Libra Astrology: ಫೆಬ್ರವರಿ ತಿಂಗಳಲ್ಲಿ ತುಲಾ ರಾಶಿಯವರಿಗೆ ಕೆಲಸ ಕಾರ್ಯದಲ್ಲಿ ಲಾಭ, ಆದ್ರೆ ಪ್ರಯಾಣದಲ್ಲಿ ಎಚ್ಚರವಾಗಿರಿ
February Astrology ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಫೆಬ್ರವರಿ ತಿಂಗಳಿನಲ್ಲಿ ತುಲಾರಾಶಿಯವರ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿಯೋಣ ಬನ್ನಿ. ಸಣ್ಣಪುಟ್ಟ ಯಾವುದೇ ರೀತಿಯ ಕೆಲಸ ಇರಲಿ ಅಥವಾ ಯಾರ ಬಳಿಯ ನೀವು ಕೆಲಸ ಮಾಡಿ ನಿಮಗೆ ಖಂಡಿತವಾಗಿ ಯಶಸ್ಸು(Success) ಹಾಗೂ ಮಾಡುತ್ತಿರುವ ಕೆಲಸದಲ್ಲಿ ನೆಮ್ಮದಿ ದೊರಕುತ್ತದೆ. ಸಾಕಷ್ಟು ವರ್ಷಗಳಿಂದ ಒಂಟಿಯಾಗಿರುವಂತಹ ವ್ಯಕ್ತಿಗಳು ಮದುವೆ ಆಗುವಂಥ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.
ತುಲಾ ರಾಶಿಯ ವಿದ್ಯಾರ್ಥಿಗಳಿಗೆ ಫೆಬ್ರವರಿ ತಿಂಗಳಲ್ಲಿ ಉದ್ಯೋಗಕ್ಕೆ ಸಂಬಂಧಿಸಿದಂತಹ ಅಡೆತಡೆಗಳು ಆಗಾಗ ಕಂಡುಬರುತ್ತವೆ. ಇನ್ನೂ ಒಂದು ವೇಳೆ ನೀವು ಹೊಸ ವಾಹನವನ್ನು(New Vehicle) ಖರೀದಿಸಬೇಕು ಎನ್ನುವ ಯೋಜನೆಯನ್ನು ಹಾಕಿಕೊಂಡಿದ್ದರೆ ಫೆಬ್ರವರಿ ತಿಂಗಳಿನಲ್ಲಿ ತೆಗೆದುಕೊಳ್ಳುವುದು ಬೇಡ ಸ್ವಲ್ಪ ಮುಂದೂಡಿ. ಒಂದು ವೇಳೆ ನೀವು ಹಠ ಮಾಡಿ ಇದೇ ತಿಂಗಳಿನಲ್ಲಿ ವಾಹನವನ್ನು ಖರೀದಿಸಿದರೆ ವಾಹನ ಹಾನಿ ಆಗಬಹುದಾದ ಸಾಧ್ಯತೆ ಇದೆ ಹಾಗೂ ವಾಹನದಲ್ಲಿ ಚಲಾಯಿಸುವಾಗ ನಿಮಗೂ ಕೂಡ ಅಪಾಯವಾಗುವ ಸಾಧ್ಯತೆ ಇದೆ.

ಇನ್ನು ವಾಹನ ಚಲಾವಣೆಯ ಸಂದರ್ಭದಲ್ಲಿ ಕೂಡ ಪ್ರತಿ ಬಾರಿ ಲಕ್ಷ್ಮಿ ನಾರಾಯಣ ಸ್ವಾಮಿಯ ಸ್ಮರಣೆಯನ್ನು ಮಾತ್ರ ತಪ್ಪದೆ ಮಾಡಿ. ಇನ್ನು ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಅಡೆತಡೆಗಳನ್ನು ಅನುಭವಿಸುತ್ತಿದ್ದರೆ ವಿದ್ಯಾ ಅಧಿದೇವತೆ ಸರಸ್ವತಿ ಆಂಜನೇಯ ಸ್ವಾಮಿ ಹಾಗೂ ದುರ್ಗಾಮಾತೆಯ ಸ್ಮರಣೆ ಹಾಗೂ ಶುಭ ಸಂದರ್ಭದಲ್ಲಿ ಪೂಜೆ ಮಾಡುವುದು ಒಳಿತನ್ನು ತಂದು ಕೊಡುತ್ತದೆ. ಸಾಮಾನ್ಯವಾಗಿ ಫೆಬ್ರವರಿ ತಿಂಗಳು ಎನ್ನುವುದು ನಿಮಗೆ ಗೆಲುವನ್ನೇ ತಂದುಕೊಡುತ್ತದೆ ಆದರೆ ಕೆಲವೊಂದು ಕ್ಷೇತ್ರಗಳಲ್ಲಿ ಮಾತ್ರ ಎಚ್ಚರಿಕೆಯಿಂದ(Precautions) ಮುನ್ನುಗ್ಗಬೇಕು.
ಚರ್ಮ ಹಾಗೂ ಕಣ್ಣಿನ ಆರೋಗ್ಯದ(Health) ಕುರಿತಂತೆ ಸ್ವಲ್ಪ ಜಾಗರೂಕರಾಗಿರಬೇಕು. ನಾಗಾರಾಧನೆ ಮಾಡುವುದು ಉತ್ತಮ ಹಾಗೂ ಕಣ್ಣಿನ ಸ್ವಾಸ್ಥ್ಯಕ್ಕಾಗಿ ಯೋಗಾಭ್ಯಾಸ ಮಾಡುವುದು ಉತ್ತಮ. ಯಾವುದೇ ರೀತಿಯ ಸಮಸ್ಯೆಗಳು ಬಂದರೂ ಕೂಡ ದಿನನಿತ್ಯ ನಿಮ್ಮ ದೈವೀಕ ಆಚರಣೆಗಳು ಹಾಗೂ ಮಂತ್ರ ಪಠಣೆಗಳು ನಿಮ್ಮನ್ನು ಕಾಪಾಡುತ್ತದೆ. ಹೀಗಾಗಿ ಅವುಗಳನ್ನು ಮಾತ್ರ ಕಡೆಗಣಿಸಬೇಡಿ. ನೀವು ಕೂಡ ತುಲಾ ರಾಶಿಯವರಾಗಿದ್ದರೆ ತಪದ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.