Anushka Sharma: ವಿರಾಟ್ ಕೊಹ್ಲಿ ಸೆಂಚುರಿಗೆ ಅನುಷ್ಕಾ ಶರ್ಮಾ ಧರಿಸಿರುವ ಈ ಲಾಕೆಟ್ ಕಾರಣ! ಏನಿದೆ ಗೊತ್ತಾ ಆ ಲಾಕೆಟ್ ನಲ್ಲಿ?

Virat Kohli 2019 ರಿಂದ ವಿರಾಟ್ ಕೊಹ್ಲಿ ಅವರ ಬ್ಯಾಟಿನಿಂದ ಯಾವುದೇ ಶತಕಗಳು ಬಂದಿರಲಿಲ್ಲ. ವಿರಾಟ್ ಕೊಹ್ಲಿ ಸಂಪೂರ್ಣವಾಗಿ ಕ್ರಿಕೆಟ್ ಕ್ಷೇತ್ರದಲ್ಲಿ ನೆಲಕಚ್ಚಿದ್ದರು. ನಂತರ ಸಾಕಷ್ಟು ತೀರ್ಥಕ್ಷೇತ್ರ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದ ನಂತರ ಏಷ್ಯಾ ಕಪ್(Asia Cup) ಹಾಗೂ ಟಿ20 ವಿಶ್ವಕಪ್ ನಲ್ಲಿ ಮರಳಿ ತಮ್ಮ ಫಾರ್ಮ್ ಗೆ ವಿರಾಟ್ ಕೊಹ್ಲಿ(Virat Kohli) ಅವರು ಬರುತ್ತಾರೆ.

ಇನ್ನು ಸಾಕಷ್ಟು ವರ್ಷಗಳಿಂದ ಟೆಸ್ಟ್ನಲ್ಲಿ ಯಾವುದೇ ಸೆಂಚುರಿ ವಿರಾಟ್ ಕೊಹ್ಲಿ ಅವರಿಂದ ದಾಖಲಾಗಿರಲಿಲ್ಲ. ಆದರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚೆಗಷ್ಟೇ ತಮ್ಮ ಪತ್ನಿ ಅನುಷ್ಕಾ ಶರ್ಮ(Anushka Sharma) ಅವರ ಜೊತೆಗೆ ವಿರಾಟ್ ಕೊಹ್ಲಿ ರವರು ನೀಮ್ ಕರೋಲಿ ಬಾಬಾ ಆಶ್ರಮ(Neem Karoli Baba) ಹಾಗೂ ಮಹಾಕಾಲೇಶ್ವರ(MahaKaleshwara Temple) ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಸಲ್ಲಿಸಿ ಬಂದಿದ್ದರು. ಇದಾದ ನಂತರ ಈಗ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ 75 ಶತಕವನ್ನು(Virat Kohli 75th Century) ಕೂಡ ಬಾರಿಸಿದ್ದಾರೆ.

ಕ್ರಿಕೆಟ್ ಪಂಡಿತರು ಇದು ವಿರಾಟ್ ಕೊಹ್ಲಿ(Virat Kohli) ಅವರ ಪರಿಶ್ರಮಕ್ಕೆ ಸಿಕ್ಕಂತಹ ಫಲ ಎಂಬುದಾಗಿ ವಾದಿಸುತ್ತಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮಾತ್ರ ಇದಕ್ಕೆಲ್ಲ ಕಾರಣ ಅನುಷ್ಕಾ ಶರ್ಮ ಎಂಬುದಾಗಿ ವಾದಿಸುತ್ತಿದ್ದಾರೆ. ಅನುಷ್ಕಾ ಶರ್ಮ(Anushak Sharma) ಎನ್ನುವುದಕ್ಕಿಂತ ಹೆಚ್ಚಾಗಿ ಅನುಷ್ಕಾ ಶರ್ಮ ಅವರು ತಮ್ಮ ಕೊರಳಿನಲ್ಲಿ ಧರಿಸಿರುವ ದೇವರ ಲಾಕೇಟ್ ಇದಕ್ಕೆ ಕಾರಣ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.

ಹೌದು ಮಿತ್ರರೇ ಅನುಷ್ಕಾ ಶರ್ಮಾ ಅವರ ಕೊರಳಿನಲ್ಲಿ ಇರುವಂತಹ ಹನುಮಾನ್(Hanuman) ದೇವರ ಲಾಕೇಟ್ ಇದಕ್ಕೆಲ್ಲ ಕಾರಣ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳುತ್ತಿದ್ದು ಅವರ ಫೋಟೋ ಕೂಡ ವೈರಲಾಗುತ್ತಿದೆ. ಆ ಹನುಮಾನ್ ದೇವರ ಲಾಕೆಟ್ ನಲ್ಲಿ ಹ ಹನುವತೇ ನಮಃ ಎಂದು ಹಿಂದಿಯಲ್ಲಿ ಬರೆಯಲಾಗಿದ್ದು ಎಲ್ಲಾ ಕಡೆ ವಿರಾಟ್ ಕೊಹ್ಲಿ(Virat Kohli) ದಂಪತಿಗಳ ದೈವಿಕ ಭಕ್ತಿಯ ಕುರಿತಂತೆ ಗುಣಗಾನ ನಡೆಯುತ್ತಿದೆ.

Leave a Comment

error: Content is protected !!