ಕಷ್ಟಗಳಿಂದ ಮುಕ್ತರಾಗಲು ಚಾಣಕ್ಯನ ಈ ಮಾತುಗಳೇ ಸಾಕು

ಪುಣ್ಯದ ಕೆಲಸ ಮಾಡದೆ ಪುಣ್ಯವನ್ನು ಬಯಸುತ್ತಾರೆ ಆದರೆ ಪಾಪದ ಕೆಲಸ ಮಾಡುವವರು ಪಾಪದ ಕರ್ಮ ಫಲವನ್ನು ಅನುಭವಿಸಲು ಸಿದ್ಧ ಇರುವುದಿಲ್ಲ. ಅದು ಯಾರಿಗೂ ಬೇಕಾಗಿಯೂ ಇರುವುದಿಲ್ಲ. ಪಾಪದ ಕೆಲಸದಿಂದ ಸಪಮಾಡಿಸಿದ ಹಣದಿಂದ ಕುಳಿತು ತಿನ್ನುವುದು ಅದನ್ನ ಖರ್ಚು ಮಾಡುವುದು ಮಾಡಬಾರದು.

ಸುಳ್ಳು ಹೇಳಿ ಸಂಬಂಧವನ್ನು ಕೆಡಿಸುವ ಬದಲು ಸತ್ಯ ಹೇಳಿ ಆ ಸಂಬಂಧವನ್ನು ಉಳಿಸಿಕೊಳ್ಳಲು ನೋಡಬೇಕು. ಯಾವುದೇ ಅನುಮಾನ ಸಂಶಯ ಇಲ್ಲದೆ ಹೊಂದಿಕೊಂಡು ಬಾಳಬೇಕು ಜೀವನ ನಡೆಸಬೇಕು. ನಮ್ಮಲ್ಲಿ ಅಹಂಕಾರ ಇರಬಾರದು. ಜೀವನದಲ್ಲಿ ಮುಂದೆ ಬರುವ ವ್ಯಕ್ತಿ ಯಾರಿಗೂ ಹಾನಿಯನ್ನುಂಟು ಮಾಡಲಾರ ಹಾಗೆ ಇನ್ನೊಬ್ಬರಿಗೆ ಕೆಟ್ಟದಾಗಲೀ ಎಂದು ಬಯಸುವ ವ್ಯಕ್ತಿ ಎಂದಿಗೂ ಜೀವನದಲ್ಲಿ ಮುಂದೆ ಬರಲಾರ.

ಯಾವುದೇ ಒಬ್ಬ ಒಳ್ಳೆಯ ವ್ಯಕ್ತಿಯಿಂದ ತಪ್ಪು ನಡೆದರೆ ಅದನ್ನು ಸಹಿಸಿಕೊಂಡು ಸುಮ್ಮನಿದ್ದು ಬಿಡಿ ಯಾಕೆಂದರೆ ಕೊಚ್ಚೆಯಲ್ಲಿ ಬಿದ್ದ ವಜ್ರ ಎಂದಿಗೂ ತನ್ನ ಹೊಳಪನ್ನು ಕಳೆದುಕೊಳ್ಳುವುದಿಲ್ಲ ಹಾಗೆಯೇ ಒಬ್ಬ ಒಳ್ಳೆಯ ವ್ಯಕ್ತಿ ಒಂದು ತಪ್ಪನ್ನು ಮಾಡಿದ ಕ್ಷಣ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹಾಗೆಯೇ ಕೋಪ ಮತ್ತು ತಾಳ್ಮೆ ಕೂಡ ಕೋಪ ಬರುವಾಗ ಒಂಟಿಯಾಗಿ ಬರುತ್ತದೆ ಆದರೆ ಹೋಗುವಾಗ ಶಾಂತಿ ನೆಮ್ಮದಿ ಎಲ್ಲವನ್ನೂ ಕಿತ್ತುಕೊಂಡು ಹೋಗುತ್ತದೆ ಆದರೆ ತಾಳ್ಮೆ… ನಾವು ಒಂದು ಕ್ಷಣದಲ್ಲಿ ವಹಿಸುವ ತಾಳ್ಮೆ ನಮಗೆ ಎಷ್ಟು ಲಾಭವನ್ನು ಉಂಟುಮಾಡುತ್ತದೆ

ಸಮಾಜದಲ್ಲಿ ಏಕೆ ಬದಲಾವಣೆ ಉಂಟಾಗುವುದಿಲ್ಲ? ಎಂಬ ಪ್ರಶ್ನೆಗೆ ಚಾಣಕ್ಯ ಹೀಗೆ ಉತ್ತರಿಸುತ್ತಾರೆ. ಸಮಾಜವನ್ನು ಬದಲಾಯಿಸಲು ಬಡವರಲ್ಲಿ ಧೈರ್ಯವಿಲ್ಲ ಮಧ್ಯಮ ವರ್ಗದ ಜನರಲ್ಲಿ ಸಮಯವಿಲ್ಲ ಶ್ರೀಮಂತ ವರ್ಗದ ಜನರಿಗೆ ಅದು ಬೇಕಾಗಿಲ್ಲ. ಯಾರದ್ದೋ ಅಂತ್ಯಸಂಸ್ಕಾರಕ್ಕೆ ಹೋದರೆ ಅದು ಅವರನ್ನ ಅಂತಿಮ ಸ್ಥಳಕ್ಕೆ ಕಳುಹಿಸಲು ಹೋಗಿರುವುದಾಗಿ ತಿಳಿಯುವುದರ ಬದಲು ಕೊನೆಗೊಂದು ದಿನ ನಮಗೂ ಇದೇ ಗತಿ ಎಂಬುದನ್ನು ತಿಳಿಯಲು ಹೋಗಿರುವುದು ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು..

ಯಾವೊಬ್ಬ ವ್ಯಕ್ತಿ ನಮ್ಮನ್ನು ಕಂಡು ಅಸೂಯೆ ಪಟ್ಟುಕೊಳ್ಳುತ್ತಾನೆ ಅವನನ್ನ ನಾವು ದ್ವೇಷಿಸ ಬಾರದು ಏಕೆಂದರೆ ಅವರಿಗೂ ತಿಳಿದಿರುತ್ತದೆ ನಾವು ಅವರಿಗಿಂತ ದೊಡ್ಡವರೆಂದು. ಇನ್ನೊಂದು ವಿಷಯವೇನೆಂದರೆ ನಮ್ಮ ಹಿಂಬದಿಯಿಂದ ಮಾತನಾಡುವ ಜನರಿದ್ದಾಗ ಲೆ ನಮಗೆ ಇನ್ನೂ ಬೆಳೆಯಬೇಕು ಎಂಬುವ ಹಠ ಛಲ ಮೂಡುತ್ತದೆ. ಯಾವ ವ್ಯಕ್ತಿ ಇನ್ನೊಬ್ಬರ ಸಂತೋಷಕ್ಕಾಗಿ ತನ್ನ ಸೋಲನ್ನು ಒಪ್ಪಿಕೊಳ್ಳುತ್ತಾನೆ ಅವನ ಮುಂದೆ ನಾವು ಎಂದಿಗೂ ಗೆಲ್ಲಲು ಸಾಧ್ಯವಿಲ್ಲ.

ನಮ್ಮ ಜೀವನವನ್ನು ಇನ್ನೊಬ್ಬರ ಜೀವನ ಜೊತೆ ಎಂದಿಗೂ ಹೋಲಿಕೆ ಮಾಡಿ ನೋಡಬಾರದು ಒಬ್ಬೊಬ್ಬರದು ಒಂದೊಂದು ರೀತಿಯ ಜೀವನವೇ ಇರುತ್ತದೆ. ಕೆಲವೊಂದು ಸಲ ತೀರ ಅಜ್ಞಾನಿ ಆದವನಿಗೆ ತಿಳಿಸಿ ಹೇಳಬಹುದು ಜ್ಞಾನಿಗೆ ಅವ ನೇ ತಿಳಿದುಕೊಂಡಿರುತ್ತಾನೆ ಆದರೆ ಎಲ್ಲವನ್ನೂ ತಿಳಿದುಕೊಂಡಿರುವಂತೆ ನಟಿಸುವ ಅರ್ಧ ತಿಳಿದವನಿಗೆ ಎಷ್ಟೇ ಪ್ರಯತ್ನಪಟ್ಟರೂ ತಿಳಿಸಿ ಹೇಳುವುದು ಕಷ್ಟಸಾಧ್ಯ. ಅಂತಹ ವ್ಯಕ್ತಿಗಳಿಗೆ ಕಾಲವೇ ಸರಿದು ಪಾಠವನ್ನು ಕಲಿಸಿ ತಿಳಿಸುತ್ತದೆ.

ನಾವು ಅವಶ್ಯಕತೆಗೆ ಅನುಸಾರವಾಗಿ ಬದುಕುತ್ತಿದ್ದೇವೆ. ಒಬ್ಬರ ಅವಶ್ಯಕತೆ ನಮಗೆ ಇದ್ದಾಗ ಮಾತ್ರ ಅವರೊಟ್ಟಿಗೆ ಚೆನ್ನಾಗಿ ಇರುತ್ತೇವೆ ಅವಶ್ಯಕತೆ ಮುಗಿದ ಮೇಲೆ ನಮಗೆ ಸಂಬಂಧವೇ ಇರುವುದಿಲ್ಲ. ಹಾಗೆಯೇ ಬಡವ-ಶ್ರೀಮಂತ ಕೂಡ. ಶ್ರೀಮಂತನ ಮನೆ ಮೇಲೆ ಕುಳಿತ ಕಾಗೆ ಕೋಗಿಲೆಯೆಂದೇ ಕಾಣುತ್ತದೆ ಅದೇ ಬಡವನ ಮನೆ ಮಗು ಕಳೆ ನಮಗೂ ಎಂದೇ ತೋರುತ್ತದೆ. ಮನುಷ್ಯನ ಒಳ್ಳೆತನವನ್ನು ನೋಡಿ ಪ್ರತಿಯೊಬ್ಬರು ಸುಮ್ಮನಿರುತ್ತಾರೆ ಅದೇ ವ್ಯಕ್ತಿ ಒಂದು ಸಮು ತಪ್ಪನ್ನು ಮಾಡಿದರು ಸಹ ಮಾತನಾಡಲು ಪ್ರಾರಂಭಿಸುತ್ತಾನೆ.

ಹಾವಿನ ಹಲ್ಲಿನಲ್ಲಿ ಚೇಳಿನ ಕೊಂಡಿಯಲ್ಲಿ ಮನುಷ್ಯನ ದೇಹದಲ್ಲಿ ಎಷ್ಟು ವಿಷವಿದೆ ಎಂಬುದನ್ನು ತಿಳಿದವರು ಯಾರು? ನಮ್ಮನ್ನು ಇಷ್ಟು ಜನ ಗುರುತಿಸುತ್ತಿದ್ದಾರೆ ಎಂಬುದು ಮುಖ್ಯವಲ್ಲ ನಮ್ಮ ಯಾವ ಗುಣದಿಂದ ನಮ್ಮನ್ನು ಗುರುತಿಸುತ್ತಿದ್ದಾರೆ ಎಂಬುದು ಮುಖ್ಯ. ಇಷ್ಟೇ ಈ ಮಾನವ ಜನ್ಮ

Leave a Comment

error: Content is protected !!