ಆತ್ಮೀಯ ಓದುಗರೇ ಮನುಷ್ಯ ನಂಬಿಕೆ ಮೇಲೆ ಹಲವು ಬಗೆಯ ಕಾರ್ಯಗಳಲ್ಲಿ ತೊಡಗುತ್ತಾನೆ ಅಲ್ಲದೆ ಇವನ ಗುಣ ಸ್ವಭಾವವನ್ನು ಶಾಸ್ತ್ರಗಳ ಮೂಲಕ ತಿಳಿಯಬಹುದು. ಮದುವೆಯಾಗುವ ಹುಡುಗಿಯರಲ್ಲಿ ಇಂತಹ ಲಕ್ಷಣಗಳಿದ್ರೆ ಗಂಡನಿಗೆ ಅದೃಷ್ಟ ತರುತ್ತೆ ಅನ್ನುತ್ತೆ ಸಾಮುದ್ರಿಕ ಶಾಸ್ತ್ರ ಹೌದು ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ

ಮೊದಲನೆಯದಾಗಿ ಹೇಳುವುದಾದರೆ ಸಾಮುದ್ರಿಕ ಶಾಸ್ತ್ರದಲ್ಲಿ ಮಹಿಳೆಯರ ಕೆಲವು ಗುಣಗಳ ಬಗ್ಗೆ ಹೇಳಲಾಗಿದೆ. ಕೆಲವು ವಿಶೇಷತೆ ಹೊಂದಿರುವ ಮಹಿಳೆಯರನ್ನು ಅದೃಷ್ಟವಂತರೆಂದು ಉಲ್ಲೇಖಿಸಲಾಗಿದೆ. ಮುಖ, ದೇಹದ ಅಂಗಗಳ ರಚನೆ ಆಧಾರದಲ್ಲಿ ಮಹಿಳೆಯರ ಅದೃಷ್ಟ ಅಡಗಿರುತ್ತದೆ. ಸಾಮುದ್ರಿಕ ಶಾಸ್ತ್ರದ ಪ್ರಕಾರ ಯಾರ ತಲೆಯು 3 ಬೆರಳುಗಳಿಗಿಂತ ಹೆಚ್ಚು ಅಗಲವಾಗಿರುತ್ತದೆ ಹಾಗೆಯೆ ಹಣೆಯು ಅರ್ಧ ಚಂದ್ರನಂತೆ ಕಾಣುತ್ತದೆ ಅಂತಹ ಮಹಿಳೆಯರು ಅದೃಷ್ಟವಂತರು.

ಇಂತಹ ಹುಡುಗಿಯರು ಅತ್ತೆಗೆ ಅದೃಷ್ಟವಂತರಾಗಿರುತ್ತಾರೆ ಎಂದು ನಂಬಲಾಗಿದೆ. ಹಣೆಯ ಮೇಲೆ ತ್ರಿಶೂಲದ ಗುರುತು ಹೊಂದಿರುವಂತಹ ಮಹಿಳೆಯರನ್ನು ಬಹಳ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ವಧುಗಳಾಗುವ ಇಂತಹ ಹುಡುಗಿಯರ ಅದೃಷ್ಟವೂ ಹೆಚ್ಚಾಗುತ್ತದೆ. ಇದಲ್ಲದೆ ಕೆಂಪಾಗಿರುವ ಕಣ್ಣು ಮತ್ತು ಕಡು ಕಪ್ಪಾಗಿರುವ ರೆಪ್ಪೆಗಳನ್ನು ಹೊಂದಿರುವ ಮಹಿಳೆಯರನ್ನು ಸಹ ಅದೃಷ್ಟವಂತರು ಎಂದು ಹೇಳಲಾಗಿದೆ. ಸಾಮುದ್ರಿಕ ಶಾಸ್ತ್ರದ ಪ್ರಕಾರ ಯಾರ ನಡಿಗೆ ರಾಜಹಂಸದಂತೆ ಇರುತ್ತದೆ ಅಂತಹ ಮಹಿಳೆಯರು ಎಲ್ಲಾ ರೀತಿಯ ಸಂತೋಷ ಪಡೆಯುತ್ತಾರೆ.

ಮೂಗಿನ ಮೇಲೆ ಮಚ್ಚೆ ಇರುವ ಮಹಿಳೆಯರು ಬಹಳ ಅದೃಷ್ಟವಂತರು. ಇವರ ಜೀವನದಲ್ಲಿ ಸುಖ-ಸಂಪತ್ತಿಗೆ ಯಾವುದೆ ರೀತಿ ಕೊರತೆಯಿರುವುದಿಲ್ಲ. ಕಾಲಬೆರಳು ದುಂಡಗಿನ ಮತ್ತು ಕೆಂಪು ಬಣ್ಣದಲ್ಲಿರುವ ಮಹಿಳೆಯರು ಬಹಳ ಅದೃಷ್ಟವಂತರು ಅಂತಹ ಮಹಿಳೆಯರು ಗಂಡನಿಗೆ ಅದೃಷ್ಟವೆಂದು ಪರಿಗಣಿಸಲಾಗುತ್ತದೆ ಅಂದರೆ ಅವರಿಂದ ಅವರ ಗಂಡನಿಗೆ ಅದೃಷ್ಟ ಸಿಗಲಿದೆ

ಇದಲ್ಲದೆ ದೇಹದ ಎಡಭಾಗದಲ್ಲಿ ಮಚ್ಚೆ ಇರುವ ಮಹಿಳೆಯರನ್ನು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಮಹಿಳೆಯರು ತಮ್ಮ ಕೆಲವು ವಿಶೇಷ ಗುಣಗಳಿಂದ ಅದೃಷ್ಟ ಪಡೆಯುತ್ತಾರೆ, ಅವರ ಮುಖದ ಲಕ್ಷಣಗಳಿಂದ ಅವರ ಅದೃಷ್ಟವನ್ನು ಸಾಮುದ್ರಿಕಾ ಶಾಸ್ತ್ರದ ಮೂಲಕ ತಿಳಿಯಬಹುದು. ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಶುಭವಾಗಲಿ

By admin

Leave a Reply

Your email address will not be published.