ಪ್ರೀತಿ ಎಲ್ಲರಿಗೂ ಸಿಗುವುದಿಲ್ಲ. ಅದರಲ್ಲೂ ಕೂಡ ನಿಜವಾದ ಪ್ರೀತಿ ಎಲ್ಲರಿಗೂ ಸಿಗುವುದು ಬಹಳ ಕಷ್ಟ. ನಿಜವಾದ ಪ್ರೀತಿ ಸಿಕ್ಕರೂ ಪ್ರಾಮಾಣಿಕವಾಗಿ ಪ್ರೀತಿ ಮಾಡುವವರು ಸಿಗುವುದು ಬಹಳ ವಿರಳ. ಎಷ್ಟೋ ಮಂದಿ ಲವ್ ಮಾಡಿ ಮದುವೆ ಆಗುತ್ತಾರೆ. ಆದರೆ ಅವರ ನಡುವೆ ಪ್ರೀತಿ ಕೊನೆಯ ತನಕ ಇರುವುದು ಬಹಳ ಕಡಿಮೆ. ನಾವು ಇಲ್ಲಿ ಯಾವ ರಾಶಿಯವರು ನಿಜವಾದ ಪ್ರಾಮಾಣಿಕರು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಈಗಿನ ಆಧುನಿಕ ಯುಗದಲ್ಲಿ ಪ್ರೀತಿ ಎನ್ನುವುದು ಸರ್ವೇ ಸಾಮಾನ್ಯ ಆಗಿದೆ. ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಮುದುಕರವರೆಗೆ ಪ್ರೀತಿ ಒಂದು ಮಾಯೆ ತರ ಆಗಿಬಿಟ್ಟಿದೆ. ಪ್ರೀತಿಗೆ ವಯಸ್ಸಿನ ಅಂತರ ಇಲ್ಲ. ಹಾಗೆಯೇ ಪ್ರೀತಿಗೆ ಅಂತಸ್ತು ಬೇಕಿಲ್ಲ. ಪ್ರೀತಿಗೆ ಏನೂ ಬೇಕಾಗಿಲ್ಲ. ಪ್ರೀತಿ ಯಾವಾಗ ಹುಟ್ಟುತ್ತದೆ ಮತ್ತು ಯಾವಾಗ ಸಾಯುತ್ತದೆ ಎಂದೂ ಕೂಡ ಗೊತ್ತಿಲ್ಲ. ಪ್ರೀತಿಯನ್ನು ಒಂದು ಅನುಭೂತಿ ಎಂದು ಹೇಳಬಹುದು. ಇದು ಒಂದು ಮಧುರವಾದ ಅನುಭೂತಿ ಆಗಿದ್ದು ಯಾವಾಗ, ಯಾರಿಗೆ ಮತ್ತು ಏಕೆ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಂತಹ ಪ್ರೀತಿ ಸಿಕ್ಕರೆ ಅದೃಷ್ಟವಂತರು ಎಂದು ಹೇಳಬಹುದು.

ಪ್ರೀತಿಯಲ್ಲಿ ನಂಬಿಕೆ ಮತ್ತು ಪ್ರಾಮಾಣಿಕತೆ ಬಹಳ ಮುಖ್ಯ. ಮೇಷ, ಕನ್ಯಾ, ತುಲಾ, ಧನಸ್ಸು ಮತ್ತು ಮಕರ ರಾಶಿಯ ವ್ಯಕ್ತಿಗಳು ಪ್ರೀತಿಯ ವಿಷಯದಲ್ಲಿ ಬಹಳ ಪ್ರಾಮಾಣಿಕ ಆಗಿರುತ್ತಾರೆ. ಪ್ರೀತಿಯಲ್ಲಿ ನಂಬಿಕೆಯನ್ನು ಉಳಿಸಿಕೊಳ್ಳುತ್ತಾರೆ. ಅವರ ಪ್ರಾಮಾಣಿಕ ಪ್ರೀತಿಗೆ ಜಗತ್ತೇ ತಲೆ ಬಾಗುತ್ತದೆ. ಈ ವ್ಯಕ್ತಿಗಳು ಬಹಳಷ್ಟು ಗಟ್ಟಿ ಎಂದು ಹೇಳಬಹುದಾಗಿದೆ. ಇವರು ಸದಾಕಾಲ ತಾವು ಪ್ರೀತಿಸಿದವರ ಜೊತೆ ಇರಲು ಇಷ್ಟಪಡುತ್ತಾರೆ. ಹಾಗೆಯೇ ಸದಾಕಾಲ ಅವರ ಜೊತೆ ನಿಂತು ಅವರ ಸಂತೋಷಕ್ಕೆ ಕಾರಣರಾಗುತ್ತಾರೆ.

ಪ್ರೀತಿಯನ್ನು ನೀಡಿ ಎಲ್ಲರನ್ನು ಸಹ ಪ್ರೀತಿಸಿ ಸುಖದ ಜೀವನ ನಡೆಸುತ್ತಾರೆ. ತಾವು ಪ್ರೀತಿಸಿದವರ ಸುಖ ಮತ್ತು ದುಃಖಗಳಲ್ಲಿ ಭಾಗಿಯಾಗುತ್ತಾರೆ. ಅವರ ನೋವು ತನ್ನ ನೋವು ಎಂದು ತಿಳಿದುಕೊಳ್ಳುತ್ತಾರೆ. ಪ್ರತೀ ಕ್ಷಣ ತಾವೂ ಸಹ ಖುಷಿಯಾಗಿದ್ದು ಜೊತೆಗಿರುವವರನ್ನು ಖುಷಿಯಾಗಿ ಇಡುತ್ತಾರೆ.

By admin

Leave a Reply

Your email address will not be published.