ಎಷ್ಟೇ ಸಾಲ ಇದ್ದರೂ ತೀರುತ್ತದೆ, ಯಾವುದಾದರೂ ಒಂದು ದಿನ ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಇದನ್ನು ಅರ್ಪಿಸಿರಿ ಸಾಕು

ನಮ್ಮ ಜೀವನದಲ್ಲಿ ನಾವು ಎಷ್ಟೇ ಶ್ರೀಮಂತರಾಗಿದ್ದರು ಕೂಡ ಕೆಲವೊಮ್ಮೆ ನಾವು ಸಾಲದ ಸುಳಿಯಲ್ಲಿ ಬಿದ್ದಿರುತ್ತೇವೆ. ಅದನ್ನು ತೀರಿಸಲು ತುಂಬಾ ಒದ್ದಾಟದ ಜೀವನವನ್ನು ನಾವು ಎದುರಿಸುತ್ತೇವೆ ಹಾಗೂ ಅದರ ಅನುಭವ ಪಡೆದಿದ್ದೇವೆ. ಇನ್ನು ನಿಮ್ಮ ಜೀವನದ ಮೇಲೆ ಸಾಲ ಹಾಗೂ ಋಣದ ಭಾಗ್ಯ ಇದ್ದರೆ ನಮ್ಮ ಜೀವನವೂ ತುಂಬಾ ಕಷ್ಟಕರವಾಗಿ ಇರುವುದು ಹಾಗಾಗಿ ಸಾಲದಿಂದ ಮುಕ್ತಿ ಹೊಂದಿದ ಜೀವನವೇ ಸುಖ-ಶಾಂತಿ-ನೆಮ್ಮದಿ ಕೂಡಿದ ಜೀವನವಾಗಿರುತ್ತದೆ. ನಾವು ಸಾಲವನ್ನು ಪಡೆಯುವುದು ಎಷ್ಟು ಸುಲಭವೋ ಹಾಗೆಯೇ ಅದನ್ನು ತೀರಿಸುವುದು ತುಂಬಾ ಕಠಿಣ ಕೆಲಸ ಎಷ್ಟೋ ಸಲ ನಾವು ತೆಗೆದುಕೊಂಡ ಸಾಲವನ್ನು ಮರುಪಾವತಿ ಮಾಡಲು ತುಂಬಾನೇ ಹೆಣಗಾಟ ಮಾಡಿರುತ್ತೇವೆ.

ಯಾವ ವ್ಯಕ್ತಿಯು ಸಾಲದ ಸುಳಿಯಲ್ಲಿ ಬಿದ್ದಿರುತ್ತಾನೋ ಅವನ ಜೀವನವು ತುಂಬಾ ಚಿಂತನೆಯಿಂದ ಕೂಡಿರುತ್ತದೆ. ಹಾಗೂ ಆತನ ಕುಟುಂಬಗಳು ಕೂಡ ಹಲವಾರು ಕಷ್ಟಗಳಿಂದ ಕೂಡಿರುವುದ್ದನ್ನು ನಾವು ನೋಡುತ್ತೇವೆ. ಈ ಸಾಲದಿಂದ ಮಾನಹಾನಿ ಹಾಗೂ ಕುಟುಂಬದಲ್ಲಿ ಕಲಹಗಳನ್ನು ನಾವು ಎದುರಿಸಬೇಕಾಗುತ್ತದೆ. ಸಾಲದ ಸುಳಿಯಲ್ಲಿ ಎದುರಿಸುತ್ತಿರುವ ವ್ಯಕ್ತಿಯು ತನ್ನ ಕುಟುಂಬಕ್ಕೆ ತುಂಬಾನೇ ಭಾರವಾಗಿ ಇದ್ದೀನಿ ಎನಿಸುತ್ತದೆ. ನಾವು ಸಾಲವನ್ನು ಪಡೆಯುವ ಮುನ್ನ ನಮ್ಮ ಸಮಸ್ಯೆ ಹಾಗೂ ಸಾಲವನ್ನು ಮರುಪಾವತಿ ಮಾಡುವ ಬಗ್ಗೆ ಹಲವಾರು ಬಾರಿ ಯೋಚಿಸುವುದು ಉತ್ತಮ.

ಯಾವುದೇ ಕಾರಣಕ್ಕೂ ನೀವು ಮಂಗಳವಾರ ಹಾಗೂ ಶನಿವಾರ ದಿನದಂದು ಸಾಲವನ್ನು ಪಡೆಯಬಾರದು. ಯಾಕೆಂದರೆ ನೀವು ಪಡೆದ ಸಾಲವನ್ನು ಮರುಪಾವತಿ ಮಾಡಲು ತುಂಬಾ ಕಷ್ಟವಾಗುತ್ತದೆ ಯಾವುದೇ ಕಾರಣಕ್ಕೂ ಶನಿವಾರದ ದಿನ ಪಡೆದ ಸಾಲವನ್ನು ಹಿಂದಿರುಗಿಸಲು ತುಂಬಾ ಕಷ್ಟವಾಗುತ್ತದೆ. ಹಾಗಾಗಿ ಯಾರಿಗೂ ಶನಿವಾರ ದಿನ ಸಾಲ ನೀಡಬೇಡಿ ಹಾಗೂ ಪಡೆಯಬೇಡಿ ಶನಿದೇವನ ಸಂಖ್ಯೆ-8 ಆಗಿದ್ದು. ಎಂಟು ಹದಿನಾರು ಹಾಗೂ ಇಪ್ಪತ್ನಾಲ್ಕು ಈ ತಾರೀಕು ಅಂದು ಸಾಲವನ್ನು ತೆಗೆದುಕೊಳ್ಳಬಾರದು . ಈ ದಿನದಲ್ಲಿ ತೆಗೆದುಕೊಂಡ ಸಾಲ ನಿಮ್ಮ ಜೀವನವನ್ನು ತುಂಬಾ ಕಷ್ಟಕರ ಆಗಿಸುತ್ತದೆ. ಇನ್ನು ಸಾಲದ ಪತ್ರದ ಮೇಲೆ ಕಪ್ಪು ಇಂಕಿನಿಂದ ಯಾವುದೇ ಕಾರಣಕ್ಕೂ ಸಹಿಯನ್ನು ಮಾಡಬಾರದು ಹಾಗೂ ಒಂದು ವೇಳೆ ನೀವು ಸಾಲವನ್ನು ಪಡೆದುಕೊಳ್ಳುವ ಸಂದರ್ಭ ಒದಗಿದಲ್ಲಿ ಸೋಮವಾರ , ಬುಧವಾರ ಹಾಗೂ ಶುಕ್ರವಾರದ ದಿನದಂದು ಸಾಲವನ್ನು ಪಡೆದುಕೊಳ್ಳಿ ಈ ದಿನದಂದು ನೀವು ಪಡೆದ ಸಾಲವನ್ನು ಆದಷ್ಟು ಬೇಗನೆ ತೀರಿಸಬಹುದು.

ನೀವು ಸಾಲವನ್ನು ಪಡೆಯುವಾಗ ಹಾಗೂ ಯಾವುದೇ ಸಾಲದ ಪ್ರತಿಭೆಗೆ ಸಹಿಯನ್ನು ಹಾಕುವಾಗ ನಿಮ್ಮ ಆರಾಧ್ಯ ದೇವ ಶಿವನನ್ನು ಈ ರೀತಿಯಾಗಿ ಬೇಡಿಕೊಳ್ಳಬೇಕು. ಪರಮಾತ್ಮನೇ ಈ ಧನವು ನಿನ್ನದು ಆಗಿರುತ್ತದೆ ಹಾಗಾಗಿ ನಿನ್ನ ನಾಮಸ್ಮರಣೆ ಇಂದ ನಾನು ಹಣವನ್ನು ಎಂದು ತೆಗೆದುಕೊಳ್ಳುತ್ತಿದ್ದೇನೆ ಆದಷ್ಟು ಬೇಗ ಇದನ್ನು ತಿರಿಸುವ ಶಕ್ತಿಯನ್ನು ಕರುಣಿಸು ಎಂದು ಮನಸ್ಪೂರ್ವಕವಾಗಿ ಬೇಡಿಕೊಳ್ಳಬೇಕು.ಅದರಿಂದ ನಿಮಗೆ ಒಳಿತಾಗುವುದು. ಕೆಲವೊಂದು ವ್ಯಕ್ತಿಗಳು ಸಾಲದ ಸುಳಿಯಲ್ಲಿ ತುಂಬಾನೇ ಸಿಕ್ಕಿಹಾಕಿಕೊಂಡು ಕೋರ್ಟ್ ಕಚೇರಿ ಎಂದು ಅಲೆದಾಡುವ ಪರಿಸ್ಥಿತಿ ಒದಗುವುದು ಅಂತಹ ಸ್ಥಿತಿಯಲ್ಲಿ ನೀವಿದ್ದರೆ ಕೆಲವೊಂದು ಉಪಾಯಗಳು ಇಲ್ಲಿವೆ.

ಒಮ್ಮೆ ಸಾಲದ ಸುಳಿಯಲ್ಲಿ ಬಿದ್ದರೆ ಅದರಿಂದ ಹೊರಗೆ ಬರುವುದು ಸುಲಭದ ಮಾತಲ್ಲ ಆದರೂ ತಮ್ಮ ಕಠಿಣ ಪರಿಶ್ರಮದಿಂದ ಆಚೆ ಬರಬಹುದು. ನಮ್ಮ ಹಿಂದೂ ಸಂಪ್ರದಾಯದಲ್ಲಿ ವೀಳ್ಯದೆಲೆಗೆ ತನ್ನದೇ ಆದ ಮಹತ್ವವಿದೆ ಸ್ಕಂದ ಪುರಾಣದಲ್ಲಿ ಸಮುದ್ರ ಮಂಥನದ ಸಮಯದಲ್ಲಿ ಎಲ್ಲಕ್ಕಿಂತ ಮೊದಲು ವೀಳ್ಯದೆಲೆಯ ಉಪಯೋಗವನ್ನು ಮಾಡಿದ್ದರು ಹಾಗಾಗಿ ಅಂದಿನಿಂದ ಎಲ್ಲಾ ಶುಭ ಸಮಾರಂಭಗಳಲ್ಲಿ ವೀಳ್ಯದೆಲೆಯನ್ನು ಉಪಯೋಗಿಸುತ್ತಿದ್ದಾರೆ. ವೀಳ್ಯದೆಲೆಯನ್ನು ಪೂಜಾ ಪರಿಪಾಠ ಹಾಗೂ ಅನೇಕ ಶುಭಸಮಾರಂಭಗಳಿಗೆ ನಾವು ಉಪಯೋಗಿಸುತ್ತೇವೆ ಇನ್ನು ಜ್ಯೋತಿಷ್ಯಶಾಸ್ತ್ರ ಹಾಗೂ ಹಲವಾರು ಪ್ರಕಾರಗಳಲ್ಲಿಯೂ ಕೂಡ ತನ್ನದೇ ಆದ ಮಹತ್ವವನ್ನು ಹೊಂದಿದೆ.

ವೀಳ್ಯದೆಲೆಯು ಬುಧಗ್ರಹದ ಜೊತೆಗೆ ಒಳ್ಳೆಯ ಹೋಲಿಕೆ ಇದ್ದು ನಿಮ್ಮ ಹಣಕಾಸಿನ ಸಮಸ್ಯೆಯನ್ನು ದೂರ ಮಾಡುವುದರಲ್ಲಿ ಎರಡು ಮಾತಿಲ್ಲ ಹಾಗಾಗಿ ನೀವು ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡು ಅದರಿಂದ ಹೊರಬರಲು ಪರದಾಡುತ್ತಿದ್ದರೆ ಎಲ್ಲಾ ಪ್ರಯೋಗಗಳನ್ನು ಮಾಡಿದರು ಕೂಡ ಯಾವುದೇ ಲಾಭವು ಆಗದಿದ್ದರೆ ವೀಳ್ಯದೆಲೆಯ ಉಪಯೋಗವು ನಿಮ್ಮ ಸಾಲಬಾಧೆಯನ್ನು ಕಡಿಮೆಗೊಳಿಸುತ್ತದೆ. ಅದು ಹೇಗೆಂದರೆ ನೀವು ಸ್ವಚ್ಛವಾಗಿರುವ ವೀಳ್ಯದೆಲೆಯನ್ನು ತೆಗೆದುಕೊಂಡು ಅದರ ತೊಟ್ಟು ಮುರಿದು ವೀಳ್ಯದೆಲೆಯ ಮೇಲೆ ಲವಂಗ ಹಾಗೂ ಏಲಕ್ಕಿಯನ್ನು ಮಡಚಿ ಪಾನ್ ರೀತಿಯಲ್ಲಿ ತಯಾರಿಸಿ ಮಂಗಳವಾರ ದಿನ ಸಾಯಂಕಾಲದ ವೇಳೆಯಲ್ಲಿ ಸ್ನಾನಾದಿಗಳನ್ನು ಮುಗಿಸಿ ಸ್ವಚ್ಛವಾದ ಬಟ್ಟೆಯನ್ನು ಧರಿಸಿ ಆಂಜನೇಯ ದೇವಾಲಯಕ್ಕೆ ಹೋಗಿ ಎಲೆಯನ್ನು ಅವರಿಗೆ ನೀಡಿ ಪೂಜೆ ಮಾಡಬೇಕು.

ಹೀಗೆ ನಿರಂತರವಾಗಿ ಪ್ರತಿ ಮೂರು ತಿಂಗಳು ಮಾಡಬೇಕು. ಒಂದುವೇಳೆ ನಿಮಗೆ ಪ್ರತಿ ಮಂಗಳವಾರ ಹೋಗಲು ಅಸಾಧ್ಯವಾದರೆ ನಿಮ್ಮ ಕುಟುಂಬಸ್ಥರಲ್ಲಿ ಬೇರೆ ಯಾರಾದರೂ ಈ ಪ್ರಯೋಗವನ್ನು ಮಾಡಬಹುದು ಆದರೆ ಈ ಮಂಗಳವಾರ ದಿನ ನೀವು ತಮಸ್ಯ ಆಹಾರವನ್ನು ಸೇವನೆಯನ್ನು ಮಾಡಬಾರದು. ಇಲ್ಲಿ ನಿಮ್ಮ ಸಾಲದ ಸುಳಿಯಿಂದ ಆಚೆ ಬರಲು ಮಾರ್ಗವು ಸಿಗುವುದು. ಯಾರು ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ಪೂಜೆ ಮಾಡುತ್ತಾರೋ ಅವರಿಗೆ ಆತನ ಕೃಪೆ ದೊರೆಯುವುದು ಹಾಗೂ ಕಷ್ಟ ಸಹ ದೂರ ಆಗುವುದು.

ಕೆಲವೊಮ್ಮೆ ನಾವು ಸಾಲ ಪಡೆದ ನಂತರವೇ ನಮ್ಮ ಕಷ್ಟಗಳು ಇನ್ನೂ ಹೆಚ್ಚಾಗುವುದು ಯಾವುದೇ ರೀತಿಯ ಆದಾಯ ಕೂಡ ಸಿಗುವುದಿಲ್ಲ ಹಾಗೂ ಸಾಲವನ್ನು ತೀರಿಸಲು ಕೂಡ ಯಾವುದೇ ಮಾರ್ಗವು ನಮಗೆ ಸಿಗುವುದಿಲ್ಲ. ನಿಮ್ಮ ಕೆಲಸ ಕಾರ್ಯಗಳಲ್ಲಿ ತೊಂದರೆ ವ್ಯವಸಾಯ ಹಾಗೂ ನೌಕರಿಯಲ್ಲಿ ಕೂಡ ಯಾವುದಾದರೂ ತೊಂದರೆ ಒದಗುವುದು. ಇಲ್ಲಿ ನಮಗೆ ಸಮಸ್ಯೆಯು ಒಂದೇ ರೀತಿಯಲ್ಲಿ ಬರುವುದಿಲ್ಲ ಹಲವಾರು ಮೂಲಗಳಿಂದ ನಮಗೆ ಬಂದು ಹೋಗುವುದು. ಮನೆಯಲ್ಲಿ ಎಲ್ಲ ಶುಭ ಕಾರ್ಯಗಳಿಗೆ ಅಡಚಣೆ ಉಂಟಾಗುವುದು ನಿಮ್ಮ ಸಂಬಂಧಿಕರು ಕೂಡ ಯಾವುದೇ ರೀತಿಯ ಸಹಾಯವನ್ನು ಮಾಡಲು ಮುಂದೆ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಒಂದು ಚಿಕ್ಕ ಉಪಾಯವನ್ನು ನೀವು ಮಾಡಿಕೊಳ್ಳಿ

ಇಲ್ಲಿಯೂ ಕೂಡ ನೀವು ಒಂದು ಸ್ವಚ್ಛವಾದ ವೀಳ್ಯದೆಲೆಯನ್ನು ತಗೆದುಕೊಂಡು ಅದರ ತೊಟ್ಟನ್ನು ಮುರಿಯಬೇಕು ಹಾಗೂ ವೀಳ್ಯದೆಲೆಯ ಮುಂಭಾಗವನ್ನು ಕೂಡ ಮಾಡಚಬೇಕು ಹಾಗೂ ಹಿಂಭಾಗವನ್ನು ಮುಂಭಾಗಕ್ಕೆ ಬರುವಂತೆ ಮಾಡಚಬೇಕು ಇಲ್ಲಿಯೂ ಕೂಡ 2 ಲವಂಗ ಇಟ್ಟು ಇದನ್ನು ಹರಿಯುತ್ತಿರುವ ನೀರಿನಲ್ಲಿ ತೇಲಿಸಿ ಬೇಡಬೇಕು ಹಾಗೂ ಶಿವನಲ್ಲಿ ಕೈ ಮುಗಿದು ಬೇಡಿಕೊಳ್ಳಬೇಕು ನಮ್ಮ ಜೀವನದಲ್ಲಿ ಬರುವ ಸಂಕಷ್ಟ ಈ ವೀಳ್ಯದೆಲೆಯ. ಜೊತೆಗೆ ಹರಿದು ಹೋಗಲಿ ಎಂದು ಪ್ರಾರ್ಥನೆ ಮಾಡಿಕೊಳ್ಳಬೇಕು. ಹಾಗೆಯೇ ಹರಿಯುವ ನೀರಿನ ಜೊತೆ ನಿಮ್ಮ ಕಷ್ಟ ಹಾಗೂ ತೊಂದರೆಗಳನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಹೋಗುತ್ತದೆ. ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ಸಹ ದೂರ ಆಗುವುದು ನಿಮ್ಮ ಕಾರ್ಯಗಳು ಕೂಡ ಯಶಸ್ಸು ಆಗುವುದು ಹಾಗೂ ನಿಮ್ಮ ಪ್ರತಿಯೊಂದು ಕಾರ್ಯಕ್ಕೆ ಮೂಲಗಳು ಸಹ ಸಿಗುವುದು.

ಇನ್ನೂ ಒಂದು ಉಪಾಯ ಇದೆ ಇದನ್ನು ನಿವಾಗಲೀ ಅಥವಾ ನಿಮ್ಮ ಮನೆಯವರಾಗಲೀ ಇಲ್ಲ ನಿಮ್ಮ ಕುಟುಂಬದವರಾಗಲೀ ಮಾಡಬಹುದು ಆದರೆ ಆಂಜನೇಯ ಸ್ವಾಮಿಯಯನ್ನು ಮಹಿಳೆಯರು ಸ್ಪರ್ಶ ಮಾಡಬಾರದು . ಇದನ್ನು ಮಂಗಳವಾರ ರಾತ್ರಿ ಮಾಡಬೇಕು ನೀವು ಉಪ್ಪನ್ನು ತಿನ್ನಬಾರದು ಹಾಗೂ ಈ ದಿನ ನೀವು ಈರುಳ್ಳಿ ಹಾಗೂ ಬೆಳ್ಳುಳ್ಳಿ ಅನ್ನು ಕೂಡ ತಿನ್ನಬಾರದು ಹಾಗೂ ರಾತ್ರಿ ಸ್ನಾನ ಮುಗಿದ ನಂತರ 11 ಗಂಟೆ ಹಾಗೂ 1 ಗಂಟೆಯ ಒಳಗಡೆ ನೀವು ಈ ಉಪಾಯವನ್ನು ಮಾಡಬೇಕು.

ರಾತ್ರಿ ವೇಳೆ ವಾತಾವರಣ ತುಂಬಾ ಶಾಂತಿಯಿಂದ ಕೂಡಿದ್ದು ನೀವು ದೇವರ ಹತ್ತಿರ ತುಂಬಾ ಸುಲಭವಾಗಿ ಹೊಂದಿಕೊಳ್ಳಬಹುದು. ನೀವು ಆಂಜನೇಯ ಸ್ವಾಮಿ ಫೋಟೋ ಮುಂದೆ ಕುಳಿತು ಕೆಂಪು ಪುಷ್ಪ ಅರ್ಪಿಸಿ 11 ಗಂಟೆಯ ನಂತರ ಹನುಮಾನ್ ಚಲಿಸ ಅನ್ನು ಜಪ ಮಾಡಬೇಕು ಈ ಪ್ರಯೋಗವನ್ನು ನಿಯಮಿತ ರೂಪದಲ್ಲಿ 11 ಮಂಗಳವಾರ ನೀವು ಮಾಡಬೇಕು ಹೀಗೆ ಮಾಡಿದ್ದಲ್ಲಿ ಬೇಗನೆ ನೀವು ಸಾಲದಿಂದ ಮುಕ್ತಿ ಪಡೆಯಬಹುದು. ಪುರುಷರು ಮಂಗಳವಾರ ದಿನ ದಕ್ಷಿಣ ಮೂರ್ತಿ ಆಂಜನೇಯ ಸ್ವಾಮಿ ಗೆ ಸಿಂಧೂರವನ್ನು ಅರ್ಪಿಸಬೇಕು ಹಾಗೂ ಮಹಿಳೆಯರು ಕೆಂಪು ಬಣ್ಣದ ಪುಷ್ಪ ಅನ್ನು ಅರ್ಪಿಸಬೇಕು. ಮನೆಯಲ್ಲಿ ಮುಂಜಾನೆ ಮತ್ತು ಸಾಯಂಕಾಲ ಶಂಖವನ್ನು ಊದಬೇಕು ಹಾಗೂ ದೇವರಲ್ಲಿ ಸಾಲದ ಋಣ ಇಂದ ಮುಕ್ತಿಯನ್ನು ಹೊಂದಲು ಪ್ರಾರ್ಥನೆ ಮಾಡಬೇಕು.

ದಿನವೂ ಋಣಮೋಚನ ಸಾಲಬಾಧೆಯಿಂದ ತಪ್ಪಿಸಿಕೊಳ್ಳಲು ಮಂಗಳ ಜಪವನ್ನು ಕೂಡ ಮಾಡಬಹುದು. ಹಾಗೂ ದಿನವೂ ಕನಕದಾಸರ ಸ್ತೋತ್ರದ ಪಾರಾಯಣದಿಂದ ಕೂಡ ನೀವು ಸಮಸ್ಯೆ ಇಂದ ಮುಕ್ತಿ ಪಡೆಯಬಹುದು ಈ ಸುಲಭ ಉಪಾಯದ ಜೊತೆಗೆ ಶ್ರದ್ಧೆ ಭಕ್ತಿ ಹಾಗೂ ಪರಿಶ್ರಮ ಕೂಡ ಬೇಕು ಇದರಿಂದ ನೀವು ಸಾಲಬಾಧೆಯಿಂದ ಮುಕ್ತಿ ಹೊಂದಬಹುದು. ಆದಷ್ಟು ‌ಮಂಗಳವಾರ ದಿನ ಸಾಲವನ್ನು ತೀರಿಸಲು ಪ್ರಯತ್ನ ಮಾಡಿ ಒಳ್ಳೆಯದು.

Leave a Comment

error: Content is protected !!