Hanuman: ಹನುಮಂತ ಇಷ್ಟ ಪಡುವಂತಹ ನಾಲ್ಕು ಅದೃಷ್ಟವಂತ ರಾಶಿ ಅವರು ಯಾರೆಲ್ಲ ಗೊತ್ತಾ?

Astrology ಕಲಿಯುಗದಲ್ಲೂ ಕೂಡ ಭಕ್ತರ ಕೋರಿಕೆಯನ್ನು ಈಡೇರಿಸುವಂತಹ ದೇವರಾಗಿರುವಂತಹ ಹನುಮಾನ್(Hanuman) ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಷ್ಟಪಡುವಂತಹ ನಾಲ್ಕು ರಾಶಿಗಳ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ತಿಳಿಸಲು ಹೊರಟಿದ್ದೇವೆ. ಹಾಗಿದ್ರೆ ಬನ್ನಿ ಹನುಮಂತನಿಗೆ ಇಷ್ಟವಾಗಿರುವಂತಹ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

ಮೇಷ ರಾಶಿ: ಹನುಮನ ಇಷ್ಟವಾದ ರಾಶಿಗಳಲ್ಲಿ ಮೇಷ ರಾಶಿ ಕೂಡ ಒಂದಾಗಿದ್ದು ಇವರು ತಮ್ಮ ಬುದ್ಧಿವಂತಿಕೆ ಹಾಗೂ ಕೌಶಲ್ಯದಿಂದಾಗಿ ಸಮಾಜದಲ್ಲಿ ಆದಾಯವನ್ನು ಗಳಿಸುವಂತಹ ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿದು ಬರುತ್ತದೆ. ಪ್ರತಿ ಮಂಗಳವಾರ ದಿನದಂದು ಹನುಮಂತನ ಪೂಜೆ ಮಾಡುವ ಮೂಲಕ ಆರ್ಥಿಕ ವಿಕಟನ್ನು ಎದುರಿಸುವ ಯಾವುದೇ ತಾಪತ್ರಯ ಇವರಿಗೆ ಇರುವುದಿಲ್ಲ. ಸಿಂಹ ರಾಶಿ: ಹನುಮನ ಅನುಗ್ರಹದಿಂದಾಗಿ ನೀವು ನಿಮ್ಮ ಜೀವನದಲ್ಲಿ ಬರುವಂತಹ ಪ್ರತಿಯೊಂದು ಸಮಸ್ಯೆಗಳಿಂದಲೂ ಕೂಡ ತಪ್ಪಿಸಿಕೊಳ್ಳಬಹುದಾಗಿದೆ. ಜನ್ಮತಹ ಹನುಮನ ಅನುಗ್ರಹದಿಂದಾಗಿ ನಾಯಕತ್ವದ ಗುಣ ನಿಮ್ಮಲ್ಲಿ ಅನುರಕ್ತವಾಗಿರುತ್ತದೆ ಹೀಗಾಗಿ ಯಾವುದೇ ಕೆಲಸವನ್ನು ಕೂಡ ಮುನ್ನಡೆಸಿ ಜಯಗಳಿಸಬಹುದಾದಂತಹ ಸಾಮರ್ಥ್ಯ ನಿಮ್ಮಲ್ಲಿ ಇರುತ್ತದೆ.

ವೃಶ್ಚಿಕ ರಾಶಿ: ಹನುಮನ ಆಶೀರ್ವಾದದಿಂದಾಗಿ ವೃಶ್ಚಿಕ ರಾಶಿಯವರು ಮಾಡುವಂತಹ ಬಹುತೇಕ ಎಲ್ಲಾ ಕಾರ್ಯಗಳಲ್ಲಿ ಕೂಡ ಯಶಸ್ವಿಯಾಗುತ್ತಾರೆ. ಹನುಮನ ನಿರಂತರ ಪೂಜೆಯಿಂದಾಗಿ ವೃಶ್ಚಿಕ ರಾಶಿಯವರು ತಮ್ಮ ಜೀವನದಲ್ಲಿ ಸಾಕಷ್ಟು ಲಾಭವನ್ನು ಆತನ ಕೃಪೆಯಿಂದಾಗಿ ಪಡೆಯುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ವೃಶ್ಚಿಕ ರಾಶಿಯವರು ಹನುಮನ ಕೃಪಾಕಟಾಕ್ಷಕ್ಕೆ ಒಳಗಾಗಿರುವಂತಹ ಅದೃಷ್ಟವಂತರು.

ಕುಂಭ ರಾಶಿ: ಕುಂಭ ರಾಶಿಯವರು ವಾಯುಪುತ್ರನ ಅನುಗ್ರಹದಿಂದಾಗಿ ಮಾಡುವಂತಹ ಎಲ್ಲಾ ಕೆಲಸಗಳಲ್ಲಿ ಕೂಡ ಜಯವನ್ನು ಗಳಿಸುತ್ತಾರೆ ಹಾಗೂ ಆರ್ಥಿಕವಾಗಿ ಕೂಡ ಯಾವುದೇ ಸಮಸ್ಯೆ ಅವರನ್ನು ಕಾಡುವುದಿಲ್ಲ. ನಿಯಮಿತವಾಗಿ ಹನುಮಂತನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿದರೆ ಸಾಕು ನಿಮ್ಮ ಎಲ್ಲ ಸಮಸ್ಯೆಗಳು ದೂರವಾಗುತ್ತದೆ.

Leave a Comment

error: Content is protected !!