯಾದಿ ಹವ್ಯಾಸಗಳಿಂದ ನಿಮ್ಮ ಆರೋಗ್ಯವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಇದನ್ನೂ ಓದಿ:ನಿಮ್ಮ ಮನೆಯಲ್ಲಿ ಈ ದೇವರ ಮೂರ್ತಿಗಳು ಇದ್ದರೆ ನಿಮಗೆ ಖಂಡಿತ ಒಳ್ಳೆಯದಾಗುತ್ತದೆ.

Leave a Comment

error: Content is protected !!