ನಿಮ್ಮ ಪಾದಗಳು ನೀವು ಹೇಗೆ ಅನ್ನೋದನ್ನ ತಿಳಿಸುತ್ತವೆ

ಮನುಷ್ಯನ ಗುಣಗಳನ್ನ ಮನುಷ್ಯನ ದೇಹದ ಕೆಲವು ಭಾಗಗಳಿಂದಲೂ ಹೇಳಬಹುದು ಎಂಬ ವಿಚಾರವನ್ನು ನಮ್ಮ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅದೂ ಸಹ ಎಷ್ಟರವರೆಗೆ ಎಂದರೆ ನಮ್ಮ ಬಗ್ಗೆ ನಮಗೇ ತಿಳಿಯದಷ್ಟು. ಆದರೆ ಇಂತಹ ವಿಷಯಗಳ ಬಗ್ಗೆ ನಾವು ತುಂಬಾ ತಲೆ ಕೆಡಿಸಿಕೊಳ್ಳೋದೇ ಇಲ್ಲ. ನಮ್ಮ ಕಾಲಿನ ಆಕಾರದಿಂದ ಮನುಷ್ಯನ ಗುಣವನ್ನು ಕಂಡುಹಿಡಿಯಲಾಗತ್ತೆ ಅಂತ ಹೇಳ್ತಾರೆ. ಇದು ನೂರಾರು ವರ್ಷಗಳ ಹಿಂದೆ ಗ್ರೀಕ್ ನಲ್ಲಿ ಚಾಲ್ತಿಯಲ್ಲಿತ್ತು. ನಮ್ಮಲ್ಲಿ ಜಾತಕ ನೋಡುವ ಹಾಗೇ ನಮ್ಮ ಕಾಲಿನ ಜಾತಕ ನೋಡಿ ನಮ್ಮ ಗುಣಗಳನ್ನು ಹೇಳುತ್ತಾರೆ ಒಬ್ಬೊಬ್ಬರ ಕಾಲಿನ ಪಾದಗಳೂ ಒಂದೊಂದು ತರಾ ಇರತ್ತೆ ಈ ಲೇಖನದಲ್ಲಿ ನಾವು ಯಾರ ಪಾದಗಳು ಹೇಗೆ ಇದ್ದರೆ ಯಾವ ಯಾವ ಗುಣಗಳನ್ನು ಹೊಂದಿರುತ್ತಾರೆ ಎಂಬುದರ ಕುರಿತಾಗಿ ತಿಳಿಸಿಕೊಡುತ್ತೀವಿ ಓದಿ ತಿಳಿದುಕೊಳ್ಳಿ.

ಮೊದಲನೇಯದು ಈಜಿಪ್ಟ್ ಫೂಟ್ ಶೇಪ್. ಅಂದ್ರೆ ಬೆರಳುಗಳು ಹೆಬ್ಬೆರಳಿನಿಂದ ಕಿರುಬೆರಳವರೆಗೆ ಇಳಿಮುಖವಾಗಿ ಇರತ್ತೆ . ಈ ರೀತಿಯ ಪಾದ ಇರುವವರು ತುಂಬಾ ರಹಸ್ಯಮಯ ವ್ಯಕ್ತಿಗಳಾಗಿರುತ್ತಾರೆ ಸಮಾಜದಲ್ಲಿ ಯಾರೊಂದಿಗೂ ಬೆರೆಯಲು ಇಷ್ಟ ಪಡಲ್ಲ. ಒಂಟಿಯಾಗಿ ಇರೋಕೆ ಬಯಸುತ್ತಾರೆ ಇವರು ಒಂದೊಂದು ಟೈಂನಲ್ಲಿ ಒಂದೊಂದು ರೀತಿ ಇರ್ತಾರೆ.

ಎರಡನೇಯದಾಗಿ ರೋಮನ ಫೂಟ್ ಶೇಪ್. ಇದರ ಪ್ರಕಾರ ಮೊದಲ ೩ ಬೆರಳುಗಳು ಒಂದೇ ಸಮವಾಗಿ ಇರುತ್ತವೆ. ಇವರು ಎಲ್ಲರ ಜೊತೆಗೂ ಬೆರೆತು ಸ್ನೇಹಿತರಾಗಿರುತ್ತಾರೆ. ತುಂಬಾ ಹೆಸರು ಗಳಿಸುತ್ತಾರೆ ಹಾಗೂ ಜನರ ನಡುವೆ ಒಳ್ಳೆಯ ಸ್ನೇಹ ಸಂಬಂಧ ಹೊಂದಿರುತ್ತಾರೆ‌ .

ಮೂರನೇಯದು ಫೆಸನ್ ಫೂಟ್ ಶೇಪ್. ಇದರ ಪ್ರಕಾರ ಎಲ್ಲಾ ಬೆರಳುಗಳೂ ಸಮವಾಗಿ ಇರುತ್ತವೆ. ಇಂತಹ ಕಾಲು ಬೆರಳು ಹೊಂದಿರುವ ವ್ಯಕ್ತಿಗಳು ತುಂಬಾ ಸೂಕ್ಷ್ಮವಾಗಿ ಆಲೋಚಿಸುವ ವ್ಯಕ್ತಿತ್ವ ಆಗಿರತ್ತೆ. ತುಂಬಾ ಸೌಮ್ಯವಾಗಿ ಇರುವ ಜನರಾಗಿದ್ದು ವಾಸ್ತವದಲ್ಲಿ ಬದುಕಲು ಇಷ್ಟಪಡುತ್ತಾರೆ. ಇವರ ಹತ್ತಿರ ತೊಂದರೆ ಎಂಬ ಪದವೇ ಬರಲ್ಲ ಇವರನ್ನ ತುಂಬಾ ಜನ ನಂಬುತ್ತಾರೆ ಯಾಕಂದ್ರೇ ಇವರು ಒಂದು ಬಾರಿ ಮಾತು ಕೊಟ್ರೆ ಮಾತಿಗೆ ತಪ್ಪಲ್ಲ.

ನಾಲ್ಕನೇಯದಾಗಿ ಗ್ರೀಕ್ ಫುಟ್ ಶೇಪ್ ಇದರ ಪ್ರಕಾರ, ಎರಡನೇಯ ಬೆರಳು ಉಳಿದ ಬೆರಳುಗಳಿಗಿಂತ ಉದ್ದವಾಗಿರತ್ತೆ. ಇವರು ತುಂಬಾ ಕೋಪಿಷ್ಠರಾಗಿರ್ತಾರೆ ಆದರೂ ಒಳ್ಳೆಯ ಮನಸ್ಸನ್ನ ಹೊಂದಿರುತ್ತಾರೆ. ಉತ್ತಮ ಕ್ರೀಡಾ ಪಟುಗಳೂ ಆಗಿರ್ತಾರೆ.

ಐದನೇಯದು ಮಿನಿ ಫುಟ್ ಶೇಪ್. ಇದರಲ್ಲಿ ಕಿರು ಬೆರಳು ಅಲುಗಾಡಲ್ಲ. ಅದರ ಪಾಡಿಗೆ ಅದು ನಿಸ್ಸಹಾಯಕವಾಗಿದ್ದಂತೇ ಇರತ್ತೆ. ಇವರು ಉತ್ತಮ ಜೀವನಕ್ಕಾಗಿ ಬದುಕುತ್ತಾ ಇರುತ್ತಾರೆ. ಹೆಚ್ಚಾಗಿ ಕಷ್ಟ ಪಡುತ್ತಾರೆ ಸ್ವಂತ ಪರಿಶ್ರಮದ ಮೇಲೆ ಬದುಕೋಕೆ ಇಷ್ಟ ಪಡುತ್ತಾರೆ‌ .

ಆರನೇಯದು ಇದು ತುಂಬಾ ವಿಚಿತ್ರವಾದದ್ದು, ಮೇಲೆ ಹೇಳಿದ ಹಾಗೇ ಮಿನಿ ಫುಟ್ ಶೇಪ್ ನಲ್ಲಿ ಬೆರಳನ್ನ ಅಲುಗಾಡಿಸಲು ಆಗಲ್ಲ. ಆದರೆ ಇಲ್ಲಿ ಮಾಂಸಕಂಡಗಳನ್ನ ಅಲುಗಾಡಿಸಲು ಆಗಲ್ಲ. ಈ ರೀತಿಯ ಪಾದ ಹೊಂದಿರುವವರು ಸದಲಾವಣೆಯನ್ನ ಬಯಸುತ್ತಾರೆ‌. ಕೆಲವೊಂದು ಪ್ರಯೋಗಗಳನ್ನು ಮಾಡುತ್ತಾ ಎಲ್ಲರನ್ನೂ ಅಚ್ಚರಿ ಪಡಿಸುತ್ತ ಇರುತ್ತಾರೆ. ಎಲ್ಲರ ಜೊತೆಗೂ ಪ್ರೀತಿಯಿಂದ ಇರುತ್ತಾರೆ.

ಇನ್ನು ಏಳನೇಯದಾಗಿ, ಕಿರುಬೆರಳು ಚಿಕ್ಕದಾಗಿದ್ದು ಉಳಿದ ಬೆರಳುಗಳಿಂದ ದುರ ಇರುತ್ತವೆ‌ . ಈ ರೀತಿಯ ಪಾದ ಇರುವವರು ತುಂಬಾ ರೆಬಲ್ ಆಗಿ ಇರುತ್ತಾರೆ ಹಾಗೂ ಜನ ಹೇಳೋದು ಒಂದು ಇವರು ಮಾಡುವದು ಇನ್ನೊಂದು ಆಗಿರತ್ತೆ. ತುಂಬಾ ನಕಾರಾತ್ಮಕ ಚಿಂತನೆ ಮಾಡುತ್ತಾರೆ. ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಗಳಿಸುತ್ತಾರೆ ಹಾಗೂ ತುಂಬಾ ಲಕ್ಕೀ ಆಗಿರ್ತಾರೆ. ಹಾಗಿದ್ರೆ ಈ ೭ ಪಾದಗಳಲ್ಲಿ ನಿಮ್ಮ ಪಾದದ ಆಕಾರ ಯಾವುದು ಅಂತ ನೋಡಿಕೊಳ್ಳಿ‌

Leave a Comment

error: Content is protected !!