Astrology: ಸೂರ್ಯನ ಸಂಕ್ರಮಣದಿಂದಾಗಿ ಉಂಟಾಗಲಿದೆ 5 ರಾಶಿಯವರಿಗೆ ಗ್ರಹಚಾರ! ನಿಮ್ಮ ರಾಶಿ ಕೂಡ ಇದ್ಯಾ ಚೆಕ್ ಮಾಡಿ!

Horoscope ಸೂರ್ಯನು(Surya) ಇದೇ ಏಪ್ರಿಲ್ 14 ರಂದು ಮೇಷ ರಾಶಿಗೆ ಕಾಲಿಡುವ ಕಾರಣದಿಂದಾಗಿ ಮೇಷ ರಾಶಿಯಲ್ಲಿ ಮೇಷ ಸಂಕ್ರಮಣ ಉಂಟಾಗಲಿದ್ದು ಇದರಿಂದಾಗಿ ಐದು ರಾಶಿಯವರಿಗೆ ಗ್ರಹಚಾರ ಪ್ರಾರಂಭವಾಗಲಿದೆ. ಅಷ್ಟಕ್ಕೂ ಕಷ್ಟವನ್ನು ಅನುಭವಿಸಲಿರುವಂತಹ ಐದು ರಾಶಿಯವರು ಯಾರೆಲ್ಲಾ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೀನ ರಾಶಿ( Meena Rashi) ಇದ್ದಕ್ಕಿದ್ದಂತೆ ಮೀನ ರಾಶಿಯವರ ಖರ್ಚುಗಳು ಹೆಚ್ಚಾಗಲಿದ್ದು ಆರೋಗ್ಯದಲ್ಲಿ ಕೂಡ ಹದಗೆಡುವಂತಹ ಪರಿಸ್ಥಿತಿ ಉಂಟಾಗಲಿದೆ. ಜೀವನದಲ್ಲಿ ಶತ್ರುಗಳ ಕಾಟ ಕೂಡ ಜಾಸ್ತಿಯಾಗಲಿದೆ. ಮಕರ ರಾಶಿ(Makara Rashi) ಮೇಷ ರಾಶಿಗೆ ಸೂರ್ಯ ಕಾಲಿಡುವ ಹಿನ್ನೆಲೆಯಲ್ಲಿ ಮಕರ ರಾಶಿಯವರಿಗೆ ಖರ್ಚುಗಳು ಹೆಚ್ಚಾಗಲಿದ್ದು ವೈವಾಹಿಕ ಜೀವನವೂ ಕೂಡ ಸಾಕಷ್ಟು ತಾಪತ್ರಯಗಳನ್ನು ಎದುರಿಸಲಿದೆ. ಬೇರೆಯವರ ಜೊತೆಗೆ ಮಕರ ರಾಶಿಯವರ ಗಲಾಟೆ ಆಗುವ ಸಾಧ್ಯತೆ ಕೂಡ ಇದೆ.

ತುಲಾ ರಾಶಿ(Thula Rashi) ನೀವು ಹಣದ ಕರ್ಚಿನಲ್ಲಿ ವ್ಯರ್ಥ ಖರ್ಚು ಮಾಡಲಿದ್ದು ನೀವು ಕೆಲಸ ಮಾಡುವಂತಹ ಆಫೀಸ್ನಲ್ಲಿ ಮೇಲಾಧಿಕಾರಿಗಳ ಜೊತೆಗೆ ಜಗಳ ಮಾಡಿಕೊಳ್ಳುವ ಕಾರಣದಿಂದಾಗಿ ಕೆಲಸಗಳಲ್ಲಿ ಅಡೆತಡೆಗಳನ್ನು ಕಾಣಲಿದ್ದೀರಿ. ಕನ್ಯಾ ರಾಶಿ(Kanya Rashi) ಈ ಸಮಯದಲ್ಲಿ ಕನ್ಯಾ ರಾಶಿ ಅವರು ಕೊಂಚಮಟ್ಟಿಗೆ ಜಾಗ್ರತೆ ಆಗಿರುವುದು ಒಳ್ಳೆಯದು ಯಾಕೆಂದರೆ ಯಾವುದೇ ಕ್ಷೇತ್ರದಲ್ಲಿ ಇದ್ದರೂ ಕೂಡ ನೀವು ಈ ಸಂದರ್ಭದಲ್ಲಿ ಒತ್ತಡದ ಕಾರಣದಿಂದಾಗಿ ಒಂದಕ್ಕೆ ಹೆಚ್ಚುವರಿ ಕೆಲಸ ಮಾಡುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ.

ವೃಷಭ ರಾಶಿ(Vrishabha Rashi) ಈ ಸಮಯದಲ್ಲಿ ಗ್ರಹಚಾರದ ಕಾರಣದಿಂದಾಗಿ ನಿಮ್ಮ ಆದಾಯದಲ್ಲಿ ಸಾಕಷ್ಟು ಇಳಿಕೆ ಕಂಡು ಬರಲಿದ್ದು ಖರ್ಚುಗಳು ಕೂಡ ಹೆಚ್ಚಾಗಲಿದ್ದು ಅದನ್ನು ಮೊದಲಿಗೆ ನಿಯಂತ್ರಣದಲ್ಲಿಟ್ಟುಕೊಳ್ಳುವ ಪ್ರಯತ್ನವನ್ನು ಮಾಡಿ. ಒಟ್ಟಾರೆಯಾಗಿ ಈ ಎಲ್ಲಾ ಐದು ರಾಶಿಗಳು ಈ ಸಂದರ್ಭದಲ್ಲಿ ಸ್ವಲ್ಪಮಟ್ಟಿಗೆ ಜಾಗರೂಕತೆಯನ್ನು ವಹಿಸಿದರೆ ಈ ಕಷ್ಟ ಸಮಯದಿಂದ ಪಾರಾಗಲು ಸಾಧ್ಯ.

Leave a Comment

error: Content is protected !!