ಕೈ ಕಾಲುಗಳಿಗೆ ಕಪ್ಪು ದಾರ ಕಟ್ಟಿಕೊಳ್ಳುವುದರಿಂದ ಆಗುವ ಪ್ರಯೋಜನವೇನು?

ನಮ್ಮ ಸುತ್ತಮುತ್ತಲೂ ಜನರು ತಮ್ಮ ಕೈ ಕಾಲುಗಳಿಗೆ ಕಪ್ಪು ದಾರವನ್ನು ಕಟ್ಟಿಕೊಂಡಿರುವುದನ್ನ ನೋಡಿರುತ್ತೇವೆ. ಇದಕ್ಕೆ ಹೀಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದಕ್ಕೆ ಒಂದು ಇತಿಹಾಸ, ಸತ್ಯಾಂಶವಿದೆ ಅದರ ಕುರಿತು ತಿಳಿದುಕೊಳ್ಳೋಣ ಬನ್ನಿ.

ಯಾರೇ ಆಗಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಯಾವುದೇ ಧರ್ಮದವರು ಈ ಕಪ್ಪು ದಾರಕ್ಕೆ ಅವರದ್ದೇ ಆದ ವಿಶೇಷತೆಯಿದೆ. ಕಪ್ಪು ದಾರವನ್ನು ತಮ್ಮ ಕಾಲುಗಳಿಗೆ ಕಟ್ಟಿಕೊಳ್ಳಲು ತುಂಬಾ ಇಷ್ಟ ಪಡುತ್ತಾರೆ ಯಾಕೆಂದ್ರೆ, ಈ ಬ್ಲಾಕ್ ಮಾಜಿಕ್ ಅಂದ್ರೆ ಮಾಟ ಮಂತ್ರಗಳಿಂದ ದೂರ ಇರಬಹುದು ಎಂದು ನಂಬುತ್ತಾರೆ. ಈ ಕಪ್ಪು ದಾರದಲ್ಲಿ ಅಗಾಧವಾದ ನಿಗೂಢ ಶಕ್ತಿಗಳು ಅಡಗಿವೆ ಎಂದು ನಂಬುತ್ತಾರೆ.

ವ್ಯಕ್ತಿಯ ಮೇಲೆ ಕೆಟ್ಟ ದೃಷ್ಟಿ ಬಿದ್ದರೆ ಆಗ ಕಪ್ಪು ದಾರವನ್ನು ಆ ವ್ಯಕ್ತಿಯ ಕುತ್ತಿಗೆಗೆ ಅಥವಾ ಕಾಲಿಗೆ ಕಟ್ಟಿದರೆ ಆ ಕೆಟ್ಟ ದೃಷ್ಟಿಯಿಂದ ಪಾರಾಗಬಹುದು ಹಾಗೂ ನಕಾರಾತ್ಮಕ ಶಕ್ತಿ ಹೋಗಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ನಂಬಿಕೆ ಇದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕೂಡ ಕಪ್ಪು ಬಣ್ಣಕ್ಕೆ ಮಹತ್ವ ಇದೆ ಯಾರ ಜಾತಕದಲ್ಲಿ ಶನಿ ದೋಷವಿದೆಯೋ ಅವರು ಕಪ್ಪು ಬಣ್ಣದ ದಾರವನ್ನು ಕಟ್ಟಿಕೊಂಡರೆ ದೋಷದಿಂದ ಮುಕ್ತಿ ಹೊಂದಬಹುದು ಇದರಿಂದ ಆರ್ಥಿಕ ಸ್ಥಿತಿ ಸುಧಾರಣೆಗೊಂದು ಲಕ್ಷ್ಮಿ ಕೃಪೆ ಆಗುತ್ತದೆ ಎನ್ನುತ್ತಾರೆ.

ಆದ್ರೆ ಕೆಲವರು ಪ್ಯಾಷನ್ಗೆ ಕಪ್ಪು ದರವನ್ನು ಕಟ್ಟಿಕೊಂಡರೆ ಇನ್ನು ಕೆಲವರು ದೃಷ್ಟಿ ಬೀಳದೆ ಇರಲಿ ಹಾಗೂ ದೋಷಮುಕ್ತರಾಗಲು ಇವುಗಳನ್ನು ಕಟ್ಟಿಕೊಳ್ಳುತ್ತಾರೆ, ಎಲ್ಲವು ಕೂಡ ಅವರವರ ಮನಸ್ಥಿಗೆ ಬಿಟ್ಟಿದ್ದು ಅನ್ನೋದನ್ನ ಹೇಳಬಹುದು.

Leave a Comment

error: Content is protected !!