ಪೂಜಿಸುವಾಗ ಮಂತ್ರಗಳನ್ನು ಪಠಿಸುವುದರಿಂದ ಆಗುವ ಉಪಯೋಗಗಳಿವು

ಸಾಮಾನ್ಯವಾಗಿ ಪ್ರತಿ ಹಿಂದೂಗಳ ಮನೆಯಲ್ಲಿ ಪೂಜಾ ವಿಧಾನಗಳನ್ನು ಅನುಸರಿಸುತ್ತಾರೆ ಹಾಗೂ ತಮ ಇಷ್ಟದ ದೇವರುಗಳನ್ನು ಪ್ರಾರ್ಥಿಸುತ್ತಾರೆ ಪೂಜಿಸುತ್ತಾರೆ ಅವುಗಳ ಜೊತೆಗೆ ಕೆಲವೊಂದು ಶ್ಲೋಕ ಮಂತ್ರಗಳನ್ನು ಪಠಿಸುತ್ತಾರೆ ಆದ್ರೆ ಬಹಳಷ್ಟು ಜನಕ್ಕೆ ಗೊತ್ತಿಲ್ಲದ ವಿಷಯವೇನು ಅನ್ನೋದನ್ನ ಈ ಮೂಲಕ ತಿಳಿಯುವ ಚಿಕ್ಕ ಪ್ರಯತ್ನ ಮಾಡೋಣ ಮಂತ್ರ ಪಠಣ ಮಾಡುವುದರಿಂದ ಏನೆಲ್ಲಾ ಉಪಯೋಗವಿದೆ ಅನ್ನೋದನ್ನ ನೋಡುವ ಮೊದಲು ನಿಮಗೆ ಈ ಉಪಯುಕ್ತ ವಿಚಾರ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ಹಂಚಿಕೊಳ್ಳಲು ಮರೆಯದಿರಿ.

ವಿವಿಧ ಪೂಜಾ ಸಮಯದಲ್ಲಿ ಬೇರೆ ಬೇರೆಯ ಮಂತ್ರ ಪಠಣ ಮಾಡುತ್ತೇವೆ ಹಾಗೂ ಶ್ಲೋಕಗಳನ್ನು ಪಟಿಸುತ್ತೇವೆ ಆದ್ರೆ ಇದರಿಂದ ಏನು ಪ್ರಯೋಜನಕಾರಿ ಅನ್ನೋದನ್ನ ನೋಡುವುದಾದ್ರೆ ಮೊದಲನೆಯದಾಗಿ ಮಂತ್ರ ಪಠಣದಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ, ಇನ್ನು ಭಯಭಕ್ತಿ ಉಂಟಾಗುತ್ತದೆ ಬೇರೆಯವರಿಗೂ ಗೌರವ ನೀಡುವ ಸ್ವಭಾವ ಬೆಳೆಯುತ್ತದೆ.

ಆತ್ಮಸ್ಥೈರ್ಯ ದೈವೀಶಕ್ತಿ ಬರುವುದರ ಜೊತೆಗೆ ನಕಾರಾತ್ಮಕತೇ ನಮ್ಮಲ್ಲಿ ದೂರವಾಗುತ್ತದೆ, ಅಷ್ಟೇ ಅಲ್ಲದೆ ಏಕಾಗ್ರತೆ ಹೆಚ್ಚುವುದು ಮಾತಿನ ದೋಷಗಳು ನಿವಾರಣೆಯಾಗುವುದು. ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಬಹುದು ಏನಾದರು ಸಾಧಿಸಬೇಕು ಅನ್ನೋ ಛಲ ಮನಸ್ಸಿನಲ್ಲಿ ಮೂಡುತ್ತದೆ ಇನ್ನು ಉತ್ತಮ ಸಂಸ್ಕಾರ ಬರುತ್ತದೆ. ಹೀಗೆ ಹತ್ತಾರು ಲಾಭಗಳನ್ನು ಮಂತ್ರ ಶ್ಲೋಕ ಪಠಣದಿಂದ ಪಡೆದುಕೊಳ್ಳಬಹುದಾಗಿದೆ.

ಇನ್ನು ಮಂತ್ರ ಪಠಣ ಮಾಡುವ ರೀತಿ ಹೇಗಿರಬೇಕು ಅನ್ನೋದನ್ನ ನೋಡುವುದಾದರೆ, ಮಂತ್ರವನ್ನು ಸ್ವಚ್ಛವಾಗಿ ಯಾವ ಲೋಪ ದೋಷವಿಲ್ಲದೆ ಸ್ಪಷ್ಟವಾಗಿ ಉಚ್ಚರಿಸಬೇಕು ಅದು ತಪ್ಪಾದರೆ ಏನು ಪ್ರಯೋಜನವಿಲ್ಲ ಮಂತ್ರವನ್ನು ಹೇಳಿಕೊಳ್ಳುವ ಮೊದಲು ಬರೆದುಕೊಂಡು ಕಂಠಪಾಠ ಮಾಡಬೇಕು ನಂತರ ನಿರಂತರವಾಗಿ ಹೇಳಿ ಕೊಳ್ಳಬೇಕು ಅದಕ್ಕಾಗಿಯೇ ಸಮಯವನ್ನು ಮೀಸಲಿಡುವ ಅಗತ್ಯವಿಲ್ಲ ಒಂದು ಚೀಟಿ ಅಥವಾ ಕಾಗದದಲ್ಲಿ ಅದನ್ನು ಬರೆದುಕೊಳ್ಳಬೇಕು, ಸಮಯ ಸಿಕ್ಕಾಗೆಲ್ಲ ಅದನ್ನು ೧೦ ರಿಂದ ೨೦ ಬಾರಿ ಪಠಿಸಿದರೆ ಅದು ಕಂಠಪಾಠವಾಗಿ ನಿಮಗೆ ಸ್ಪಷ್ಟವಾಗಿ ಉಚ್ಚರಿಸಲು ಸಹಕಾರಿಯಾಗುತ್ತದೆ.

Leave a Comment

error: Content is protected !!