Astrology: ರೋಹಿಣಿ ನಕ್ಷತ್ರದಲ್ಲಿ ಸೂರ್ಯನ ಚಲನೆಯಿಂದ ಅದೃಷ್ಟವನ್ನು ಅನುಭವಿಸಲಿರುವ ಆ ಮೂರು ಅದೃಷ್ಟವಂತರು ಯಾರೆಲ್ಲಾ ಗೊತ್ತಾ?

Horoscope ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜ ಆಗಿರುವಂತಹ ಸೂರ್ಯನು ತನ್ನ ನೆಚ್ಚಿನ ರೋಹಿಣಿ ನಕ್ಷತ್ರದಲ್ಲಿ ಮೇ 25 ರಂದು ಈಗಾಗಲೇ ಕಾಲಿಟ್ಟಿದ್ದು ಇದರಿಂದಾಗಿ ಮೂರು ಅದೃಷ್ಟವಂತ ರಾಶಿಯವರಿಗೆ ಅದೃಷ್ಟದ ಭಾಗ್ಯ ಸಿಗಲಿದ್ದು ಆ ರಾಶಿಯವರು ಯಾರೆಲ್ಲ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ: ಈ ಸಂದರ್ಭದಲ್ಲಿ ಕುಟುಂಬದ ಎಲ್ಲರ ಜೊತೆಗೂ ಕೂಡ ಉತ್ತಮ ಬಾಂಧವ್ಯವನ್ನು ಹಂಚಿಕೊಳ್ಳುವಂತಹ ಮೇಷ ರಾಶಿಯವರು ಆರ್ಥಿಕವಾಗಿ ಕೂಡ ಸಬಲರಾಗಲಿದ್ದಾರೆ. ಏನನ್ನಾದರೂ ಸಾಧಿಸಬೇಕು ಎನ್ನುವಂತಹ ಮಹತ್ವಾಕಾಂಕ್ಷೆ ಅವರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ.

ವೃಷಭ ರಾಶಿ: ಹುಟ್ಟಿನಿಂದಲೇ ಬಂದಿರುವಂತಹ ವೃಷಭ ರಾಶಿಯವರ ನಾಯಕತ್ವದ ಗುಣ ಎನ್ನುವುದು ಬೇರೆ ಜನರು ನಿಮ್ಮತ್ತ ಆಕರ್ಷಿಸುವಂತೆ ಸಹಾಯ ಮಾಡುವಂತಹ ವ್ಯಕ್ತಿತ್ವವನ್ನು ರೂಪಿಸುತ್ತದೆ. ನೀವು ಪಡುವಂತಹ ಕಠಿಣ ಪರಿಶ್ರಮಕ್ಕೆ ತಕ್ಕದಾದ ಫಲವನ್ನು ಖಂಡಿತವಾಗಿ ನೀವು ಮುಂದಿನ ದಿನಗಳಲ್ಲಿ ಪಡೆಯಲಿದ್ದೀರಿ. ಸಮಾಜದಲ್ಲಿ ನಿಮ್ಮ ಬಗ್ಗೆ ಇರುವಂತಹ ಪ್ರೀತಿ ಗೌರವಗಳು ಹೆಚ್ಚಾಗುತ್ತವೆ.

ಕಟಕ ರಾಶಿ: ರೋಹಿಣಿ ನಕ್ಷತ್ರಕ್ಕೆ ಸೂರ್ಯನು ಪ್ರವೇಶಿಸಿದಾಗ ಕಟಕ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಸಾಕಷ್ಟು ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು ಆರ್ಥಿಕವಾಗಿ ನೀವು ಹಿಂದೆಂದಿಗಿಂತಲೂ ಶಕ್ತಿಶಾಲಿಗಳಾಗಲಿದ್ದೀರಿ. ನಿಮ್ಮ ಒಳ್ಳೆಯ ವ್ಯಕ್ತಿತ್ವ ಇಂದಲ್ಲ ನಾಳೆ ಬೇರೆಯವರಿಂದ ಸನ್ಮಾನಕ್ಕೆ ಒಳಗಾಗುವುದಂತೂ ಶತಸಿದ್ದ.

Leave a Comment

error: Content is protected !!