ನಮ್ಮ ಹಿಂದೂ ಶಾಸ್ತ್ರವು ಒಟ್ಟು ಹನ್ನೆರಡು ರಾಶಿಗಳನ್ನು ಹೊಂದಿದೆ. ಅವುಗಳಲ್ಲಿ ಕನ್ಯಾ ರಾಶಿ ಕೂಡಾ ಒಂದು. ಪ್ರತಿಯೊಂದು ರಾಶಿಗಳು ಪ್ರತಿಯೊಂದು ತಿಂಗಳು ಬೇರೆ ಬೇರೆ ಭವಿಷ್ಯವನ್ನು ಹೊಂದಿರುತ್ತವೆ. ನಾವು ಇಲ್ಲಿ ಕನ್ಯಾ ರಾಶಿಯ ಡಿಸೆಂಬರ್ ತಿಂಗಳಿನ ಶುಭಫಲ ಮತ್ತು ಅಶುಭ ಫಲಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಡಿಸೆಂಬರ್ ತಿಂಗಳಿನಲ್ಲಿ ಈ ರಾಶಿಯವರು ಪ್ರಾಮಾಣಿಕವಾಗಿ ದುಡಿದ ಹಣಗಳು ಒಳ್ಳೆಯ ಸತ್ಕಾರ್ಯಕ್ಕಾಗಿ ಸದುಪಯೋಗ ಆಗುತ್ತದೆ. ಹಣಗಳು ಯಾವುದೇ ರೀತಿಯಲ್ಲೂ ಅನಾವಶ್ಯಕವಾಗಿ ಖರ್ಚಾಗುವುದಿಲ್ಲ. ಒಳ್ಳೆಯ ದಾರಿಯಿಂದ ದುಡಿದ ಹಣ ಮಾತ್ರ ಒಳ್ಳೆಯದನ್ನು ಮಾಡುತ್ತದೆ. ವಿದ್ಯಾರ್ಥಿಗಳು ಹೆಚ್ಚಾಗಿ ಓದಿನ ಮೇಲೆ ಗಮನ ಹರಿಸಬೇಕು. ಇದರಿಂದ ಒಳ್ಳೆಯ ಪ್ರತಿಫಲ ದೊರೆಯುತ್ತದೆ. ಮನುಷ್ಯ ಎಂದ ಮೇಲೆ ಸಂಬಂಧಗಳು ಇರಲೇಬೇಕು. ಒಮ್ಮೊಮ್ಮೆ ಕಲಹಗಳು ಏರ್ಪಡುವುದು ಸಹಜ. ಈ ರಾಶಿಯವರಿಗೆ ಸೋದರ ಮತ್ತು ಸೋದರಿಯರ ಜೊತೆ ಕಲಹ ಆಗುವ ಸಾಧ್ಯತೆ ಇದೆ.

ಆದ್ದರಿಂದ ಈ ತಿಂಗಳಲ್ಲಿ ಸ್ವಲ್ಪ ಮಾತುಗಳನ್ನು ಕಡಿಮೆ ಆಡುವುದು ಒಳ್ಳೆಯದು. ಹಾಗೆಯೇ ಪ್ರಯಾಣ ಮಾಡುವಾಗ ಸ್ವಲ್ಪ ಹುಷಾರಾಗಿ ಇರಬೇಕು. ಎಲ್ಲಾದರೂ ಯಾತ್ರೆಗೆ ಹೊರಟರೂ ಸಹ ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು. ಈ ರಾಶಿಯವರು ಬಹಳ ಕಷ್ಟಪಟ್ಟು ಸಂಪಾದನೆ ಮಾಡುತ್ತಾರೆ. ಖರ್ಚುಗಳನ್ನು ಸ್ವಲ್ಪ ಕಡಿಮೆ ಮಾಡುತ್ತಾ ಹೋಗಬೇಕು. ಇದರಿಂದ ಉಳಿತಾಯ ಆಗಿ ಉತ್ತಮವಾದ ಲಾಭ ಆಗುತ್ತದೆ. ಸ್ವಲ್ಪ ಹೆಚ್ಚಿನ ಮಟ್ಟಿಗೆ ಸಮಾಧಾನದಿಂದ ಇರುವುದು ಒಳ್ಳೆಯದು. ಬೇರೆಯವರ ಜೊತೆ ಕಲಹ ಒಳ್ಳೆಯದಲ್ಲ.

ಮದುವೆ ಆಗದೇ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಇದು ಅವರಿಗೆ ಬಹಳ ಒಳ್ಳೆಯ ಕಾಲ. ಹಾಗೆಯೇ ಉದ್ಯೋಗದಲ್ಲಿ ಇನ್ನೂ ಹೆಚ್ಚು ಪರಿಶ್ರಮ ಹಾಕಿದರೆ ಇನ್ನೂ ಒಳ್ಳೆಯ ಲಾಭ ಪಡೆಯಬಹುದು. ಕೆಲವು ಬೇಡವಾದ ವಿಚಾರಗಳಿಂದ ದೂರ ಇರುವುದು ಒಳ್ಳೆಯದು. ಹಾಗೆಯೇ ಬೇರೆಯವರ ವ್ಯವಹಾರಗಳಿಗೆ ಕೈ ಹಾಕದೇ ಇರುವುದು ಒಳಿತು. ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಈ ರಾಶಿಯವರು ನವಗ್ರಹ ಶಾಂತಿಯನ್ನು ಮಾಡಿಸಬೇಕು. ಏಕೆಂದರೆ ಪಂಚಮ ಶನಿದೋಷ ಆಗಬೇಕು. ಇದರಿಂದ ಎಲ್ಲಾ ಶುಭ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತವೆ.

By admin

Leave a Reply

Your email address will not be published.