ಈ ರೀತಿಯ ಕನಸು ಬಿದ್ರೆ ಮದುವೆ ಬೇಗನೆ ಆಗಲಿರುವುದು ಪಕ್ಕಾ ಅಂತ ಅರ್ಥ?

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಮದುವೆ ಎನ್ನುವುದು ಬಹಳ ಮುಖ್ಯವಾದದ್ದು. ಬೆಳೆದ ಮಕ್ಕಳು ಮನೆಯಲ್ಲಿ ಇದ್ದರೆ ತಂದೆ ತಾಯಿಗೆ ದೊಡ್ಡ ಚಿಂತೆ. ಹಾಗೆ ಮದುವೆ ವಯಸ್ಸಿಗೆ ಬಂದ ಯುವಕ, ಯುವತಿಯರಿಗೂ ಕೂಡ ಒಂದು ರೀತಿಯ ತವಕ ಶುರುವಾಗುತ್ತದೆ. ನನ್ ಮದುವೆ ಆಗ್ತಿಲ್ಲ. ಆದರೆ ನನ್ನ ಸ್ನೇಹಿತರ ಮದುವೆ ಎಲ್ಲಾ ಆಗ್ತಿದೆ ಯಾಕೆ ಅನ್ನೊ ಕೊರಗು ಮನಸ್ಸಿನಲ್ಲಿ ಕಾಡುತ್ತದೆ.

ನಿದ್ರೆ ಮಾಡಿದಾಗ ಕನಸು ಬೀಳುವುದು ಸಹಜ. ಅದರಲ್ಲೂ ಒಂದೊಂದು ಬಾರಿ ಒಳ್ಳೆಯ ಕನಸುಗಳು ಮನಸಿಗೆ ಮುದ ನೀಡುತ್ತವೆ.ಆದರೆ ಕೆಟ್ಟ ಕನಸುಗಳು ತಕ್ಷಣ ಎಚ್ಚರ ಆಗುವ ಹಾಗೆ ಮಾಡುತ್ತವೆ.ಅದರಲ್ಲಿ ಕೆಲ ಕನಸುಗಳು ನಮ್ಮ ಜೀವನಕ್ಕೆ ಸ್ಫೂರ್ತಿ. ಯಾವ ರೀತಿಯ ಕನಸುಗಳು ಬಿದ್ದರೆ ಮದುವೆ ಆಗುವ ಸಾಧ್ಯತೆ ಇದೆ ಎಂದು ನಾವು ಇಲ್ಲಿ ತಿಳಿಯೋಣ.

ಒಬ್ಬ ಹುಡುಗಿ ಅವಳ ಕನಸಲ್ಲಿ ಮುದ್ದಾದ ಗುಬ್ಬಿಮರಿಯನ್ನು ನೋಡಿದರೆ ಇಲ್ಲ ಗುಬ್ಬಿಯನ್ನು ನೋಡಿದರೆ ಅವಳ ಪ್ರೇಮ ಸಂಬಂಧ ಮದುವೆ ರೂಪದಲ್ಲಿ ಬದಲಾಗಲು ತುಂಬಾ ಸಮಯ ಬೇಕಾಗಿಲ್ಲ. ಅತೀ ಶೀಘ್ರದಲ್ಲಿ ಮದುವೆ ಆಗಲಿದೆ ಎಂದು ಸೂಚಿಸುತ್ತದೆ. ಯಾರಾದರೂ ಕನಸಿನಲ್ಲಿ ಮೆರವಣಿಗೆ ಇಲ್ಲ ಮದುವೆಯಲ್ಲಿ ಖುಷಿಯಿಂದ ಕುಣಿದು ಕುಪ್ಪಳಿಸುತ್ತಾರೋ ಅವರ ಕಂಕಣ ಭಾಗ್ಯ ಕೂಡಿ ಬಂದಿದೆ ಎಂದು ಸೂಚಿಸುತ್ತದೆ.

ಒಬ್ಬ ಹುಡುಗಿ ಮೂರ್ತಿ ಮಾಡುವ ಶಿಲ್ಪಿಯನ್ನು ಕನಸಿನಲ್ಲಿ ನೋಡಿದರೆ ಅವಳು ಇಷ್ಟಪಡುವಂತಹ ಹುಡುಗ ಅವಳಿಗೆ ಸಿಗಳಿದ್ದಾನೆ ಎಂದು ಸೂಚಿಸುತ್ತದೆ.ಹಾಗೆ ಅತೀ ಶೀಘ್ರದಲ್ಲೇ ಮದುವೆಯಾಗುತ್ತದೆ. ಒಬ್ಬ ಹುಡುಗಿ ಅವರ ಅಕ್ಕ ಅಥವಾ ತಂಗಿ ಯಾರಾದರೂ ಅವಳಿಗೆ ಉಡುಗೊರೆಯನ್ನಾಗಿ ಕೊಟ್ಟ ಬಳೆಯನ್ನು ಕನಸಿನಲ್ಲಿ ಹಾಕಿಕೊಂಡರೆ ಅವಳು ಬಯಸುವಂತಹ ಹುಡುಗ ಅವಳ ಕೈ ಹಿಡಿಯಲಿದ್ದಾರೆ ಎಂದು ಸೂಚಿಸುತ್ತದೆ.

ಒಬ್ಬ ಹುಡುಗ ಅವನ ಕನಸಿನಲ್ಲಿ ಅವನದೇ ನಿಶ್ಚಿತಾರ್ಥವನ್ನು ನೋಡಿದರೆ ಮುಂದಿನ ದಿನಗಳಲ್ಲಿ ಅವನಿಗೆ ಇಷ್ಟಪಡುವಂತಹ ಮತ್ತು ಹೆಚ್ಚು ಪ್ರೀತಿಸುವಂತಹ ಹುಡುಗಿ ಅವನ ಕೈ ಹಿಡಿಯಲಿದ್ದಾರೆ ಎಂದು ಅರ್ಥ. ಒಬ್ಬ ಹುಡುಗಿ ತಾನು ಜಾತ್ರೆಯಲ್ಲಿ ಸುತ್ತಾಡುವುದನ್ನು ಕಂಡರೆ ಅವಳಿಗೆ ಮುಂದೆ ಪ್ರೀತಿಯಿಂದ ನೋಡಿಕೊಳ್ಳುವ ಗಂಡ ಸಿಗಲಿದ್ದಾನೆ ಮತ್ತು ಕಂಕಣ ಭಾಗ್ಯ ಕೂಡಿ ಬಂದಿದೆ ಎಂದು ಸೂಚಿಸುತ್ತದೆ.

ಒಬ್ಬ ಹುಡುಗ ತಾನು ಹಾರಾಡುವ ಹೆಲಿಕ್ಯಾಪ್ಟರ್ ನಲ್ಲಿ ಕುಳಿತ ಹಾಗೆ ಕನಸು ಬಿದ್ದರೆ ಅವನ ಮದುವೆ ಅತೀ ಶೀಘ್ರದಲ್ಲೇ ಆಗಲಿದೆ ಎಂದು ಸೂಚಿಸುತ್ತದೆ. ಇವುಗಳ ಬಗ್ಗೆ ತಿಳಿದು ನಿಮ್ಮ ಮದುವೆಯ ಮುಂಚೆ ಬೀಳುವ ಕನಸುಗಳ ಬಗ್ಗೆ ಅರಿತುಕೊಳ್ಳಿ.

Leave a Comment

error: Content is protected !!