ಹೆಣ್ಣು ಮನಸ್ಸು ಮಾಡಿದರೆ ಮನೆಯನ್ನು ಸ್ವರ್ಗವಾಗಿಸಬಲ್ಲಳು. ಅದರಂತೆ ಕೊಂಚ ಕೋಪಿಸಿಕೊಂಡರೂ ನರಕವನ್ನು ಮನೆಯೊಳಗಿಳಿಸುವಳು. ಹೀಗಾಗಿ ಹೆಣ್ಣುಮಕ್ಕಳ ವಿಚಾರದಲ್ಲಿ ಕೊಂಚ ಎಚ್ಚರಿಕೆ ವಹಿಸಬೇಕಾದದ್ದು ಗಂಡು ಮಕ್ಕಳ ಜವಾಬ್ದಾರಿಯಾಗಿರುತ್ತದೆ. ಆಕೆ ಇಷ್ಟಪಡುವಂತೆ ನಡೆದುಕೊಂಡಲ್ಲಿ ನಿಮ್ಮ ಸಂತೋಷಕ್ಕೆ ಎಡೆಯೇ ಇಲ್ಲದಂತಹ ಜೀವನವನ್ನು ನಿಮ್ಮ ಬಾಳಿಗೆ ಹೆಣ್ಣಾದವಳು ತರುತ್ತಾಳೆ.

ನೀವೇನಾದರೂ ಕೊಂಚ ಆ ಕಡೆ ಈ ಕಡೆ ವಾಲಿದರೆ ಆಕೆ ಯಾವುದೇ ನಿರ್ಧಾರವನ್ನು ಬೇಕಾದರೂ ತೆಗೆದುಕೊಂಡು ನಿಮ್ಮನ್ನು ಬಿಟ್ಟು ಹೋಗುವ ಆಲೋಚನೆ ಮಾಡಿಬಿಡುತ್ತಾರೆ. ಹೀಗಾಗಿ ಸಾಧ್ಯವಾದಷ್ಟು ಹೆಣ್ಣುಮಕ್ಕಳಿಗೆ ಪ್ರೀತಿ ಕೊಡಿ. ಅದರಲ್ಲೂ ಈ ಲಕ್ಷಣ ಇರುವಂತಹ ಹೆಣ್ಣುಮಕ್ಕಳು ಏನಾದರೂ ನಿಮ್ಮ ಮನೆಗೆ ಮಡದಿಯಾಗಿ, ಸೊಸೆಯಾಗಿ ಅಥವಾ ಮಗಳಾಗಿ ಬಂದರೆ ನಿಮಗಿಂತ ಅದೃಷ್ಟವಂತ ವ್ಯಕ್ತಿ ಬೇರೆಯಾರಿರಲು ಸಾಧ್ಯವೇ ಇಲ್ಲ. ಹೆಣ್ಣು ಮಕ್ಕಳನ್ನು ಮನೆಗೆ ಮಹಾಲಕ್ಷ್ಮಿ ಸ್ವರೂಪ ಎಂದು ನಮ್ಮ ಅನೇಕ ಜನರು ಭಾವಿಸುತ್ತಾರೆ. ಹೆಣ್ಣಾದವಳು ಮನೆತುಂಬಾ ಬಹಳ ಲವಲವಿಕೆಯಿಂದ ನಗುಮುಖ ಧರಿಸಿ ಓಡಾಡಿಕೊಂಡಿದ್ದಾರೆ ಮನೆಗೆ ಬಹಳ ಶ್ರೇಷ್ಠ.

ಅನಾದಿ ಕಾಲದಿಂದಲೂ ಪತ್ನಿಯನ್ನು ಅರ್ಧಾಂಗಿ ಎನ್ನುತ್ತಾರೆ. ಅರ್ಧಾಂಗಿ ಎಂದರೆ ಪತಿಯಲ್ಲಿ ಅರ್ಧ ಭಾಗ ಎಂದರ್ಥ. ಅರ್ಧಾಂಗಿ ಯಾವಾಗಲೂ ಸುಖವಾಗಿ, ಸಂತೋಷವಾಗಿ ಇದ್ದರೆ ಪತಿ ಹಾಗೂ ಆತನ ಕುಟುಂಬವು ಆನಂದಮಯವಾಗಿ ಸಂತೋಷವಾಗಿರುತ್ತದೆ. ಪತ್ನಿಯನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೋ ಅಷ್ಟೇ ಚೆನ್ನಾಗಿ ಅಭಿವೃದ್ಧಿಯಾಗುತ್ತದೆ. ಪುರಾಣದ ಪ್ರಕಾರ ಪತ್ನಿಯಲ್ಲಿ ಈ ಲಕ್ಷಣಗಳು ಇದ್ದರೆ ಪತಿಯಾದವನ ಪ್ರಪಂಚದಲ್ಲಿ ತಾನು ಏನನ್ನಾದರೂ ಸಾಧಿಸಬಹುದು ಹಾಗೆ ಅತ್ಯಂತ ಅದೃಷ್ಟಶಾಲಿ ಎಂದು ಭಾವಿಸಬಹುದು.

ಯಾವ ಪತ್ನಿ ತನ್ನ ಮನೆಯ ಕೆಲಸಗಳೊಂದಿಗೆ ತನ್ನ ಪತಿಯನ್ನು ಪ್ರೀತಿಯಿಂದ ಆದರಗಳಿಂದ ಸಲಹುತ್ತಾಳೆ. ಹಾಗೆಯೇ ಮನೆಯ ಕೆಲಸವನ್ನು ಚಾಕಚಕ್ಯತೆಯಿಂದ ನಿರ್ವಹಿಸುತ್ತಾಳೆ ಮತ್ತು ಬ್ರಾಹ್ಮಿಮುಹೂರ್ತದಲ್ಲಿ ಎದ್ದು ರಾತ್ರಿ ಮಲಗುವವರೆಗೆ ಮಕ್ಕಳು, ಪತಿ, ಪತಿಯ ಗೃಹವನ್ನು ನಿರ್ವಹಿಸುತ್ತಾಳೆ ಮತ್ತು ಬಂದ ಅತಿಥಿಗಳನ್ನು ಮರ್ಯಾದಾ ಪೂರ್ವಕವಾಗಿ ಪ್ರೀತಿ ಆದರಗಳಿಂದ ಸೌಕರ್ಯ ಮಾಡುತ್ತಾಳೆ. ಅಂತಹ ಪತ್ನಿಯನ್ನು ಪಡೆದಿರುವ ಪತಿಯೇ ಅದೃಷ್ಟವಂತನು ಎಂದು ಹೇಳಲಾಗಿದೆ.

ಸುಮಧುರವಾದ ಮಾತುಗಳನ್ನು ಮಾತನಾಡುತ್ತಾ ಪ್ರೀತಿಯನ್ನು ಹಂಚುತ್ತಾ ಪತಿ ತನ್ನನ್ನು ಅಲ್ಲದೆ ಪತಿಯೊಂದಿಗೆ ಇರುವಂತಹ ಬಂಧು ಬಾಂಧವರಿಗೆ ಮನೆಯ ಸದಸ್ಯರಿಗೆ ಪ್ರೇಮ ಪೂರ್ವಕವಾಗಿ ನೋಡಿಕೊಳ್ಳುತ್ತಾ, ತನ್ನ ಸರ್ವಸ್ವವನ್ನು ಸಮರ್ಪಿಸಿಕೊಂಡು ಪತಿಯ ಜೀವನವೆ ತನ್ನ ಜೀವನವೆಂದು ಭಾವಿಸುವ ಪತ್ನಿಯೇ ಪತಿಗೆ ಅದೃಷ್ಟವನ್ನು ತರುವಳು ಎಂದು ಹೇಳಲಾಗಿದೆ. ಅಷ್ಟೇ ಅಲ್ಲ ಪ್ರತಿಯೊಂದು ಹೆಜ್ಜೆಯಲ್ಲಿ ಹೆಜ್ಜೆ ಹಾಕುತ್ತಾ, ಸಂಸಾರ ಜೀವನವನ್ನು ನಡೆಸಿ ಪ್ರತಿಯೊಂದು ಕೆಲಸದಲ್ಲೂ ತನ್ನ ಸಹಭಾಗಿತ್ವವನ್ನು ತೋರಿಸುತ್ತಾ ಸಾಗುವಳೆ ನಿಜವಾದ ಪತ್ನಿ ಅಂತಹ ಪತಿಯೇ ಅದೃಷ್ಟವಂತ ಪತ್ನಿ ಎಂದು ಭಾವಿಸಬೇಕು.

ಧರ್ಮವನ್ನು ರಕ್ಷಿಸುತ್ತಾ ಪ್ರತಿಯೊಂದು ಕೆಲಸದಲ್ಲೂ ತನ್ನ ಕುಟುಂಬವನ್ನು ಪತಿಯನ್ನು ಬಿಟ್ಟು ಮತ್ತೊಂದು ಆಲೋಚನೆ ಮಾಡದ ಪತ್ನಿಯೇ ಪತಿವ್ರತೆ ಎಂದು ಹೇಳುವುದುಂಟು. ಪತಿ, ಮಕ್ಕಳು, ಅತ್ತೆ, ಮಾವ ಮತ್ತು ಬಂಧುಗಳು ಬಿಟ್ಟರೆ ಮತ್ತೊಂದು ಪ್ರಪಂಚ ಇಲ್ಲ ಎನ್ನುವಳೆ ಒಳ್ಳೆಯ ಮನಸ್ಸಿರುವ ಪತ್ನಿ ಎಂದು ಹೇಳುವುದುಂಟು. ಅಂತಹ ಪತ್ನಿ ಸಿಗುವ ಪತಿಯಂದಿರು ಸಾಕಷ್ಟು ಅದೃಷ್ಟವಂತರು, ಅವರು ಅದೃಷ್ಟವನ್ನು ಪಡೆದುಕೊಂಡು ಬಂದಿರುತ್ತಾರೆ. ಇಂತಹ ಲಕ್ಷಣಗಳನ್ನು ಹೊಂದಿರುವಂತಹ ಪತ್ನಿಯನ್ನು ಹೊಂದಿರುವ ಪತಿಯರೇ ಈ ಪ್ರಪಂಚದಲ್ಲಿ ಅತಿ ಹೆಚ್ಚಿನ ಅದೃಷ್ಟವಂತರು ಎಂದು ಭಾವಿಸಬೇಕು.

By admin

Leave a Reply

Your email address will not be published.